6, 4, 4, 6, 6...ಅಬುದಾಬಿಯಲ್ಲಿ ರನ್ ಗಳ ಸುರಿ ಮಳೆ !ನೈಟ್ ರೈಡರ್ಸ್ ಬೌಲರ್ ಬೆವರಿಳಿಸಿದ RCB ಆಟಗಾರ !

ಈ ಆಲ್‌ರೌಂಡರ್ ನನ್ನು ಐಪಿಎಲ್ ಮೆಗಾ ಹರಾಜು 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 1.50 ಕೋಟಿಗೆ ಖರೀದಿಸಿದೆ.  

Written by - Ranjitha R K | Last Updated : Jan 22, 2025, 11:35 AM IST
  • ಐಪಿಎಲ್ 2025 ಆರಂಭಕ್ಕೆ ಇನ್ನೂ ಎರಡು ತಿಂಗಳುಗಳು ಉಳಿದಿವೆ.
  • ವಿಶ್ವದ ವಿವಿಧ ಭಾಗಗಳಲ್ಲಿ ಟಿ20 ಲೀಗ್‌ ಆಯೋಜನೆ
  • ಅಂಕಪಟ್ಟಿಯಲ್ಲಿ ಎಂಐ ಎರಡನೇ ಸ್ಥಾನದಲ್ಲಿದೆ
6, 4, 4, 6, 6...ಅಬುದಾಬಿಯಲ್ಲಿ ರನ್ ಗಳ ಸುರಿ ಮಳೆ !ನೈಟ್ ರೈಡರ್ಸ್ ಬೌಲರ್ ಬೆವರಿಳಿಸಿದ RCB ಆಟಗಾರ ! title=

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಆರಂಭಕ್ಕೆ ಇನ್ನೂ ಎರಡು ತಿಂಗಳುಗಳು ಉಳಿದಿವೆ. ಅದಕ್ಕೂ ಮುನ್ನ ವಿಶ್ವದ ವಿವಿಧ ಭಾಗಗಳಲ್ಲಿ ಟಿ20 ಲೀಗ್‌ಗಳನ್ನು ಆಯೋಜಿಸಲಾಗುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ SA20 ಮತ್ತು ಯುಎಇಯಲ್ಲಿ ಇಂಟರ್ನ್ಯಾಷನಲ್ ಲೀಗ್ T20 ಥ್ರಿಲ್ ನಡೆಯುತ್ತಿದೆ.  ಇಂಟರ್‌ನ್ಯಾಶನಲ್ ಲೀಗ್ ಟಿ20ಯ 14ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ತಮ್ಮ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಈ ಆಲ್‌ರೌಂಡರ್ ನನ್ನು ಐಪಿಎಲ್ ಮೆಗಾ ಹರಾಜು 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 1.50 ಕೋಟಿಗೆ ಖರೀದಿಸಿದೆ.  

ಅಂಕಪಟ್ಟಿಯಲ್ಲಿ ಎಂಐ ಎರಡನೇ ಸ್ಥಾನದಲ್ಲಿದೆ :
ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರೋಚಕ ಪಂದ್ಯದಲ್ಲಿ ಎಂಐ ಎಮಿರೇಟ್ಸ್ ತಂಡ ಅಬುಧಾಬಿ ನೈಟ್ ರೈಡರ್ಸ್ ತಂಡವನ್ನು 28 ರನ್‌ಗಳಿಂದ ಸೋಲಿಸಿತು. ರೊಮಾರಿಯೊ ಶೆಫರ್ಡ್ ಮತ್ತು ನಿಕೋಲಸ್ ಪೂರನ್ ಅವರಂತಹ ಆಟಗಾರರ ಅದ್ಭುತ ಪ್ರದರ್ಶನದಿಂದಾಗಿ, MI ಎಮಿರೇಟ್ಸ್ ಟಾಪ್ 2 ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. 

