ಚಿತ್ರರಂಗವೇ ಕಣ್ಣೀರು... ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟ ದುರ್ಮರಣ

Aman Jaiswal accident: "ಹೊಸ ಕನಸುಗಳು ಮತ್ತು ಅಸಂಖ್ಯಾತ ಸಾಧ್ಯತೆಗಳೊಂದಿಗೆ 2025ರ ಹೊಸ ವರ್ಷವನ್ನು ಪ್ರವೇಶಿಸುತ್ತಿದ್ದೇವೆ" ಎಂದು ಅಮನ್ ಶೀರ್ಷಿಕೆಯಲ್ಲಿ ಬರೆದಿದ್ದರು. ಆದರೆ ಹೊಸ ವರ್ಷಕ್ಕೆ ಕಾಲಿಟ್ಟ ಅಮನ್ ಈ ಲೋಕಕ್ಕೆ ವಿದಾಯ ಹೇಳುತ್ತಾನೆಂದು ಯಾರೂ ಊಹಿಸಿರಲಿಲ್ಲ.

Written by - Bhavishya Shetty | Last Updated : Jan 19, 2025, 02:09 PM IST
    • ಜನವರಿ 17 ರಂದು 22 ವರ್ಷದ ಅಮನ್ ಜೈಸ್ವಾಲ್ ರಸ್ತೆ ಅಪಘಾತದಲ್ಲಿ ಸಾವು
    • ಧರ್ತಿಪುತ್ರ ನಂದಿನಿ' ಟಿವಿ ಸೀರಿಯಲ್‌ನಲ್ಲಿ ನಟಿಸಿದ್ದ ಅಮನ್ ಜೈಸ್ವಾಲ್
    • ಆಡಿಷನ್ ನೀಡಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಘಟನೆ
ಚಿತ್ರರಂಗವೇ ಕಣ್ಣೀರು... ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟ ದುರ್ಮರಣ title=
File Photo

Aman Jaiswal death: ʼಧರ್ತಿಪುತ್ರ ನಂದಿನಿ' ಟಿವಿ ಸೀರಿಯಲ್‌ನಲ್ಲಿ ನಟಿಸಿದ್ದ ಅಮನ್ ಜೈಸ್ವಾಲ್ ಅವರ ಹಠಾತ್ ನಿಧನದಿಂದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಜನವರಿ 17 ರಂದು 22 ವರ್ಷದ ಅಮನ್ ಜೈಸ್ವಾಲ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಡಿಷನ್ ನೀಡಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಬೈಕ್‌ಗೆ ಟ್ರಕ್ ಡಿಕ್ಕಿಯಾಗಿ, ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕಣ್ಣಿನ ಆರೋಗ್ಯಕ್ಕೆ ಈ ತರಕಾರಿ ಸಂಜೀವಿನಿ.. ವಯಸ್ಸು 60 ದಾಟಿದ್ರೂ ಕಣ್ಣು ಮಂಜಾಗಲ್ಲ ಕನ್ನಡಕವೇ ಬೇಕಿಲ್ಲ, ಪೊರೆ ಸಮಸ್ಯೆಯೂ ಬರಲ್ಲ! ಎಷ್ಟೇ ಮಂದದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ!

ಇನ್ನು ಅಮನ್ ಜೈಸ್ಪಾಲ್ ಅವರ ಕೊನೆಯ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆಗುತ್ತಿದ್ದು, ಇದನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ನಟ ಈ ಪೋಸ್ಟ್ ಅನ್ನು ಡಿಸೆಂಬರ್ 31 ರಂದು ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ, ಅಮನ್ ಜೈಸ್ವಾಲ್ ಒಂದು ವೀಡಿಯೊವನ್ನು ಹಂಚಿಕೊಂಡಿದ್ದು, ತಮ್ಮ ಕನಸುಗಳ ಬಗ್ಗೆ ಬರೆದಿದ್ದಾರೆ.

"ಹೊಸ ಕನಸುಗಳು ಮತ್ತು ಅಸಂಖ್ಯಾತ ಸಾಧ್ಯತೆಗಳೊಂದಿಗೆ 2025ರ ಹೊಸ ವರ್ಷವನ್ನು ಪ್ರವೇಶಿಸುತ್ತಿದ್ದೇವೆ" ಎಂದು ಅಮನ್ ಶೀರ್ಷಿಕೆಯಲ್ಲಿ ಬರೆದಿದ್ದರು. ಆದರೆ ಹೊಸ ವರ್ಷಕ್ಕೆ ಕಾಲಿಟ್ಟ ಅಮನ್ ಈ ಲೋಕಕ್ಕೆ ವಿದಾಯ ಹೇಳುತ್ತಾನೆಂದು ಯಾರೂ ಊಹಿಸಿರಲಿಲ್ಲ.

ಇದನ್ನೂ ಓದಿ: ಬುಧನಿಂದ ಈ 3 ರಾಶಿಯವರ ಯಶಸ್ಸಿನ ಬಾಗಿಲು ಓಪನ್.. ಬಂಪರ್‌ ಲಾಟರಿ, ಹಣದ ಮಹಾ ಮಳೆ!

'ದೈನಿಕ್ ಭಾಸ್ಕರ್' ವರದಿಯ ಪ್ರಕಾರ, ಅಪಘಾತ ಸಂಭವಿಸಿದ ತಕ್ಷಣವೇ ಅಮನ್ ಜೈಸ್ವಾಲ್ ಅವರನ್ನು ಕಾಮಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News