ಐಶ್ವರ್ಯ ರೈ ಅವರನ್ನು ಮೀರಿಸುವ ಸೌಂದರ್ಯ.. ಕೋಟಿ ಕೋಟಿ ಆಸ್ತಿ, ನಟನೆ ಬಿಟ್ಟು ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಸನ್ಯಾಸತ್ವ ಸ್ವೀಕರಿಸಿದ ಸ್ಟಾರ್‌ ನಟಿ!

Barkha Madan: ಸಿನಿಮಾ ಇಂಡಸ್ಟ್ರಿಯಲ್ಲಿ ಜನರು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಎಂಟ್ರಿ ಕೊಡುತ್ತಾರೆ, ಸಾವಿರದಲ್ಲಿ ಒಬ್ಬರಿಗೋ ಅಥವಾ ಇಬ್ಬರಿಗೋ ಅಷ್ಟೆ ಚ್ಯಾನ್ಸ್‌ ಸಿಗುತ್ತದೆ. ಹೀಗೆ ಚ್ಯಾನ್ಸ್‌ ಸಿಕ್ಕಾವರಲ್ಲಿ ಗೆಲ್ಲುವವರ ಸಂಖ್ಯೆ ಕೂಡ ತುಂಬಾ ಕಡಿಮೆ. ಹೀಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಟ್‌ ಆದ ನಂತರವೂ ಕೂಡ ಕೆಲವರು ಅದ್ಯಾಕೋ ಏನೋ ಸಿನಿಮಾ ರಂಗವನ್ನು ತೊರೆಯುವ ನಿರ್ಧಾರಕ್ಕೆ ಬರುತ್ತಾರೆ, ಹೀಗೆ ಸಿನಿಮಾ ಇಂಡಸ್ಟ್ರಿ ಹಾಗೂ ತನ್ನ ಕೋಟಿ ಕೋಟಿ ಆಸ್ತಿ ತೊರೆದು ನಟಿಯೊಬ್ಬರು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಅಷ್ಟಕ್ಕೂ ಯಾರು ಆ ನಟಿ ತಿಳಿಯಲು ಮುಂದೆ ಓದಿ...  

Written by - Zee Kannada News Desk | Last Updated : Jan 22, 2025, 01:01 PM IST
  • ಸಿನಿಮಾ ಇಂಡಸ್ಟ್ರಿಯಲ್ಲಿ ಜನರು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಎಂಟ್ರಿ ಕೊಡುತ್ತಾರೆ.
  • ಸಿನಿಮಾ ಇಂಡಸ್ಟ್ರಿ ಹಾಗೂ ತನ್ನ ಕೋಟಿ ಕೋಟಿ ಆಸ್ತಿ ತೊರೆದು ನಟಿಯೊಬ್ಬರು ಸನ್ಯಾಸತ್ವ ಸ್ವೀಕರಿಸಿದ್ದಾರೆ.
  • ಐಶ್ವರ್ಯ ರೈ ಅವರಿಗೆ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಈ ನಟಿ ಕಾಂಪಿಟೇಶನ್‌ ಕೊಟ್ಟಿದ್ದರು.
ಐಶ್ವರ್ಯ ರೈ ಅವರನ್ನು ಮೀರಿಸುವ ಸೌಂದರ್ಯ.. ಕೋಟಿ ಕೋಟಿ ಆಸ್ತಿ, ನಟನೆ ಬಿಟ್ಟು ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಸನ್ಯಾಸತ್ವ ಸ್ವೀಕರಿಸಿದ ಸ್ಟಾರ್‌ ನಟಿ! title=

Barkha Madan: ಸಿನಿಮಾ ಇಂಡಸ್ಟ್ರಿಯಲ್ಲಿ ಜನರು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಎಂಟ್ರಿ ಕೊಡುತ್ತಾರೆ, ಸಾವಿರದಲ್ಲಿ ಒಬ್ಬರಿಗೋ ಅಥವಾ ಇಬ್ಬರಿಗೋ ಅಷ್ಟೆ ಚ್ಯಾನ್ಸ್‌ ಸಿಗುತ್ತದೆ. ಹೀಗೆ ಚ್ಯಾನ್ಸ್‌ ಸಿಕ್ಕಾವರಲ್ಲಿ ಗೆಲ್ಲುವವರ ಸಂಖ್ಯೆ ಕೂಡ ತುಂಬಾ ಕಡಿಮೆ. ಹೀಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಟ್‌ ಆದ ನಂತರವೂ ಕೂಡ ಕೆಲವರು ಅದ್ಯಾಕೋ ಏನೋ ಸಿನಿಮಾ ರಂಗವನ್ನು ತೊರೆಯುವ ನಿರ್ಧಾರಕ್ಕೆ ಬರುತ್ತಾರೆ, ಹೀಗೆ ಸಿನಿಮಾ ಇಂಡಸ್ಟ್ರಿ ಹಾಗೂ ತನ್ನ ಕೋಟಿ ಕೋಟಿ ಆಸ್ತಿ ತೊರೆದು ನಟಿಯೊಬ್ಬರು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಅಷ್ಟಕ್ಕೂ ಯಾರು ಆ ನಟಿ ತಿಳಿಯಲು ಮುಂದೆ ಓದಿ...

