Bangalore Power Cut: ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೆಲವು ಕಡೆ ವಿದ್ಯುತ್ ಸರಬರಾಜು ಇರಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಸಿಲಿಕಾನ್ ಸಿಟಿಯ ಕೆಲವು ಕಡೆ ಬೆಸ್ಕಾಂ ಇಲಾಖೆಯಿಂದ ಕಾಮಗಾರಿ ನಡೆಯುತ್ತಿದೆ, ಕೆಲವು ಕಡೆ ನವೀಕರಣವಾಗುತ್ತಿದೆ. ಅಂತಹ ಪ್ರದೇಶಗಳಲ್ಲಿ ಹಾಗು ಮಳೆಯಿಂದ ಹಾನಿಗೊಳಗಾಗುವ ಕೆಲವು ಪ್ರದೇಶಗಳಲ್ಲಿ ಮಂಗಳವಾರ (ಜನವರಿ 21) ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ತಿಳಿಸಿದೆ.
ಇಂದು 66/11 ಕಿಲೋ ವ್ಯಾಟ್ ಆಸ್ಟಿನ್ ಟೌನ್ ಸ್ಟೇಷನ್ ನಲ್ಲಿ ತುರ್ತು ನಿರ್ವಹಣಾ ಕೆಲಸ ನಡೆಯುತ್ತಿದೆ. ಆದುದರಿಂದ ಬೆಂಗಳೂರಿನ ಕೆಲವು ಪ್ರದೇಶಗಳಿಗೆ ಮಾಡುತ್ತಿದ್ದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಬೆಸ್ಕಾಂ ತಿಳಿಸಿದೆ.
ಇದನ್ನೂ ಓದಿ- Free Electricity Bill: ಕೇಂದ್ರ ಸರಕಾರದಿಂದ ಬಂಪರ್ ಆಫರ್: 300 ಯೂನಿಟ್ ಉಚಿತ ವಿದ್ಯುತ್, 78,000 ರೂ.ವರೆಗೆ ಸಬ್ಸಿಡಿ!
ಯಾವ್ಯಾವ ಪ್ರದೇಶಗಳಲ್ಲಿ ಪವರ್ ಇರೋಲ್ಲ?
ಬೆಸ್ಕಾಂ ನೀಡಿರುವ ಮಾಹಿತಿಗಳ ಪ್ರಕಾರ ಬ್ರೆಂಟನ್ ರೋಡ್, ಶೋಭಾ ಪರ್ಲ್, ಐಸಿಐಸಿ ಬ್ಯಾಂಕ್, ಹರ್ಬನ್ ಲೈಫ್, ಆರ್ಎಂಝಡ್, ಅಶೋಕ ನಗರ, ಗರುಡಾಮಾಲ್, ದೊಮ್ಮಲೂರು, ಆಸ್ಟಿನ್ ಟೌನ್, ವಿವೇಕ್ ನಗರ, ಟ್ರಿನಿಟಿ ಚರ್ಚ್, ತಾಜ್ ಹೋಟೆಲ್, ವಿಕ್ಟೊರಿಯಾ ಲೇಔಟ್, ಮ್ಯೂಸಿಯಂ ರೋಡ್, ಅಲ್ಬರ್ಟ್ ರಸ್ತೆ, ಕಿಂಗ್ ಸ್ಟ್ರೀಟ್, ಮ್ಯೂಸಿಯಂ ಅಡ್ಡ ರಸ್ತೆ, ಲ್ಯಾವೆಲ್ಲೆ ರೋಡ್ ಮತ್ತಿತರ ಕಡೆ ಇಂದು ವಿದ್ಯುತ್ ವ್ಯತ್ಯಯವಾಗಲಿದೆ.
ಇದಲ್ಲದೆ ಸೆಂಟ್ ಮಾರ್ಕ್ ರೋಡ್, ವೈಜಿ. ಪಾಳ್ಯ, ಕೆಎಸ್ಆರ್ಪಿ, ಐಟಿಸಿ ಹೋಟೆಲ್, ರಿಚ್ಮಂಡ್ ರೋಡ್, ಮಹಾತ್ಮಾ ಗಾಂಧಿ ರಸ್ತೆ, ಎಸ್ಎಲ್ ಅಪಾರ್ಟ್ಮೆಂಟ್, ರಿಚ್ಮಂಡ್ ಟೌನ್, ಸ್ಟೆನ್ ಗಾರ್ಡನ್, ರಿಚ್ಮಂಡ್ ಪಾರ್ಕ್, ಲಾಂಗ್ಫೋರ್ಡ್ ರೋಡ್, ಬ್ರೇಡ್ ಸ್ಟ್ರೀಟ್, ಫುಡ್ವರ್ಲ್ಡ್ ರಸ್ತೆ, ಜಾನ್ಸನ್ ಮಾರ್ಕೆಟ್, ಬಿಡಬ್ಲ್ಯೂಎಸ್ಎಸ್ಬಿ ನೀರು ಸರಬರಾಜು ಕಚೇರಿ, ಬ್ರಿಗೇಡ್ ರೋಡ್, ರಿಚ್ಮಂಡ್ ಸರ್ಕಲ್, ವಿಟ್ಲ ಮಲ್ಯ ರಸ್ತೆ, ಸಿದ್ದಯ್ಯ ರಸ್ತೆ, ಆನೆಪಾಳ್ಯ ಪ್ರದೇಶಗಳಲ್ಲಿ ಇಂದು ಮಧ್ಯಾಹ್ನ 3 ಗಂಟೆಯವರೆಗೆ ಕರೆಂಟ್ ಇರುವುದಿಲ್ಲ.
ಇದನ್ನೂ ಓದಿ- Free Electricity: ಬಾಡಿಗೆ ಮನೆಯಲ್ಲಿರುವವರಿಗೆ ಉಚಿತ ವಿದ್ಯುತ್ ಪಡೆಯಲು ಇನ್ಮುಂದೆ ಹೊಸ ನಿಯಮ!
ಇದಲ್ಲದೆ 66/11 ಕಿಲೋ ವ್ಯಾಟ್ ಪೂರ್ವಾಂಕರ ಪಾಮ್ ಬೀಚ್ ಸ್ಟೇಷನ್ ನಲ್ಲಿ ತುರ್ತು ನಿರ್ವಹಣಾ ಕೆಲಸಗಳು ಇರುವುದರಿಂದ ಕಲ್ಕೆರೆ ರೋಡ್, ಬೈರತಿ ಗ್ರಾಮ, ಕನಕಶ್ರೀ ಲೇಔಟ್, ಕ್ಯಾಲಸನಹಳ್ಳಿ, ಪೂರ್ವಾಂಕರ ಅಪಾರ್ಟ್ಮೆಂಟ್, ಮಾರಗೊಂಡನಹಳ್ಳಿ, ಗವಿಗುಡಿ ಮತ್ತು ಇನ್ನಿತರ ಕಡೆ ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.