Sowmya Rao Nadig Controversial statement : ತೆಲುಗಿನ ಖ್ಯಾತ ನಿರೂಪಕಿ, ನಟಿ ಸೌಮ್ಯಾ ರಾವ್ ಇದೀಗ ಮತ್ತೊಮ್ಮೆ ಕನ್ನಡ ಸಿನಿರಂಗದ ಬಗ್ಗೆ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಬರುತ್ತಿರುವ ಕೆಟ್ಟ ಕಾಮೆಂಟ್ ಗಳ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಕೆಜಿಎಫ್, ಕಾಂತಾರ ಸಿನಿಮಾಗಳ ಬಳಿಕ ಕನ್ನಡದಲ್ಲಿ ಯಾವ ದೊಡ್ಡ ಸಿನಿಮಾ ಬಂದಿದೆ. ಕನ್ನಡ ಚಿತ್ರರಂಗಕ್ಕೆ ಭವಿಷ್ಯವೇ ಇಲ್ಲ ಎಂದು ಸೌಮ್ಯಾ ರಾವ್ ಹೇಳಿದ್ದರು. ಈ ಮಾತು ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸೌಮ್ಯಾ ರಾವ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಸೌಮ್ಯಾ ರಾವ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.
ಸೌಮ್ಯಾ ರಾವ್ ಈಗ ಮತ್ತೆ ಕನ್ನಡ ಸಿನಿರಂಗದ ಬಗ್ಗೆ ಮಾತನಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡತಿ ಆದರೂ ಸೌಮ್ಯಾ ರಾವ್ ತೆಲುಗು ಚಿತ್ರರಂಗದಲ್ಲಿ ನಿರೂಪಕಿಯಾಗಿ ಫೇಮಸ್ ಆಗಿದ್ದಾರೆ. ಸೌಮ್ಯಾ ರಾವ್ ಕಿರುತೆರೆ ನಟಿ ಕೂಡ ಹೌದು.
ಇದನ್ನೂ ಓದಿ: 'ಪುನೀತ್ ನಿವಾಸ'ಕ್ಕೆ ಚಾಲನೆ: ಇದು ಅಪ್ಪುಅಭಿಮಾನಿಯ ಕಥೆ...
ನನಗೆ ಕನ್ನಡ ಚಿತ್ರರಂಗದ ಬಗ್ಗೆ ಅಷ್ಟೇನು ಅಭಿಮಾನ ಇಲ್ಲ. ಕನ್ನಡ ಸಿನಿರಂಗದಲ್ಲಿ ಪ್ರತಿಭೆಗಳಿಗೆ ಬೆಲೆ ಕೊಡಲ್ಲ. ಹಾಗಾಗಿಯೇ ಸ್ಯಾಂಡಲ್‌ವುಡ್ ಚಿಕ್ಕ ಇಂಡಸ್ಟ್ರಿಯಾಗಿ ಉಳಿದಿದೆ. ಭವಿಷ್ಯದಲ್ಲಿ ಸ್ಯಾಂಡಲ್‌ವುಡ್ ಇನ್ನೂ ಕುಗ್ಗುತ್ತದೆ. ಚಿಕ್ಕ ಇಂಡಸ್ಟ್ರಿ ಆಗೇ ಉಳಿಯಲಿದೆ ನೋಡುತ್ತೀರಿ. ತೆಲುಗು ಇಂಡಸ್ಟ್ರಿ ತುಂಬಾ ದೊಡ್ಡದಾಗಿ ಬೆಳೆದಿದೆ. ಎಲ್ಲರನ್ನೂ ಬರಮಾಡಿಕೊಳ್ಳುತ್ತಾರೆ. ಕನ್ನಡದಲ್ಲಿ ಕೆಜಿಎಫ್, ಕಾಂತಾರ ಸಿನಿಮಾಗಳ ಬಳಿಕ ಯಾವ ದೊಡ್ಡ ಸಿನಿಮಾ ಬಂತು? ನಾನು ಕನ್ನಡ ಕಲಾವಿದರ ಬಗ್ಗೆ ದೂಷಿಸುತ್ತಿಲ್ಲ, ಕನ್ನಡ ಇಂಡಸ್ಟ್ರಿ ಹೇಗಿದೆ ಅನ್ನೋದನ್ನ ಮಾತ್ರ ಮಾತನಾಡುತ್ತಿದ್ದೇನೆ. ಅಲ್ಲಿ ನನಗೂ ಬಹಳ ಕೆಟ್ಟ ಅನುಭವಗಳಾಗಿವೆ ಎಂದು ಸೌಮ್ಯಾ ರಾವ್ ಹೇಳಿದ್ದರು.
ಸೌಮ್ಯಾ ರಾವ್ ಅವರ ಈ ಹೇಳಿಕೆಯಿಂದ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಕೆಟ್ಟ ಕಾಮೆಂಟ್ಸ್ ಬರಲು ಆರಂಭವಾದವು. ಇದರಿಂದ ಬೇಸರಗೊಂಡಿರುವ ಸೌಮ್ಯಾ ರಾವ್ ಈಗ ಸ್ಪಷ್ಟನೆ ನೀಡಿದ್ದಾರೆ.
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ಸೌಮ್ಯಾ ರಾವ್, ನಾನು ಕರ್ನಾಟಕಕ್ಕೆ ಕಾಲಿಟ್ಟರೆ ಚಪ್ಪಲಿ ತಗೊಂಡು ಹೊಡೆಯುತ್ತಾರಂತೆ. ನಾನು ತೆಲುಗಿನಲ್ಲಿಯೇ ಬಿದ್ದು ಸಾಯಬೇಕಂತೆ. ತೆಲುಗಿನವರ ಜೊತೆ ಮಲಗಿದ್ದಕ್ಕೆ ನನಗೆ ಅವಕಾಶ ಸಿಗುತ್ತಿದೆಯಂತೆ ಅನ್ನುತ್ತಿದ್ದಾರೆ ಎಂದು ತಮ್ಮ ಬಗೆಗಿನ ಕಾಮೆಂಟ್ಸ್ ಬಗ್ಗೆ ಹೇಳಿದ್ದಾರೆ.
ಕರ್ನಾಟಕ ನನ್ನ ರಾಜ್ಯ. ನನ್ನ ರಾಜ್ಯಕ್ಕೆ ನಾನು ಬರಲು ಅವರ ಒಪ್ಪಿಗೆ ಬೇಕಾ? ತೆಲುಗಿನಲ್ಲಿ ಮಲಗಿದವಳಿಗೆ ಕನ್ನಡದವರ ಜೊತೆ ಮಲಗಲು ಬರೋದಿಲ್ವಾ? ಅಲ್ಲಿರೋನು ಗಂಡಸೇ, ಇಲ್ಲಿರೋನು ಗಂಡಸೇ ಅಲ್ವಾ? ನಾನು ಆ ರೀತಿಯ ಕಲಾವಿದೆ ಅಲ್ಲವೇ ಅಲ್ಲ. ಕಲಾವಿದರ ಜೀವನ ಕಷ್ಟದಿಂದ ಕೂಡಿರುತ್ತದೆ ಅದು ಸುಲಭದ್ದಲ್ಲ. ಮಾನ ಮರ್ಯಾದೆ ಇಟ್ಟುಕೊಂಡು ಬದುಕುತ್ತಿರುವುದು ತಪ್ಪಾ ಎಂದು ತಮ್ಮ ಬೇಸರವನ್ನು ಸಂದರ್ಶನದಲ್ಲಿ ಸೌಮ್ಯಾ ರಾವ್ ಹೊರಹಾಕಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.