Bigg Boss contestant : 'ಬಿಗ್ ಬಾಸ್ 18' ರ ಮಾಜಿ ಸ್ಪರ್ಧಿ ಹಾಗೂ ಖ್ಯಾತ ಕಿರುತೆರೆ ನಟಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಇದೀಗ ಹಾಟ್ ಟಾಪಿಕ್ ಆಗಿದೆ. ಬಾಡಿಗೆಗೆ ಮನೆ ಪಡೆಯಲು ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದು, ಜಾತಿ ಧರ್ಮದ ಪ್ರಶ್ನೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ..
ಖ್ಯಾತ ಟಿವಿ ನಟಿ ಮತ್ತು 'ಬಿಗ್ ಬಾಸ್ 18' ರ ಮಾಜಿ ಸ್ಪರ್ಧಿ ಯಾಮಿನಿ ಮಲ್ಹೋತ್ರಾ ಮುಂಬೈನಲ್ಲಿ ಬಾಡಿಗೆಗೆ ಮನೆ ಪಡೆಯಲು ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ನಟನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ರೆ ಮಾಲೀಕರು ನೇರವಾಗಿ ನಿರಾಕರಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಅಷ್ಟೇ ಅಲ್ಲ, ‘ನೀವು ಹಿಂದೂವೇ ಅಥವಾ ಮುಸಲ್ಮಾನರೇ’ ಎಂಬ ಪ್ರಶ್ನೆಗಳನ್ನೂ ಕೇಳುತ್ತಿದ್ದಾರೆ ಎಂದು ನಟಿ ಆರೋಪ ಮಾಡುತ್ತಿದ್ದಾರೆ. ಮುಂಬೈನಲ್ಲಿ ವಾಸಿಸಲು ಬಾಡಿಗೆಗೆ ಮನೆ ಸಿಗುವುದು ತುಂಬಾ ಕಷ್ಟ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ನಮಸ್ಕಾರ ಗೆಳೆಯರೇ, ನನ್ನ ಕೆಟ್ಟ ಅನುಭವದ ಬಗ್ಗೆ ಹೇಳುತ್ತಿದ್ದೇನೆ. ನಾನು ಮುಂಬೈಯನ್ನು ಪ್ರೀತಿಸುವಷ್ಟು, ಇಲ್ಲಿ ವಾಸಿಸಲು ಮನೆಯನ್ನು ಪಡೆಯುವುದು ತುಂಬಾ ಕಷ್ಟಕರವಾಗಿದೆ. ನಾನು ಹಿಂದೂವೋ ಅಥವಾ ಮುಸಲ್ಮಾನನೋ, ಗುಜರಾತಿಯೋ ಅಥವಾ ಮಾರ್ವಾಡಿಯೋ?.. ಅಂತ ಕೇಳುತ್ತಿದ್ದಾರೆ..
ಅದಕ್ಕಿಂತ ಹೆಚ್ಚಾಗಿ ನಾನು ನಟಿ ಎಂದು ಹೇಳಿದ ತಕ್ಷಣ ನೇರವಾಗಿ ತಿರಸ್ಕರಿಸುತ್ತಾರೆ. ನಾನು ನಟನಾ ಕ್ಷೇತ್ರದಲ್ಲಿ ಕೆಲಸ ಮಾಡುವುದರಿಂದ ಬಾಡಿಗೆಗೆ ಮನೆ ಪಡೆಯಲು ನನಗೆ ಅರ್ಹತೆ ಇಲ್ಲವೇ? 2025ರಲ್ಲೂ ಇಂತಹ ಪ್ರಶ್ನೆಗಳನ್ನು ಕೇಳುತ್ತಿರುವುದು ನನಗೆ ಆಘಾತ ತಂದಿದೆ ಎಂದು ನೋವು ತೋಡಿಕೊಂಡಿದ್ದಾರೆ..
ಸಧ್ಯ ಯಾಮಿನಿ ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದಕ್ಕೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ಹಲವರು ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ ಬಾಡಿಗೆಗೆ ಮನೆ ಪಡೆಯುವುದು ಕೂಡ ಸುಲಭವಲ್ಲ ಎಂದು ಹೇಳುತ್ತಿದ್ದಾರೆ..
ಯಾಮಿನಿ ನಟಿ ಮಾತ್ರವಲ್ಲದೆ ದೆಹಲಿ ಮೂಲದ ದಂತ ವೈದ್ಯೆಯೂ ಹೌದು. 'ಮೈ ತೇರಿ ತೂ ಮೇರಾ', 'ಗಮ್ ಹೈ ಕಿಸಿ ಕೆ ಪ್ಯಾರ್ ಮೇ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದಲ್ಲದೇ ತೆಲುಗಿನ ‘ಚುಟ್ಟಲಬ್ಬಾಯಿ’ ಚಿತ್ರದಲ್ಲೂ ನಟಿಸಿದ್ದಾರೆ. ಯಾಮಿನಿ 'ಬಿಗ್ ಬಾಸ್ 18' ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು.. ಆದರೆ ಕೆಲವೇ ವಾರಗಳಲ್ಲಿ ಮನೆ ಬಿಟ್ಟು ಹೊರಬಂದರು..