ಸಂಕ್ರಾಂತಿ ಭೋಗಿಯ ದಿನ ರಾಶಿಗನುಸಾರವಾಗಿ ಈ ವಸ್ತುಗಳನ್ನು ದಾನ ಮಾಡಿ, ಸಕಲ ಪಾಪಗಳು ಕಳೆದು ಅಷ್ಟೈಶ್ವರ್ಯ ಲಭಿಸುವುದು! ಸಂತಸ ಸಮೃದ್ಧಿ ಹೆಚ್ಚುವುದು

makar sankranti 2025: ಮಕರ ಸಂಕ್ರಾಂತಿಯ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡಿದರೆ, ನಿಮ್ಮ ಜೀವನದಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ. ಈ ದಿನ ಮಾಡುವ ದಾನವು ಪೂರ್ವಜನ್ಮದ ಪಾಪಗಳನ್ನು ಪರಿಹರಿಸುತ್ತದೆ ಎನ್ನಲಾಗುತ್ತದೆ.

Written by - Chetana Devarmani | Last Updated : Jan 12, 2025, 12:00 PM IST
  • ಮಕರ ಸಂಕ್ರಾಂತಿ ಹಬ್ಬ 2025
  • ಈ ದಿನ ಮಾಡುವ ದಾನದ ಫಲ
  • ಸಂಕ್ರಾಂತಿಯಂದು ಏನು ದಾನ ಮಾಡಬೇಕು?
ಸಂಕ್ರಾಂತಿ ಭೋಗಿಯ ದಿನ ರಾಶಿಗನುಸಾರವಾಗಿ  ಈ ವಸ್ತುಗಳನ್ನು ದಾನ ಮಾಡಿ, ಸಕಲ ಪಾಪಗಳು ಕಳೆದು ಅಷ್ಟೈಶ್ವರ್ಯ ಲಭಿಸುವುದು! ಸಂತಸ ಸಮೃದ್ಧಿ ಹೆಚ್ಚುವುದು title=
makar sankranti 2025

makar sankranti 2025: ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನದಂದು ಸೂರ್ಯ ದೇವರು ಧನು ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ಕಾರಣಕ್ಕಾಗಿ ಈ ಹಬ್ಬವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.

ಮಕರ ಸಂಕ್ರಾಂತಿಯ ಸಮಯದಲ್ಲಿ ದಾನ ಧರ್ಮ ಮಾಡುವುದು ವಿಶೇಷವೆಂದು ಪರಿಗಣಿಸಲಾಗುತ್ತದೆ. ಪಿತೃ ದೋಷಗಳಿಂದ ಮುಕ್ತಿ ದೊರೆಯುವುದರ ಜೊತೆಗೆ, ಮನೆಗೆ ಸಮೃದ್ಧಿ ಬರುತ್ತದೆ. ಈ ದಿನದಂದು ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ.

ಮುಖ್ಯವಾಗಿ ಈ ದಿನದಂದು ಅಕ್ಕಿ ಮತ್ತು ಬೇಳೆಯನ್ನು ದಾನ ಮಾಡುವುದು ವಿಶೇಷವಾಗಿದೆ, ಆದರೆ ನಿಮ್ಮ ರಾಶಿಯ ಪ್ರಕಾರ ದಾನ ಮಾಡಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂದು ನಂಬಲಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ 14, ಸೋಮವಾರದಂದು ಆಚರಿಸಲಾಗುವುದು. ಅದರ ಹಿಂದಿನ ದಿನ ಜನವರಿ 13 ರಂದು ಭೋಗಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ನಿಯ ಪ್ರಕಾರ ಸರಿಯಾದ ವಸ್ತುಗಳನ್ನು ದಾನ ಮಾಡಿದರೆ, ನಿಮ್ಮ ಮನೆ ಯಾವಾಗಲೂ ಸಮೃದ್ಧಿಯೊಂದಿಗೆ ಆರ್ಥಿಕ ಲಾಭದಿಂದ ಕೂಡಿರುತ್ತದೆ.

