ನವದೆಹಲಿ: ಖ್ಯಾತ ಬಾಲಿವುಡ್ ನಟಿ ಅನನ್ಯ ಪಾಂಡೆ ಕಸೀನ್ ಸಿಸ್ಟರ್ ಹಾಗೂ ಚಂಕಿ ಪಾಂಡೆ ಅವರ ಸಹೋದರ ಪುತ್ರಿ ಅಲಾನಾ ಪಾಂಡೆ ಸಾಮಾಜಿಕ ಮಾಧ್ಯಮಗಳ ಮೇಲೆ ತನ್ನ ಹಾಟ್ ಭಾವಚಿತ್ರಗಳನ್ನು ಹಂಚಿಕೊಂಡು ಹೆಡ್ಲೈನ್ ಗಿಟ್ಟಿಸುತ್ತಲೇ ಇರುತ್ತಾಳೆ. ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರೀಯಳಾಗಿರುವ ಅಲನಾ ಸೈಬರ್ ಬುಲ್ಲಿಂಗ್ ಗೆ ಗುರಿಯಾಗಿದ್ದಾಳೆ.
ಇತ್ತೀಚೆಗ ಅಲನಾ ಬಿಕಿನಿ ತೊಟ್ಟ ತನ್ನ ಹಾಟ್ ಭಾವಚಿತ್ರವೊಂದನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಳು. ಬಳಿಕೆ ಅವಳು ಹಂಚಿಕೊಂಡ ಭಾವಚಿತ್ರಗಳಿಗೆ ಅಶ್ಲೀಲ ಕಾಮೆಂಟ್ ಗಳು ಬರಲಾರಂಭಿಸಿವೆ. ಅಷ್ಟೇ ಯಾಕೆ ಇದಕ್ಕಾಗಿ ಅವಳಿಗೆ ಗ್ಯಾಂಗ್ ರೇಪ್ ಧಮ್ಕಿ ಕೂಡ ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿರುವ ಅಲನಾ ಖುದ್ದಾಗಿ ಈ ಕುರಿತು ಹೇಳಿಕೊಂಡಿದ್ದಾಳೆ. ಯಾವ ರೀತಿಯ ಕಾಮೆಂಟ್ ಓದಿ ತಾವು ಹೆದರಿ, ಬೇಸರಗೊಂಡಿದ್ದೆ ಎಂಬುದನ್ನು ಹೇಳಿಕೊಂಡಿದ್ದಾಳೆ.
ಇದಕ್ಕೆ ಸಂಬಂಧಿಸಿದಂತೆ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದ ಅಲನಾ, "ನನ್ನ ಒಂದು ಪೋಸ್ಟ್ ಗೆ ಮಹಿಳೆಯೋರ್ವಳು ಕಾಮೆಂಟ್ ಮಾಡಿ, ನಿನ್ನ ಜೊತೆಗೆ ಗ್ಯಾಂಗ್ ರೇಪ್ ಆಗಬೇಕು ಎಂದಿದ್ದಳು. ಏಕೆಂದರೆ ನಾನು ಬಿಕಿನಿ ಧರಿಸಿರುವ ಭಾವಚಿತ್ರವನ್ನು ಹಂಚಿಕೊಂಡಿದ್ದೆ. ಇದಲ್ಲದೆ ನನ್ನ ತಾಯಿ-ತಂದೆಯರಿಗೂ ಕೂಡ ಆ ಮಹಿಳೆ ಕಾಮೆಂಟ್ ಅನ್ನು ಟ್ಯಾಗ್ ಮಾಡಿದಳು. ಏಕೆಂದರೆ ಅವರು ಅದನ್ನು ಗಮನಿಸಬೇಕು ಎಂಬುದು ಆಕೆಯ ಉದ್ದೇಶವಾಗಿತ್ತು. ಅದರ ಸ್ಕ್ರೀನ್ ಶಾಟ್ ನಾನು ಪಡೆಯಬೇಕಾಗಿತ್ತು. ಆದ್ರೆ, ಆ ಸಂದರ್ಭದಲ್ಲಿ ಕಾಮೆಂಟ್ ಓದಿ ನಾನು ತುಂಬಾ ಭಯಭೀತಳಾಗಿದ್ದೆ. ಬಳಿಕ ನಾನು ಆ ಮಹಿಳೆಯನ್ನು ಬ್ಲಾಕ್ ಮಾಡಿದೆ ಹಾಗೂ ಇನ್ಸ್ಟಾಗ್ರಾಮ್ ಕೂಡ ಆ ಮಹಿಳೆಯ ಸಂದೇಶ ಡಿಲೀಟ್ ಮಾಡಿದೆ" ಎಂದು ಹೇಳಿಕೊಂಡಿದ್ದಾಳೆ.
ವೃತ್ತಿಪರವಾಗಿ ಅಲನಾ ಓರ್ವ ಮಾಡೆಲ್ ಹಾಗೂ ನಟಿಯಾಗಿದ್ದಾಳೆ. ಈ ಮೊದಲೂ ಕೂಡ ಅವಳ ಬೋಲ್ಡ್ ಭಾವಚಿತ್ರಗಲಿಗಾಗಿ ಅವಳನ್ನು ಟ್ರೊಲ್ ಮಾಡಲಾಗಿದೆ.