Actress Life : ಈ ನಟಿಗೆ ಕೇವಲ 19 ವರ್ಷ. ಆದರೆ 12ನೇ ತರಗತಿ ಓದುತ್ತಿರುವಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟು, ಸೆಟ್ನಲ್ಲಿಯೇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಅಷ್ಟೇ ಅಲ್ಲ ಈ ಚೆಲುವೆ ಸೂಪರ್ ಸ್ಟಾರ್ ಕುಟುಂಬದಿಂದ ಬಂದವಳು.. ತಂದೆ ಉದ್ಯಮದಲ್ಲಿ ಪ್ರಮುಖ ವಿತರಕರು, ತಾಯಿ 90 ರ ದಶಕದಲ್ಲಿ ಆಳಿದ ಸ್ಟಾರ್ ನಟಿ..
ಇಷ್ಟೊತ್ತಿಗೆ ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನೀವು ಊಹಿಸಿರಬೇಕು. ಅವರು ಬೇರೆ ಯಾರೂ ಅಲ್ಲ, 90 ರ ದಶಕದ ಸೂಪರ್ಸ್ಟಾರ್ ಲೇಡಿ ರವೀನಾ ಟಂಡನ್ ಅವರ ಪುತ್ರಿ ರಶಾ ಥಡಾನಿ.
ರಾಶಾ ಪ್ರಸ್ತುತ ತಮ್ಮ ಚೊಚ್ಚಲ ಚಿತ್ರ 'ಆಜಾದ್'ಗಾಗಿ ಸುದ್ದಿಯಲ್ಲಿದ್ದಾರೆ. ಅಭಿಮಾನಿಗಳ ಮನದಲ್ಲಿ ರಾಶಾ ಜನಪ್ರಿಯವಾಗಿರುವ ರೀತಿಯಲ್ಲಿ ನೋಡಿದ್ರೆ.. ಈ ಬ್ಯೂಟಿ ಬಾಲಿವುಡ್ನಲ್ಲಿ ದೀರ್ಘಕಾಲ ಉಳಿಯಲಿದ್ದಾರೆ ಎಂಬುದನ್ನು ತೋರಿಸುತ್ತದೆ.
ರಾಶಾ ಥಡಾನಿ 16 ಮಾರ್ಚ್ 2005 ರಂದು ಜನಿಸಿದರು. 12ನೇ ತರಗತಿಯಲ್ಲಿದ್ದಾಗ ಆಜಾದ್ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ರಾಶಾ ಸೆಟ್ನಲ್ಲಿ ಪರೀಕ್ಷೆಗೆ ಅಧ್ಯಯನ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು..
ರಶಾ ಥಡಾನಿ ಕೇವಲ 19 ವರ್ಷ ವಯಸ್ಸಿನವರಾಗಿದ್ದು, ಈಗಾಗಲೇ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಅಜಯ್ ದೇವಗನ್ ಅವರ ಕುಟುಂಬದಿಂದ ಬಂದ ಅಮನ್ ದೇವಗನ್ ಜೊತೆಗೆ ರಾಶಾ ನಟಿಸಿದ್ದಾರೆ. ಚಿತ್ರವು 17 ಜನವರಿ 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ರವೀನಾ ಟಂಡನ್ ಮತ್ತು ಅನಿಲ್ ಥಡಾನಿ ಅವರಿಗೆ ನಾಲ್ವರು ಮಕ್ಕಳಿದ್ದಾರೆ. ಪೂಜಾ ಮತ್ತು ಛಾಯಾ ಎಂಬ ಇಬ್ಬರು ದತ್ತು ಪುತ್ರಿಯರನ್ನು ರವೀನಾ ದತ್ತು ಪಡೆದಿದ್ದಾರೆ. ಅವರಿಗೆ ಇಬ್ಬರು ಜೈವಿಕ ಮಕ್ಕಳಿದ್ದಾರೆ. ಒಬ್ಬ ಮಗ ರಣಬೀರ್ ಥಡಾನಿ ಮತ್ತು ಮಗಳು ರಾಶಾ ಥಡಾನಿ.
ರಾಶಾ ಅವರ ಶಿಕ್ಷಣದ ಬಗ್ಗೆ ಮಾತನಾಡುವುದಾದರೆ.. 12ರ ನಂತರ ಪದವಿಗೆ ಪ್ರವೇಶ ಪಡೆದಿದ್ದು, ಸದ್ಯ ಬಿಸಿನೆಸ್ ಮ್ಯಾನೇಜ್ ಮೆಂಟ್ ಮೊದಲ ವರ್ಷದಲ್ಲಿ ಓದುತ್ತಿದ್ದಾಳೆ.
ರಾಶಾ ಅವರ ಪೂರ್ಣ ಹೆಸರು ರಾಶವಿಶಾಖ ಥಡಾನಿ. ರಾಶಾ ಅಂದ್ರೆ ಮಳೆಯ ಮೊದಲ ಹನಿ ಎಂದರ್ಥ. ರಾಶಾ ಅವರ ತಾಯಿ ರವೀನಾ ತನ್ನ ಸೊಂಟದ ಮೇಲೆ ಮಗಳ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.