ನವದೆಹಲಿ: ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು 2019ರ ಸಾರ್ವತ್ರಿಕ ಚುನಾವಣೆಗೆ ಈಗಲೇ ಪೂರ್ವತಯಾರಿ ನಡೆಸಿದ್ದಾರೆ. ಅದರ ಭಾಗವಾಗಿ ಬಿಜೆಪಿಯ ಅಮಿತ್ ಶಾ ವಿವಿಧ ರಾಜ್ಯಗಳ ನಾಯಕರ ಜೊತೆ ಚರ್ಚೆಯನ್ನು ನಡೆಸಿದ್ದಾರೆ.
ಇತ್ತ ಕಾಂಗ್ರೇಸ್ ಪಕ್ಷವು ಕೂಡಾ ಆ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ. ಅದು ಈಗಲೇ ಬಿಜೆಪಿಯ ವಿರೋಧಿ ಪಕ್ಷಗಳ ಮೂಲಕ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮೈತ್ರಿ ಸಾಧಿಸುವ ನಿಟ್ಟಿನಲ್ಲಿ ಅಂತ ಪಕ್ಷಗಳ ಮುಖಂಡರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದೆ.
ಈಗಾಗಲೇ ಎನ್ಸಿಪಿ ನಾಯಕ ಶರದ್ ಪವಾರ್ ಮತ್ತು ಸೋನಿಯಾ ಗಾಂಧಿಯವರು ಈ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಬಿಜೆಪಿಗೆ ಪರ್ಯಾಯ ಶಕ್ತಿ ಕಟ್ಟುವ ನಿಟ್ಟಿನಲ್ಲಿ ಇತರ ಪಕ್ಷಗಳನ್ನು ಮೈತ್ರಿಯನ್ನು ರೂಪಿಸಲಾಗುತ್ತಿದ್ದು ಅವರನ್ನು ಕೂಡಾ ಇದರಲ್ಲಿ ಒಳಗೊಳ್ಳುವ ನಿಟ್ಟಿನಲ್ಲಿ ಸುಧೀರ್ಘ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಇದೆ ಸಂಧರ್ಭದಲ್ಲಿ 2019 ರ ಚುನಾವಣೆಗಾಗಿ ಸ್ಥಾನಗಳ ಹಂಚಿಕೆಯ ವಿಚಾರವಾಗಿ ಎರಡು ಪಕ್ಷಗಳ ಮಧ್ಯ ಒಂದು ಸಮಪರ್ಕವಾದ ಹೊಂದಾಣಿಕೆ ಸೂತ್ರದ ಬಗ್ಗೆ ಮಾತುಕತೆಯಾಗಿದೆ ಎಂದು ತಿಳಿದು ಬಂದಿದೆ.
ಈ ಮೂಲಕ ಒಂದು ಅಂಶ ಸ್ಪಷ್ಟವಾಗಿದೆ, ರಾಹುಲ್ ಗಾಂಧೀ ಕಾಂಗ್ರೇಸ್ ಅಧ್ಯಕ್ಷರಾದ ನಂತರ ಸೋನಿಯಾರವರು ರಾಜಕೀಯದಿಂದ ದೂರ ಉಳಿಯುತ್ತಾರೆ ಎಂದು ಹೇಳಲಾಗಿತ್ತು, ಆದರೆ ಈಗ ಸೋನಿಯಾ ಗಾಂಧಿಯವರ ಈ ನಡೆ ಇನ್ನು ಹಲವು ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯವಾಗಿರುವ ಸಂದೇಶವನ್ನು ರವಾನಿಸಿದ್ದಾರೆ.