ಇದನ್ನೂ ಓದಿ : IND vs ENG: ಟೀಂ ಇಂಡಿಯಾ ಈ 5 ಇಂಗ್ಲಿಷ್ ಆಟಗಾರರನ್ನ ಕಟ್ಟಿಹಾಕಬೇಕು; ಇಲ್ಲದಿದ್ರೆ ಗೆಲುವು ಕಷ್ಟ ಕಷ್ಟ..!

ಬೆವರಿ ಬೆಂಡಾದ ಅಲಿಖಾನ್ :
ಎಂಐ ಬ್ಯಾಟಿಂಗ್‌ನ ಕೊನೆಯ ಓವರ್‌ನಲ್ಲಿ ರೊಮಾರಿಯೊ ಶೆಫರ್ಡ್ ರನ್ ಗಳ ಬಿರುಗಾಳಿ ಎಬ್ಬಿಸಿದ್ದಾರೆ. ಈ ಮೂಲಕ ನೈಟ್ರೈಡರ್ಸ್ ಬೌಲರ್ ಅಲಿ ಖಾನ್ ಬೆವರಿಳಿಸಿದ್ದಾರೆ. 20ನೇ ಓವರ್‌ನಲ್ಲಿ ಅಲಿಖಾನ್ ಅವರ ಮೊದಲ ಎಸೆತದಲ್ಲಿ ಅಕಿಲ್ ಹುಸೇನ್ ಒಂದು ರನ್ ಗಳಿಸಿದರು. ಇದಾದ ನಂತರ ಶೆಫರ್ಡ್ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಮೂರನೇ ಮತ್ತು ನಾಲ್ಕನೇ ಎಸೆತಗಳಲ್ಲಿ ಬೌಂಡರಿ ಬಾರಿಸಿದರು.  ಕೊನೆಯ ಎರಡು ಎಸೆತಗಳಲ್ಲಿ ಮತ್ತೆ ಸಿಕ್ಸರ್  ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. 

ಎಂಐ ಎಮಿರೇಟ್ಸ್ ಪರ ನಾಯಕ ನಿಕೋಲಸ್ ಪೂರನ್ 26 ಎಸೆತಗಳಲ್ಲಿ 49 ರನ್ ಗಳಿಸಿದರು. ಮುಹಮ್ಮದ್ ವಾಸಿಮ್ 35 ಎಸೆತಗಳಲ್ಲಿ 38 ರನ್ ಮತ್ತು ಕುಸಲ್ ಪೆರೆರಾ 20 ಎಸೆತಗಳಲ್ಲಿ 23 ರನ್ ಗಳಿಸಿದರು. ಶೆಫರ್ಡ್ ಕೊನೆಯ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿ ತಂಡವನ್ನು ಸವಾಲಿನ ಗುರಿಯತ್ತ ಕೊಂಡೊಯ್ದರು. ಶೆಫರ್ಡ್ 13 ಎಸೆತಗಳಲ್ಲಿ 38 ರನ್ ಗಳಿಸಿದರು. 

ಇದನ್ನೂ ಓದಿ: ನಾಳೆಯಿಂದ ಭಾರತ-ಇಂಗ್ಲೆಂಡ್ ಟಿ20 ಸರಣಿ ಆರಂಭ? ಕಂಪ್ಲೀಟ್ ಮಾಹಿತಿ ಇಲ್ಲಿದೆ

187 ರನ್‌ಗಳ ಗುರಿಯನ್ನು ಬೆನ್ನತ್ತಿದ ಡೆಸರ್ಟ್ ವೈಪರ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 158 ರನ್ ಗಳಿಸಲಷ್ಟೇ ಶಕ್ತವಾಯಿತು. ಆಂಡ್ರೆ ರಸೆಲ್ 23 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದರು. ಆಂಡ್ರೆಸ್ ಗಸ್ 34 ಎಸೆತಗಳಲ್ಲಿ 34 ರನ್ ಮತ್ತು ಕೈಲ್ ಮೇಯರ್ಸ್ 14 ಎಸೆತಗಳಲ್ಲಿ 22 ರನ್ ಗಳಿಸಿದರು. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

Trending News