ನವದೆಹಲಿ: ಕೊರೋನಾ ವೈರಸ್ ಕೋವಿಡ್ -19 (Covid-19) ತಡೆಯಬೇಕೆಂದು ಒಂದಲ್ಲ, ಎರಡಲ್ಲ, ಮೂರು ಬಾರಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಆದರೂ ಕೊರೊನಾ ಸೋಂಕು ಹರಡುವಿಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಿಗೆ ಬಹಳ ತೀವ್ರವಾಗಿ ಹರಡುತ್ತಿದೆ. ಪರಿಣಾಮವಾಗಿ ಈಗಾಗಲೇ ಕೊರೊನಾ ಸೋಂಕು ಪೀಡಿತರ ಸಂಖ್ಯೆ 1 ಲಕ್ಷದ ಗಡಿಯನ್ನೂ ದಾಟಿದೆ. ಜೊತೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 3 ಸಾವಿರದ ದಾಟಿದೆ. ಈ ಹಿನ್ನೆಲೆಯಲ್ಲಿ ಸದ್ಯ ದೇಶದ ಯಾವ್ಯಾವ ರಾಜ್ಯಗಳಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಎಷ್ಟೆಷ್ಟಿದೆ ಎಂಬುದನ್ನು ಇಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ.
ದೇಶದ ಕೊರೊನಾವೈರಸ್ (Coronavirus) ಪೀಡಿತರ ಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು ಮಹಾರಾಷ್ಟ್ರದಲ್ಲೇ ಇದೆ. ಹಾಗಾಗಿ ಅದೇ ಮೊದಲ ಸ್ಥಾನದಲ್ಲಿದೆ. ಎತಡನೇ ಸ್ಥಾನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾಗಿರುವ ಗುಜರಾತ್ ಇದೆ. ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ವಿವಿಧ ರಾಜ್ಯಗಳಲ್ಲಿ ಹೊಸದಾಗಿ ದಾಖಲಾದ ಸೋಂಕು ಪೀಡಿತರು ಮತ್ತು ಒಟ್ಟು ಸೋಂಕು ಪೀಡಿತರ ವಿವರ ಈ ರೀತಿ ಇದೆ.
- ಮಹಾರಾಷ್ಟ್ರ: 2,345 ಹೊಸ ಪ್ರಕರಣಗಳು; ಒಟ್ಟು 41,642
- ತಮಿಳುನಾಡು: 776 ಹೊಸ ಪ್ರಕರಣಗಳು, ಒಟ್ಟು 13,967
- ಗುಜರಾತ್: 371 ಹೊಸ ಪ್ರಕರಣಗಳು; ಒಟ್ಟು 12,910
- ರಾಜಸ್ಥಾನ: 212 ಹೊಸ ಪ್ರಕರಣಗಳು; ಒಟ್ಟು 6,227
- ಮಾಧ್ಯಪ್ರದೇಶ: 248 ಹೊಸ ಪ್ರಕರಣಗಳು; ಒಟ್ಟು 5,981
- ಉತ್ತರ ಪ್ರದೇಶ: 340 ಹೊಸ ಪ್ರಕರಣಗಳು; ಒಟ್ಟು 5,515
- ಪಶ್ಚಿಮಬಂಗಾಳ : 94 ಹೊಸ ಪ್ರಕರಣಗಳು; ಒಟ್ಟು 3,197
- ಪಂಜಾಬ್: 23 ಹೊಸ ಪ್ರಕರಣಗಳು; ಒಟ್ಟು 2,028
- ಬಿಹಾರ: 7 ಹೊಸ ಪ್ರಕರಣಗಳು; ಒಟ್ಟು 1,987
- ತೆಲಂಗಾಣ: 38 ಹೊಸ ಪ್ರಕರಣಗಳು; 1,699
- ಕರ್ನಾಟಕ: 143 ಹೊಸ ಪ್ರಕರಣಗಳು; ಒಟ್ಟು 1,605
- ಜಮ್ಮು ಕಾಶ್ಮೀರ: 59 ಹೊಸ ಪ್ರಕರಣಗಳು; ಒಟ್ಟು 1,449
- ಹರಿಯಾಣ: 38 ಹೊಸ ಪ್ರಕರಣಗಳು; ಒಟ್ಟು 1,031
- ಒಡಿಶಾ: 703 ಸಕ್ರಿಯ ಪ್ರಕರಣಗಳು; ಒಟ್ಟು 1,103
- ಕೇರಳ: 24 ಹೊಸ ಪ್ರಕರಣಗಳು; ಒಟ್ಟು 690
- ಜಾರ್ಖಂಡ್: 9 ಹೊಸ ಪ್ರಕರಣಗಳು; ಒಟ್ಟು 303
- ಚಂಡೀಗಢ: 37 ಸಕ್ರಿಯ ಪ್ರಕರಣಗಳು; ಒಟ್ಟು 218
- ಅಸ್ಸಾಂ: 4 ಹೊಸ ಪ್ರಕರಣಗಳು; ಒಟ್ಟು 203
- ಉತ್ತರಾಖಂಡ: 24 ಹೊಸ ಪ್ರಕರಣಗಳು; ಒಟ್ಟು 146
- ಹಿಮಾಚಲ ಪ್ರದೇಶ: 31 ಹೊಸ ಪ್ರಕರಣಗಳು; ಒಟ್ಟು 141
- ಗೋವಾ: 2 ಹೊಸ ಪ್ರಕರಣಗಳು; ಒಟ್ಟು 52