ದಟ್ಟ ಕೂದಲು ಬೇಕೇ.. ತುಂಬಾ ಸುಲಭ.. ಈ 7 ಯೋಗಾಸನಗಳನ್ನು ಮಾಡಿ.. ಉತ್ತಮ ಫಲಿತಾಂಶ ಸಿಗುತ್ತೆ

Yoga asanas for Hair Growth : ಕೂದಲಿನ ಆರೋಗ್ಯವನ್ನು ಸುಧಾರಿಸುವ ಮತ್ತು ದಟ್ಟವಾದ ಕೂದಲಿನ ಬೆಳವಣಿಗೆಯನ್ನು ಬೆಂಬಲಿಸುವ ಅದ್ಭುತ ಯೋಗಾಸನಗಳು ಕೂದಲು ಉದುರುವಿಕೆಗೆ ತುಂಬಾ ಸಹಾಯಕ. ಈ ಯೋಗಾಭ್ಯಾಸದಿಂದ ನಿಮ್ಮ ದೇಹವೂ ಆರೋಗ್ಯಕರವಾಗಿರುತ್ತದೆ. ಬನ್ನಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ..
 

ದೇಹದ ಪ್ರತಿಯೊಂದು ಭಾಗವನ್ನು ರಕ್ಷಿಸಲು ಯೋಗ ಭಂಗಿಗಳಿವೆ. ಈ 7 ಯೋಗಾಸನಗಳು ನಿಮ್ಮ ಕೂದಲಿನ ಬೆಳವಣಿಗೆಗೆ ತುಂಬಾ ಸಹಾಯಕವಾಗುತ್ತವೆ. ಯೋಗಾಭ್ಯಾಸಗಳು ಆರೋಗ್ಯಕರ ಕೂದಲಿಗೆ ಅನೇಕ ಪ್ರಯೋಜನಗಳನ್ನು ಹೊಂದಿವೆ ಎಂದು ಯೋಗಾಭ್ಯಾಸಕರು ಹೇಳುತ್ತಾರೆ. 
 

1 /8

ಹಸ್ತ ಬಡಾಸನ: ಈ ಯೋಗಾಸನವು ನಿಮ್ಮ ಪಾದಗಳಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಆರೋಗ್ಯಕರ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.   

2 /8

ಯೋಗೇಂದ್ರ ಚಕ್ರಾಸನ: ಈ ಯೋಗಾಸನವನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ನೆತ್ತಿಗೆ ರಕ್ತದ ಹರಿವು ಹೆಚ್ಚಾಗುತ್ತದೆ ಹಾಗೂ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ.  

3 /8

ಅಧೋ ಮುಖ ಸ್ವನಾಸನ: ಈ ಯೋಗಾಸನವು ನೆತ್ತಿಯ ಮೇಲೆ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಕೂದಲು ಉದುರುವಿಕೆಯನ್ನು ಸಹ ಕಡಿಮೆ ಮಾಡುತ್ತದೆ.    

4 /8

ಉತ್ರಾಸನ: ನೆತ್ತಿಯ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಲ್ಲದೆ ಉದ್ವೇಗವನ್ನು ನಿವಾರಿಸಿ ಮನಸ್ಸಿಗೆ ಶಾಂತಿ ನೀಡುತ್ತದೆ. ಅಲ್ಲದೆ ಕೂದಲು ಉದುರುವುದನ್ನು ನಿಯಂತ್ರಿಸುತ್ತದೆ.  

5 /8

ಸರ್ವಾಂಗಾಸನ: ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಹಾರ್ಮೋನುಗಳನ್ನು ಉತ್ತೇಜಿಸುತ್ತದೆ. ಈ ಯೋಗವು ಕೂದಲಿನ ಬೆಳವಣಿಗೆಗೆ ಉತ್ತಮ.    

6 /8

ಹಲಸನ: ದೇಹಕ್ಕೆ ರಕ್ತದ ಹರಿವನ್ನು ನಿಯಮಿತವಾಗಿ ನೀಡುತ್ತದೆ. ಇದು ದೇಹಕ್ಕೆ ಒಟ್ಟಾರೆ ರೋಗ ನಿರೋಧಕ ಶಕ್ತಿ ಒದಗಿಸುತ್ತದೆ. ಕೂದಲು ಬೆಳವಣಿಗೆಯನ್ನು ಬೆಂಬಲಿಸುತ್ತದೆ.  

7 /8

ಯೋಗ ಮುದ್ರೆ: ಈ ಯೋಗ ಮುದ್ರೆಯು ದೇಹದಲ್ಲಿ ಉತ್ಕರ್ಷಣ ನಿರೋಧಕವನ್ನು ಹೆಚ್ಚಿಸುತ್ತದೆ. ಇದು ಕೂದಲಿನ ಆರೋಗ್ಯವನ್ನು ಬೆಂಬಲಿಸಿ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.  

8 /8

(ಸೂಚನೆ: ಈ ಸಂದೇಶವನ್ನು ನಿಮಗೆ ಸಾಕಷ್ಟು ಮಾಹಿತಿಯನ್ನು ನೀಡಲು ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)