ಮಹಾ ಕುಂಭಮೇಳದಲ್ಲಿಐಫೋನ್‌ ಕಂಪನಿ ಸಂಸ್ಥಾಪಕ ಸ್ಟೀವ್ ಜಾಬ್ಸ್ ಪತ್ನಿ! ಈಕೆ ಸನ್ಯಾಸ ಸ್ವೀಕರಿಸಿದ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ!

Steve Jobs Wife in Maha Kumbh Mela 2025: ಆಪಲ್‌ ಕಂಪನಿ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು. ಲಾರೆನ್ ಪೊವೆಲ್ ಸನಾತನ ಧರ್ಮ ಸ್ವೀಕರಿಸಿದ್ದಾರೆ.

Written by - Chetana Devarmani | Last Updated : Jan 15, 2025, 02:00 PM IST
  • ಆಪಲ್‌ ಕಂಪನಿ ಸಂಸ್ಥಾಪಕ ಸ್ಟೀವ್ ಜಾಬ್ಸ್
  • ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಪೊವೆಲ್ ಜಾಬ್ಸ್
  • ಸನಾತನಿಯಾದ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಪೊವೆಲ್
ಮಹಾ ಕುಂಭಮೇಳದಲ್ಲಿಐಫೋನ್‌ ಕಂಪನಿ ಸಂಸ್ಥಾಪಕ ಸ್ಟೀವ್ ಜಾಬ್ಸ್ ಪತ್ನಿ! ಈಕೆ ಸನ್ಯಾಸ ಸ್ವೀಕರಿಸಿದ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ! title=

Steve Jobs Wife in Maha Kumbh Mela 2025: ಆಪಲ್‌ ಕಂಪನಿ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು. ಲಾರೆನ್ ಪೊವೆಲ್ ಸನಾತನ ಧರ್ಮ ಸ್ವೀಕರಿಸಿದ್ದಾರೆ. ಲಾರೆನ್ ಪೊವೆಲ್ ನಿಂದ ಕಮಲಾ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಮಕರ ಸಂಕ್ರಾಂತಿಯ ಪವಿತ್ರ ಹಬ್ಬದಂದು ಶ್ರೀನಿರಂಜನಿ ಅಖಾಡಾದ ಮುಖ್ಯಸ್ಥ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ಅವರ ಆಚಾರ್ಯ ಶಿಬಿರದಲ್ಲಿ ವಿಧಿವಿಧಾನಗಳ ಪ್ರಕಾರ ಪೂಜೆ ಸಲ್ಲಿಸಿದರು.

ಅನಾರೋಗ್ಯದ ಕಾರಣ, ಕಮಲಾ ಅಮೃತ ಸ್ನಾನ ಮಾಡಲು ಸಂಗಮಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಸ್ವಾಮಿ ಕೈಲಾಶಾನಂದರು ಅವರ ಮೇಲೆ ಸಂಗಮದ ನೀರನ್ನು ಸಿಂಪಡಿಸಿ, ಅಮೃತ ಸ್ನಾನದ ಅನುಭವವನ್ನು ಅನುಭವಿಸುವಂತೆ ಮಾಡಿದರು. ಅದರ ಮಹತ್ವವನ್ನು ತಿಳಿಸಿದರು. ಇದಾದ ನಂತರ ಅವರಿಗೆ ದೀಕ್ಷೆ ನೀಡಿದರು. ಸದಾ ಕೊರಳಲ್ಲಿ ರುದ್ರಾಕ್ಷಿ ಮಾಲೆಯನ್ನು ಧರಿಸುವ ಪ್ರತಿಜ್ಞೆ ಸ್ವೀಕರಿಸಿದರು. 

ಜನವರಿ 10 ರಂದು ಮಹಾ ಕುಂಭ ಮೇಳದಲ್ಲಿ ಭಾಗವಹಿಸಲು ಲಾರೆನ್ ಬಂದಿದ್ದರು. ಜನವರಿ 16 ರಂದು ಪ್ರಯಾಗ್‌ರಾಜ್‌ನಿಂದ ಅಮೆರಿಕಕ್ಕೆ ತೆರಳಲಿದ್ದಾರೆ. ಅವರು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಬೇಕಾಗಿದೆ. ಲಾರೆನ್ ಪೊವೆಲ್ ಫೆಬ್ರವರಿ 2024 ರಲ್ಲಿ ಸ್ವಾಮಿ ಕೈಲಾಶಾನಂದರ ಸಂಪರ್ಕಕ್ಕೆ ಬಂದರು. ಹರಿದ್ವಾರದಲ್ಲಿರುವ ಅವರ ಆಶ್ರಮಕ್ಕೆ ಹೋಗಿ ಪೂಜೆ ಮತ್ತು ಅಭಿಷೇಕ ಮಾಡಿದರು. ಇದಾದ ನಂತರ ಜನವರಿ 10 ರಂದು ಮಹಾ ಕುಂಭದಲ್ಲಿ ಭಾಗವಹಿಸಲು ಬಂದರು.