ಮೇಷ ರಾಶಿ - ಮೇಷ ರಾಶಿಯವರು ಯಾವುದೇ ಕೆಂಪು ಬಟ್ಟೆಗಳನ್ನು ಧರಿಸಿದರೆ ಅಥವಾ ಕೆಂಪು ವಸ್ತುಗಳನ್ನು ದಾನ ಮಾಡಿದರೆ, ಅವರಿಗೆ ಜೀವನದಲ್ಲಿ ಲಾಭವಾಗುತ್ತದೆ ಎಂದು ನಂಬಲಾಗಿದೆ. ಮಕರ ಸಂಕ್ರಾಂತಿಯ ದಿನದಂದು ಕೆಂಪು ವಸ್ತುಗಳನ್ನು, ಮುಖ್ಯವಾಗಿ ಕೆಂಪು ಧಾನ್ಯಗಳನ್ನು ದಾನ ಮಾಡಲು ಸೂಚಿಸಲಾಗಿದೆ. 

ವೃಷಭ ರಾಶಿ - ವೃಷಭ ರಾಶಿಯ ಜನರು ಮಕರ ಸಂಕ್ರಾಂತಿಯ ದಿನದಂದು ಬಿಳಿ ಎಳ್ಳನ್ನು ದಾನ ಮಾಡಲು ಸೂಚಿಸಲಾಗುತ್ತದೆ. ಈ ದಿನ ನೀವು ಯಾವುದೇ ಬಿಳಿ ವಸ್ತುವನ್ನು ದಾನ ಮಾಡಿದರೆ, ಅದು ನಿಮಗೆ ಶುಭ ತರುತ್ತದೆ. ಆದರೆ ಮುಖ್ಯವಾಗಿ ಅಕ್ಕಿ ಅಥವಾ ಬಿಳಿ ಎಳ್ಳನ್ನು ದಾನ ಮಾಡಲು ಸೂಚಿಸಲಾಗುತ್ತದೆ. ಈ ದಿನ ಸಕ್ಕರೆ ದಾನ ಮಾಡಿದರೆ, ಅದು ನಿಮಗೆ ತುಂಬಾ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ವೃಷಭ ರಾಶಿಯ ಜನರು ಮಕರ ಸಂಕ್ರಾಂತಿಯಂದು ಬಿಳಿ ಬಟ್ಟೆಗಳನ್ನು ದಾನ ಮಾಡಲು ಸೂಚಿಸಲಾಗುತ್ತದೆ.

ಮಿಥುನ ರಾಶಿ - ಮಕರ ಸಂಕ್ರಾಂತಿಯ ದಿನದಂದು ನೀವು ಹಸಿರು ತರಕಾರಿಗಳು ಅಥವಾ ಹಸಿರು ಬಟ್ಟೆಗಳಂತಹ ಹಸಿರು ಬಣ್ಣದ ವಸ್ತುಗಳನ್ನು ದಾನ ಮಾಡಿದರೆ ಜೀವನದಲ್ಲಿ ಸಮೃದ್ಧಿ ಉಳಿಯುತ್ತದೆ. ನೀವು ಯಶಸ್ಸನ್ನು ಪಡೆಯುತ್ತೀರಿ. ಮಿಥುನ ರಾಶಿಯ ಜನರು ಮಕರ ಸಂಕ್ರಾಂತಿಯಂದು ಹೆಸರುಬೇಳೆಯನ್ನು ದಾನ ಮಾಡಲು ಸೂಚಿಸಲಾಗಿದೆ.

ಕರ್ಕಾಟಕ ರಾಶಿ - ಈ ದಿನ ನೀವು ನಿರ್ಗತಿಕರಿಗೆ ಬಿಳಿ ವಸ್ತುಗಳನ್ನು ದಾನ ಮಾಡಿದರೆ, ಅದು ನಿಮಗೆ ಶುಭ ಫಲಿತಾಂಶಗಳನ್ನು ತರುತ್ತದೆ. ಈ ದಿನ, ನೀವು ಮುಖ್ಯವಾಗಿ ಬಿಳಿ ಬಟ್ಟೆಗಳನ್ನು ದಾನ ಮಾಡಬೇಕು ಮತ್ತು ಸಾಧ್ಯವಾದರೆ, ಹಾಲು, ಮೊಸರು ಅಥವಾ ತುಪ್ಪವನ್ನು ದಾನ ಮಾಡಬೇಕು. ಇದು ನಿಮ್ಮ ಜೀವನದಲ್ಲಿ  ಸಮೃದ್ಧಿಯನ್ನು ತರುತ್ತದೆ.

