Viral Video: ಚಳಿಗಾಲ ಶುರುವಾಗಿದೆ, ಎಲ್ಲರು ಕಂಬಳಿ ಹೊದ್ದುಕೊಂಡು ಮನೆಯಲ್ಲಿ ಮಲಗಲು ಯೋಚಿಸುತ್ತಾರೆ, ಇನ್ನೂ ಕೆಲವರು ಬೆಂಕಿ ಹಾಕಿ ಚಳಿಗೆ ಬೆಂಕಿಯ ಕಾವಿನಲ್ಲಿ ಮೈ ಬಿಸಿ ಮಾಡಿಕೊಳ್ಳುತ್ತಾರೆ. ಆದರೆ, ಇಲ್ಲಿ ಎರಡು ಚಿರೆತಗಳು ಕೊರೆಯುತ್ತಿರುವ ಚಳಿಯಲ್ಲಿ, ಸುರಿಯುತ್ತಿರುವ ಮಂಜಿನಲ್ಲಿ ಆಟವಾಡಲು ಬಂದಿವೆ.
ಒಂದೆಡೆ ಮಂಜು ಸುರಿಯುತ್ತಿದೆ, ಈ ದೃಶ್ಯವೇ ಕಣ್ಣಿಗೆ ಒಂದು ಅದ್ಬುತವಾದ ಅನುಭವವನ್ನು ನೀಡುತ್ತಿದೆ. ಇದರ ಜೊತೆಗೆ ಎರಡು ಚಿರತೆಗಳು, ಮಂಜಿನಲ್ಲಿ ಆಟವಾಡುತ್ತಿವೆ, ಖುಷಿಯಿಂದ ಮಂಜಿನಲ್ಲಿ ಕುಣಿದು ಕುಪ್ಪಳಿಸುತ್ತಿದೆ. ಒಂದರ ಮೇಲೊಂದು ಬಿದ್ದು ಹೊರಳಾಡುತ್ತಾ, ಕುಷಿಯಿಂದ ನಕ್ಕು ನಲಿಯುತ್ತಿದೆ.
ಈ ವೀಡಿಯೊವನ್ನು ಟೂರ್ ಆಪರೇಟರ್ ತಾಶಿ ತ್ಸಾವಾಂಗ್ ಅವರ ಸಾಮಾಜಿಕ ಮಾಧ್ಯಮ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಮಾಹಿತಿಯ ಪ್ರಕಾರ, ತಾಶಿ ಸ್ವತಃ ಲಡಾಖ್ ನಿವಾಸಿಯಾಗಿದ್ದು, ಅವರ ಮನೆಯ ಸಮೀಪವಿರುವ ಈ ನೋಟವು ವಿಶಿಷ್ಟವಾಗಿದೆ ಎಂದು ಅವರು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹಿಮ ಚಿರತೆಗಳು ಸಾಮಾನ್ಯವಾಗಿ ಮನುಷ್ಯರಿಂದ ದೂರವಿರುತ್ತವೆ ಮತ್ತು ಅವುಗಳ ಚಟುವಟಿಕೆಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವುದು ಸುಲಭವಲ್ಲ. ಈ 28 ಸೆಕೆಂಡ್ ವೀಡಿಯೋ ಇನ್ಟರ್ನೆಟ್ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಜನರು ಈ ವೀಡಿಯೊವನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ.
A fleeting dance of wild joy - Snow leopards somewhere in Zanskar valley in Ladakh
🎥 tashizkr pic.twitter.com/gkZ8pmDbZM
— Supriya Sahu IAS (@supriyasahuias) January 6, 2025
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.