ಸ್ಯಾಂಡಲ್‌ವುಡ್‌ಗೆ ಕುಂಭಮೇಳ ಸುಂದರಿ ಎಂಟ್ರಿ..! ಶಿವಣ್ಣ ಜೊತೆ ಮೊನಾಲಿಸಾ ನಟನೆ, ಸಿನಿಮಾ ಯಾವುದು ಗೊತ್ತೆ..?

Mahakumbh viral girl : ಪ್ರಪಂಚದಾದ್ಯಂತದ ಶಿವಭಕ್ತರು ಮಹಾ ಕುಂಭಮೇಳಕ್ಕೆ ಸಾಕ್ಷಿಯಾಗಿದ್ದಾರೆ.. ಇಲ್ಲಿ ಜನರು ವಿವಿಧ ಸಾಧು, ಸಂತರ ದರ್ಶನ ಪಡೆಯುತ್ತಿದ್ದಾರೆ. ಅದೇ ರೀತಿ ರುದ್ರಾಕ್ಷಿ ಮಾಲೆಯನ್ನು ಮಾರುತ್ತಿದ್ದ ಯುವತಿಯೊಬ್ಬಳ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದೀಗ ಸೋಷಿಯಲ್‌ ಮೀಡಿಯಾ ಸೆನ್ಸೆಷನ್‌ ಆಗಿದ್ದಾಳೆ.. 

Written by - Krishna N K | Last Updated : Jan 22, 2025, 11:20 AM IST
    • ಪ್ರಪಂಚದಾದ್ಯಂತದ ಶಿವಭಕ್ತರು ಮಹಾ ಕುಂಭಮೇಳಕ್ಕೆ ಸಾಕ್ಷಿಯಾಗಿದ್ದಾರೆ.
    • ರುದ್ರಾಕ್ಷಿ ಮಾಲೆಯನ್ನು ಮಾರುತ್ತಿದ್ದ ಯುವತಿಯೊಬ್ಬಳ ಸಖತ್‌ ವೈರಲ್‌ ಆಗಿದ್ದಾಳೆ
    • ಶಿವರಾಜ್‌ಕುಮಾರ್‌ ನಟನೆಯ RC16 ರಲ್ಲಿ ಮೊನಾಲಿಸಾ ನಟನೆ
ಸ್ಯಾಂಡಲ್‌ವುಡ್‌ಗೆ ಕುಂಭಮೇಳ ಸುಂದರಿ ಎಂಟ್ರಿ..! ಶಿವಣ್ಣ ಜೊತೆ ಮೊನಾಲಿಸಾ ನಟನೆ, ಸಿನಿಮಾ ಯಾವುದು ಗೊತ್ತೆ..? title=

Mahakumbh Monalisa : ಮಹಾ ಕುಂಭಮೇಳದಲ್ಲಿ ಜನ ಸಾಮಾನ್ಯರಿಂದ ಹಿಡಿದು ಸಂತರ ತನಕ ಜನ ಸಾಗರ ಕಿಕ್ಕಿರಿದು ತುಂಬಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವಳಿ ಸಂಗಮದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿ ಶಿವನ ಭಕ್ತಿಯಲ್ಲಿ ಮುಳುಗಿದ್ದಾರೆ. ಇದರ ನಡುವೆ ಮೋನಾಲಿಸಾ ಎನ್ನುವ ಯುವತಿ ತನ್ನ ಸೌಂದರ್ಯದಿಂದ ಇಂಟರ್‌ನೆಟ್‌ನಲ್ಲಿ ಜನರ ಗಮನ ಸೆಳೆಯುತ್ತಿದ್ದಾರೆ.

ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸಾವಿರಾರು ಸಾಧು-ಸಂತರ ನಡುವೆ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಯುವತಿ ತನ್ನ ಸೌಂದರ್ಯ ಮತ್ತು ಕಣ್ಣುಗಳಿಂದ ನೆಟ್ಟಿಗರ ಗಮನ ಸೆಳೆಯುತ್ತಿದ್ದಾಳೆ. ಅಲ್ಲದೆ, ಈಕೆಗೆ ಇದೀಗ ಬಾಲಿವುಡ್‌ನಿಂದಲೂ ಆಫರ್‌ ಬರುತ್ತಿದ್ದೆ ಎನ್ನುವ ಸುದ್ದಿಗಳು ಪ್ರಸಾರವಾಗುತ್ತಿವೆ.. ಇದರ ನಡುವೆ ಸ್ಯಾಂಡಲ್‌ವುಡ್‌ಗೂ ಮೊನಾಲಿಸಾ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ..

ಇದನ್ನೂ ಓದಿ:‘ರಾಯರು ಬಂದರು ಮಾವನ ಮನೆಗೆ’ ಸಿನಿಮಾದಲ್ಲಿʼದಾದಾʼರ ಎವರ್ ಗ್ರೀನ್ ನಟನೆ; ಇದು ʼಆಪ್ತ-ಮಿತ್ರʼ ಜೋಡಿಯ ಮೋಡಿ!!

ಹೌದು... ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಿಂದ ಸೋಶಿಯಲ್​​ ಮೀಡಿಯಾದಲ್ಲಿ ಟ್ರೆಂಡ್‌ ಆಗಿರುವ ಮೊನಾಲಿಸಾಗೆ ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ ಎನ್ನಲಾಗಿದೆ. ಡಾ. ಶಿವರಾಜ್​ಕುಮಾರ್​ ಅವರ ಮುಂಬರುವ ಸಿನಿಮಾದಲ್ಲಿ ಈ ನೈಜ ಸುಂದರಿ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಎನ್ನಲಾಗಿದೆ..

ತೆಲುಗು ಸಿನಿಮಾದಲ್ಲಿ ಮೊನಾಲಿಸಾ ಕಾಣಿಸಿಕೊಳ್ಳುತ್ತಾಳೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮಧ್ಯಪ್ರದೇಶದ ಇಂದೋರ್‌ ಈ ಮೋನಾಲಿಸಾ ರಾಮ್ ಚರಣ್, ಶಿವರಾಜ್​​​ಕುಮಾರ್ ನಟನೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಮಾಹಿತಿ ಇದೆ.​ ಬುಚ್ಚಿ ಬಾಬು ಸನಾ ನಿರ್ದೇಶನದ ಆರ್‌ಸಿ 16 ಚಿತ್ರದಲ್ಲಿ ರಾಮ್ ಚರಣ್ ನಾಯಕ ಮತ್ತು ಜಾನ್ವಿ ಕಪೂರ್ ಈಗಾಗಲೇ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ. ಇದೀಗ ಮೊನಾಲಿಸಾ ಹೆಸರು ಕೇಳಿ ಬರುತ್ತಿದೆ..

ಇದನ್ನೂ ಓದಿ:ಮಂಚದ ಮೇಲೆ ನಿವೇದಿತಾ ಗೌಡ ಹಾಟ್ ಪೋಸ್! ಬೆಡ್‌ ರೂಮ್‌ ವಿಡಿಯೋ ಸಖತ್ ವೈರಲ್‌!!

ಈ ಸಿನಿಮಾದ ಎರಡನೇ ಶೆಡ್ಯೂಲ್ ಜನವರಿ 27 ರಿಂದ ಪ್ರಾರಂಭವಾಗಲಿದ್ದು, ದಸರಾಗೆ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಇದರ ನಡುವೆ ವೈರಲ್‌ ಬೆಡಗಿ ಮೊನಾಲಿಸಾ ಈ ಸಿನಿಮಾದಲ್ಲಿ ನಟಿಸುತ್ತಿರುವುದು ಸಖತ್‌ ಸದ್ದು ಮಾಡುತ್ತಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News