ನಟಿ ಐಶ್ವರ್ಯ ರೈ ಅವರು ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಗೆದ್ದು ವಿಶ್ವದಾದ್ಯಂತ ಹೆಸರು ಗಳಿಸಿಕೊಂಡವರು, ಇಂದಿಗೂ ಕೂಡ ಐಶ್ವರ್ಯ ರೈ ಅವರನ್ನು ಮಾಜಿ ವಿಶ್ವ ಸುಂದರಿ ಎಂದೆ ಗುರುತಿಸಲಾಗುತ್ತದೆ. ಇಂತಹ ಐಶ್ವರ್ಯ ರೈ ಅವರಿಗೆ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಈ ನಟಿ ಕಾಂಪಿಟೇಶನ್‌ ಕೊಟ್ಟಿದ್ದರು. ಐಶ್ವರ್ಯ ರೈ ಅವರಿಗೆ ಸಮನಾದ ಸೌಂದರ್ಯ ಈಕೆಯದ್ದು ಅಂತಲೇ ಹೇಳಬಹುದು. ಮಾಡೆಲ್‌ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ನಂತರ ಸಿನಿಮಾಗಳಲ್ಲಿ ಚ್ಯಾನ್ಸ್‌ ಗಿಟ್ಟಿಸಿಕೊಂಡು ಸ್ಟಾರ್‌ ನಟಿಯಾದಳು.

ಅಷ್ಟಕ್ಕೂ ನಾವು ಹೇಲುತ್ತಿರುವ ನಟಿ ಬೇರಾರು ಅಲ್ಲ, ನಟಿ ಬರ್ಖಾ ಮದನ್‌. ಹೌದು ನಟಿ ಬರ್ಖಾ ಮದನ್‌ ಅವರು ಮಾಡೆಲ್‌ ಆಗಿ ಮಿಸ್‌ ಇಂಡಿಯಾ ಸ್ಪರ್ದೇಯಲ್ಲಿ ಐಶ್ವರ್ಯ ರೈ ಅವರಿಗೆ ಕಾಂಪಿಟೇಶನ್‌ ಕೊಟ್ಟವರು. 

ಪಂಜಾಬ್‌ನಲ್ಲಿ ಜನಿಸಿದ ಬರ್ಖಾ ಮದನ್‌ ಅವರು ಮಾಡೆಲ್‌ ಆಗಿ ತಮ್ಮ ವ್Yತ್ತಿ ಜೀವನವನ್ನು ಪ್ರಾರಂಭಿಸಿದವರು. 1944 ರಲ್ಲಿ ಈಕೆ ಸುಶ್ಮಿತಾ ಸೇನ್‌ ಹಾಗೂ ಐಶ್ವರ್ಯ ರೈ ಅವರೊಂದಿಗೆ ಪೈಪೋಟಿ ನಡೆಸಿ ಸೋತಿದ್ದರಾದರೂ, ಈಕೆಯ ಸೌಂದರ್ಯಕ್ಕೆ ಪಡ್ಡೆ ಹುಡುಗರು ಮನಸೋತಿದ್ದರು, ಆಗಿನ ಕಾಲಕ್ಕೆ ಈಕೆಗೆ ಸಾಲು ಸಾಲು ಸಿನಿಮಾ ಆಫರ್‌ಗಳು ಸಿಕ್ಕಿದ್ದವು. ಬಂದ ಆಫರ್‌ಗಳನ್ನು ಸದುಪಯೋಗ ಪಡಿಸಿಕೊಂಡ ಅವರು ಒಳ್ಳೆಯ ಸಿನಿಮಾಗಲಲ್ಲಿ ನಟಿಸಿ ಸೈ ಎನಿಸಿಕೊಂಡರು.

ಹೀಗೆ ಸಾಲು ಸಾಲು ಸಿನಿಮಾ ಅವಕಾಶಗಳ ಜೊತೆಗೆ ತಮ್ಮ ವೃತ್ತಿ ಜೀವನದ ಉತ್ತುಂಗಲ್ಲಿರುವಾಗಲೇ ಈ ನಟಿ ಬೌದ್ದ ಧರ್ಮವನ್ನು ಆಯ್ದುಕೊಂಡು ಸನ್ಯಾಸಿ ಆದಳು. ಈಕೆ ಬೌದ್ಧ ಧರ್ಮದಲ್ಲಿ ಹುಟ್ಟಲಿಲ್ಲ, ಆದರೂ ಕೂಡ ಬೌದ್ಧ ಧರ್ಮ ಈಕೆಯನ್ನು ಕೈ ಬೀಸಿ ತನ್ನತ್ತ ಕರೆದಿತ್ತು, ಹೀಗೆ ನಟಿ ಬರ್ಖಾ ಬೌದ್ದ ಧರ್ಮವನ್ನು ಆಳವಾಗಿ ಪಾಲಿಸಲು ಆರಂಭಿಸಿದರು. 2012 ನಟಿ ಬೌದ್ಧ ಸನ್ಯಾಸತ್ವ ಸ್ವೀಕರಿಸಿದರು. 

ಬೌದ್ಧ ಧರ್ಮದಲ್ಲಿ ಸನ್ಯಾಸತ್ವ ಸ್ವೀಕರಿಸಿದ ನಂತರ ನಟಿ ಗ್ಯಾಲ್ವೆನ್‌ ಸ್ಯಾಮ್ಟೆನ್‌ ಎMಬ ಹೆಸರನ್ನು ಪಡೆದರು. ಹೀಗೆ ನಟಿ ತನ್ನ ಹೆಸರು, ಪ್ರತಿಷ್ಟೆ, ಕುಟುಂಬ ಆಸ್ತಿ ಅಂತಸ್ತು ಎಲ್ಲರವನ್ನು ಬಿಟ್ಟು ಬೌದ್ದ ಧರ್ಮದ ಸನ್ಯಾಸತ್ವ ಸ್ವೀಕರಿಸಿದರು.

Trending News