ಇದನ್ನೂ ಓದಿ: ಇಂದು ಯಾವ ರಾಶಿಯವರಿಗೆ ಶುಭ? ಯಾವ ರಾಶಿಗೆ ಅಶುಭ? ಇಂದಿನ ದ್ವಾದಶ ರಾಶಿಗಳ ದಿನಭವಿಷ್ಯ ಹೀಗಿದೆ ನೋಡಿ

ಸಿಂಹ ರಾಶಿ - ಸಿಂಹ ರಾಶಿಯವರು ಮಕರ ಸಂಕ್ರಾಂತಿಯ ದಿನದಂದು ಸೂರ್ಯನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿದರೆ ಪ್ರಯೋಜನಕಾರಿಯಾಗುತ್ತದೆ. ಈ ದಿನ ನೀವು ಬೆಲ್ಲ, ಎಳ್ಳು ಚಿಕ್ಕಿ, ಕಡಲೆಕಾಯಿ ಮತ್ತು ಎಳ್ಳು ಲಡ್ಡು ದಾನ ಮಾಡಿದರೆ, ಅದು ನಿಮಗೆ ಪ್ರಯೋಜನಕಾರಿಯಾಗಿದೆ.

ಕನ್ಯಾ ರಾಶಿ - ಕನ್ಯಾ ರಾಶಿಯವರು ಹಸಿರು ವಸ್ತುಗಳನ್ನು ದಾನ ಮಾಡುವುದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಹೆಸರುಬೇಳೆ ಅಥವಾ ಈ ಬೇಳೆಯಿಂದ ಮಾಡಿದ ಖಿಚಡಿಯನ್ನು ದಾನ ಮಾಡಬೇಕು. ಈ ದಿನ ನೀವು ಖಿಚಡಿ ಮಾಡಿ ಬಡವರಿಗೆ ತಿನ್ನಿಸಿದರೆ ಪಾಪಗಳಿಂದ ಮುಕ್ತಿ ಪಡೆಯಬಹುದು. ಈ ದಿನ ನೀವು ಅಗತ್ಯವಿರುವವರಿಗೆ ಹಸಿರು ಕಂಬಳಿಗಳನ್ನು ದಾನ ಮಾಡಬಹುದು.

ತುಲಾ ರಾಶಿ - ತುಲಾ ರಾಶಿಯವರು ಮಕರ ಸಂಕ್ರಾಂತಿಯ ದಿನದಂದು ಅಕ್ಕಿಯಂತಹ ಬಿಳಿ ಧಾನ್ಯಗಳನ್ನು ದಾನ ಮಾಡಿದರೆ ಒಳಿತು. ನೀವು ಗೋಡಂಬಿ, ಬಿಳಿ ಒಣ ಹಣ್ಣುಗಳನ್ನು ಸಹ ದಾನ ಮಾಡಬಹುದು. ಈ ದಿನ ಬಿಳಿ ಬಟ್ಟೆಗಳನ್ನು ದಾನ ಮಾಡುವುದು ನಿಮಗೆ ಶುಭಕರವಾಗಿರುತ್ತದೆ.

ವೃಶ್ಚಿಕ ರಾಶಿ - ಮಕರ ಸಂಕ್ರಾಂತಿಯಂದು ಬೆಲ್ಲ ದಾನ ಮಾಡಿ. ಕಡಲೆಕಾಯಿ, ಬೆಲ್ಲ ಮತ್ತು ಕೆಂಪು ಬಣ್ಣದ ಬೆಚ್ಚಗಿನ ಬಟ್ಟೆಗಳನ್ನು ಕೆಂಪು ವಸ್ತುಗಳ ಜೊತೆಗೆ ದಾನ ಮಾಡಿದರೆ ಮನೆಯಲ್ಲಿ ಸಂತೋಷ ಉಳಿಯುತ್ತದೆ.