ಇದನ್ನೂ ಓದಿ: ಕುಂಭ ಮೇಳದ ಪ್ರಮುಖ ಆಕರ್ಷಣೆ ಈ ಪಾರಿವಾಳ ಬಾಬಾ ! ಪ್ರತಿಯೊಂದು ಜೀವಿಯಲ್ಲೂ ಶಿವನಿದ್ದಾನೆ ಎನ್ನುವ ಈತನ ತಪ್ಪಸ್ಸು ಘನಘೋರ!

ಕುಂಭ ಮೇಳದ ಪ್ರದೇಶದಲ್ಲಿ ಉಳಿದುಕೊಂಡು ಪೂಜೆ ಮತ್ತು ಪ್ರಾರ್ಥನೆಯಲ್ಲಿ ಮಗ್ನರಾಗಿರುತ್ತಾರೆ. ಕೇಸರಿ ಬಟ್ಟೆಗಳನ್ನು ಧರಿಸಿ, ಹಣೆಯ ಮೇಲೆ ಶ್ರೀಗಂಧದ ತಿಲಕ, ಕುತ್ತಿಗೆ ಮತ್ತು ಕೈಗಳಲ್ಲಿ ರುದ್ರಾಕ್ಷಿ ಮಾಲೆಯನ್ನು ಧರಿಸಿದ್ದಾರೆ. ಧಾರ್ಮಿಕ ಚಿಂತನೆಗಳಲ್ಲಿ ಮಗ್ನರಾಗಿದ್ದಾರೆ. ದಿನವು ಯೋಗ ಮತ್ತು ಧ್ಯಾನದೊಂದಿಗೆ ಪ್ರಾರಂಭವಾಗುತ್ತದೆ. 

ಸನಾತನ ಧರ್ಮ ಮತ್ತು ಮನುಕುಲದ ಉನ್ನತಿಗಾಗಿ ಜಪ ಮತ್ತು ಧ್ಯಾನದ ಮಹತ್ವವನ್ನು ಹೇಳುತ್ತಾರೆ. ಜನವರಿ 11 ರಂದು ಕಾಶಿ ವಿಶ್ವನಾಥನ ಭೇಟಿಗೆ ಹೋಗಿದ್ದರು. ಲಾರೆನ್ ಪೊವೆಲ್ ಅಕಾ ಕಮಲಾ ಬದಲಾದ ನೋಟವನ್ನು ಶಿಬಿರದಲ್ಲಿ ವಾಸಿಸುವ ಭಕ್ತರು ತುಂಬಾ ಇಷ್ಟಪಡುತ್ತಿದ್ದಾರೆ. ಕುಲ್ಹಾರ್‌ನಲ್ಲಿ ಚಹಾ ಕುಡಿಯುತ್ತಾರೆ. ಅವಳು ಆಲೂಗಡ್ಡೆ, ಎಲೆಕೋಸು, ಬೆಂಡೆಕಾಯಿ, ಬೇಳೆ, ಸೊಪ್ಪು ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಾರೆ. ಅವರ ಸರಳತೆ ಮತ್ತು ನೇರತೆಯನ್ನು ಎಲ್ಲರೂ ಹೊಗಳುತ್ತಿದ್ದಾರೆ.

ನಿರಂಜನಿ ಅಖಾಡಾದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ಅವರು ಲಾರೆನ್ ಪೊವೆಲ್ ನನ್ನ ಮಗಳು ಎಂದು ಹೇಳಿದರು. ನಾನು ಅವಳಿಗೆ ಕಮಲಾ ಎಂಬ ಹೊಸ ಹೆಸರನ್ನು ನೀಡುವ ಮೂಲಕ ದೀಕ್ಷೆ ನೀಡಿದ್ದೇನೆ. ಅವರಿಗೆ ಸನಾತನ ಧರ್ಮ ಮತ್ತು ಸಂಸ್ಕೃತಿ ತುಂಬಾ ಇಷ್ಟವಾಗಿತ್ತು. ಅವರ ವ್ಯಕ್ತಿತ್ವ ಮತ್ತು ಚಿಂತನೆ ದೊಡ್ಡದು. ಮಾನವ ಕಲ್ಯಾಣಕ್ಕಾಗಿ ಅವರು ಸಮರ್ಪಣಾಭಾವದಿಂದ ಕೆಲಸ ಮಾಡಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ. 

ಇದನ್ನೂ ಓದಿ: ಮಹಾಕುಂಭ ಮೇಳದಿಂದ ಯುಪಿ ಸರ್ಕಾರಕ್ಕೆ ಬರುವ ಆದಾಯವೆಷ್ಟು?

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News