ಧನು ರಾಶಿ - ಧನು ರಾಶಿಯವರು ಕಡಲೆ ಬೇಳೆ, ಕಡಲೆ ಹಿಟ್ಟು ಮತ್ತು ಹಳದಿ ಬಟ್ಟೆಗಳಂತಹ ಹಳದಿ ವಸ್ತುಗಳನ್ನು ದಾನ ಮಾಡಿದರೆ, ನಿಮಗೆ ಶುಭ ಫಲಿತಾಂಶಗಳು ಸಿಗುತ್ತವೆ. ಪಿತೃ ದೋಷದಿಂದ ಪಾರಾಗುವಿರಿ.

ಮಕರ ರಾಶಿ - ಮಕರ ರಾಶಿಯವರು ಮಕರ ಸಂಕ್ರಾಂತಿಯ ದಿನದಂದು ಉದ್ದಿನ ಬೇಳೆ ಮತ್ತು ಕಪ್ಪು ಎಳ್ಳು ಮುಂತಾದ ಕಪ್ಪು ಧಾನ್ಯಗಳನ್ನು ದಾನ ಮಾಡಬೇಕು. ಅದು ನಿಮಗೆ ಶುಭವಾಗಿರುತ್ತದೆ. ಬಡವರಿಗೆ ಅಥವಾ ನಿರ್ಗತಿಕರಿಗೆ ಕಪ್ಪು ಕಂಬಳಿಯನ್ನು ದಾನ ಮಾಡಬೇಕು. ನಿಮ್ಮ ಮನೆಯಲ್ಲಿ ಯಾವಾಗಲೂ ಸಂತೋಷ ನೆಲೆಸುತ್ತದೆ.

ಕುಂಭ ರಾಶಿ - ಕುಂಭ ರಾಶಿಯ ಜನರು ಮಕರ ಸಂಕ್ರಾಂತಿಯ ದಿನದಂದು ಉಣ್ಣೆಯ ಬಟ್ಟೆಗಳು ಮತ್ತು ಚರ್ಮದ ವಸ್ತುಗಳನ್ನು ದಾನ ಮಾಡಿದರೆ, ಅವರಿಗೆ ವರ್ಷವಿಡೀ ಶುಭ ಫಲಿತಾಂಶಗಳು ಸಿಗುತ್ತವೆ. ಈ ದಿನ ನೀವು ಸಾಸಿವೆ ಎಣ್ಣೆ ಮತ್ತು ಕಪ್ಪು ಕಂಬಳಿಯನ್ನು ದಾನ ಮಾಡಬೇಕು.

ಮೀನ ರಾಶಿ - ಮೀನ ರಾಶಿಯ ಜನರು ಮಕರ ಸಂಕ್ರಾಂತಿಯ ದಿನದಂದು ಹಳದಿ ವಸ್ತುಗಳು, ಧಾನ್ಯಗಳು ಮತ್ತು ಬಟ್ಟೆಗಳನ್ನು ದಾನ ಮಾಡಿದರೆ, ಅವರಿಗೆ ಶುಭ ಫಲಿತಾಂಶಗಳು ಸಿಗುತ್ತವೆ. ಈ ದಿನ ನೀವು ಕಡಲೆ ಬೇಳೆ ಅಥವಾ ಕಡಲೆ ಹಿಟ್ಟನ್ನು ದಾನ ಮಾಡಬೇಕು.

ಇದನ್ನೂ ಓದಿ: ಈ 3 ರಾಶಿಯವರಿಗೆ ರಾಜಯೋಗ.. ಬುಧನಿಂದ ಭಾಗ್ಯೋದಯ, ಹೆಜ್ಜೆ ಹೆಜ್ಜೆಗೂ ಯಶಸ್ಸು, ಸಿರಿ ಸಂಪತ್ತಿನ ಮಳೆ.. ಅದೃಷ್ಟದ ಸಮಯ ಶುರು !

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News