BSNL Free Internet Offer: ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ಭರ್ಜರಿ ನ್ಯೂ ಇಯರ್ ಆಫರ್ ಘೋಷಿಸಿದೆ. ಬಿಎಸ್ಎನ್ಎಲ್ ತನ್ನ ಫೈಬರ್ ಬ್ರಾಡ್ಬ್ಯಾಂಡ್ ಗ್ರಾಹಕರಿಗೆ ಹೊಸ ವರ್ಷದ ಪ್ರಯುಕ್ತ ಈ ಕೊಡುಗೆಯನ್ನು ನೀಡುತ್ತಿದ್ದು ಇದರಲ್ಲಿ ತಿಂಗಳಪೂರ್ತಿ ಉಚಿತ ಇಂಟರ್ನೆಟ್ ಪಡೆಯಬಹುದಾಗಿದೆ.
ಹೌದು, ನೀವು ಬಿಎಸ್ಎನ್ಎಲ್ ಫೈಬರ್ ಬ್ರಾಡ್ಬ್ಯಾಂಡ್ ಗ್ರಾಹಕರಾಗಿದ್ದು ಮಾಸಿಕ ಬಾಡಿಗೆ 500 ರೂ.ಗಿಂತ ಕಡಿಮೆ ಇದ್ದಲ್ಲಿ ಈ ಕೊಡುಗೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು. ಆದಾಗ್ಯೂ, ಈ ಕೊಡುಗೆ ಡಿಸೆಂಬರ್ 31, 2024ರವರೆಗೆ ಮಾತ್ರ ಮಾನ್ಯವಾಗಿರುತ್ತದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಇದನ್ನೂ ಓದಿ- Reliance Jio: ಕೋಟ್ಯಂತರ ಗ್ರಾಹಕರಿಗೆ ರಿಲಯನ್ಸ್ ಜಿಯೋ ನ್ಯೂ ಇಯರ್ ಗಿಫ್ಟ್: 200 ದಿನಗಳ ಇಷ್ಟೆಲ್ಲಾ ಲಾಭ!
ಬಿಎಸ್ಎನ್ಎಲ್ ಹೆಚ್ಚು ಹೆಚ್ಚು ಗ್ರಾಹಕರನ್ನು ತನ್ನತ್ತ ಆಕರ್ಷಿಸಲು ಈ ಕೊಡುಗೆ ಆರಂಭಿಸಿದ್ದು, ಈ ಆಫರ್ನ ಅಡಿಯಲ್ಲಿ ಫೈಬರ್ ಬೇಸಿಕ್ ನಿಯೋ ಅಥವಾ ಫೈಬರ್ ಬೇಸಿಗ್ ಪ್ಲಾನ್ನಲ್ಲಿ ನೀವು ಒಂದು ತಿಂಗಳು ಸಂಪೂರ್ಣವಾಗಿ ಉಚಿತ ಇಂಟರ್ನೆಟ್ ಪ್ರಯೋಜನವನ್ನು ಆನಂದಿಸಬಹುದಾಗಿದೆ. ಇದಕ್ಕಾಗಿ ಕನಿಷ್ಠ ಮೂರು ತಿಂಗಳವರೆಗೆ ಈ ಯೋಜನೆಯನ್ನು ಪಡೆಯಬೇಕಾಗುತ್ತದೆ.
ಫೈಬರ್ ಬೇಸಿಕ್ ನಿಯೋ ಬೆಲೆ ಮತ್ತು ಪ್ರಯೋಜನ:
ಬಿಎಸ್ಎನ್ಎಲ್ ಫೈಬರ್ ಬೇಸಿಕ್ ನಿಯೋ ಬ್ರಾಡ್ಬ್ಯಾಂಡ್ ಯೋಜನೆಯನು ಕೇವಲ 449 ರೂ.ಗಳಿಗೆ ನೀಡುತ್ತಿದೆ. ಇದರಲ್ಲಿ ಸೆಕೆಂದಿಗೆ 30 ಮೆಗಾಬೈಟ್ ವೇಗದ ಇಂಟರ್ನೆಟ್ ಲಭ್ಯವಿದ್ದು. ಒಂದು ತಿಂಗಳಲ್ಲಿ 3300ಜಿಬಿ ಇಂಟರ್ನೆಟ್ ಲಭ್ಯವಿರಲಿದೆ. ಎಂದರೆ ದಿನಕ್ಕೆ 100 ಜಿಬಿಗಿಂತ ಅಧಿಕ ಇಂಟರ್ನೆಟ್ ಲಭ್ಯವಾಗಲಿದೆ. ದೈನಂದಿನ ಡೇಟಾ ಖಾಲಿಯಾದ ಬಲಿಕ್ವೂ ಇದರಲ್ಲಿ ಕಡಿಮೆ ವೇಗದ ಇಂಟರ್ನೆಟ್ ಆನಂದಿಸಬಹುದು. ಇದರೊಂದಿಗೆ ಇಂಟರ್ನೆಟ್ ವ್ಯಾಪ್ತಿಯೊಳಗೆ ಉಚಿತ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಾಗಲಿದೆ. ಮೂರು ತಿಂಗಳಿಗೆ ಈ ಯೋಜನೆಯನ್ನು ಪಡೆದರೆ 50 ರೂಪಾಯಿ ಡಿಸ್ಕೌಂಟ್ ಕೂಡ ಲಭ್ಯವಿರಲಿದೆ.
ಇದನ್ನೂ ಓದಿ- ಏರ್ಟೆಲ್ ನಿಂದ ಹೊಸ ಪ್ಲಾನ್ ಬಿಡುಗಡೆ; ಹೊಸ ವರ್ಷಕ್ಕೆ ಸಿಕ್ತು ಬೊಂಬಾಟ್ ಉಡುಗೊರೆ
ಬಿಎಸ್ಎನ್ಎಲ್ ಫೈಬರ್ ಬೇಸಿಕ್ ಪ್ಲಾನ್ ಬೆಲೆ ಪ್ರಯೋಜನ:
ಬಿಎಸ್ಎನ್ಎಲ್ ಫೈಬರ್ ಬೇಸಿಕ್ ಪ್ಲಾನ್ ಬೆಲೆ ಕೇವಲ 499 ರೂ.ಗಳು. ಮೂರು ತಿಂಗಳಿಗೆ ಒಟ್ಟಿಗೆ ಈ ಪ್ಲಾನ್ ಪಡೆದರೆ ಒಟ್ಟು 100 ರೂಪಾಯಿ ರಿಯಾಯಿತಿ ದೊರೆಯುತ್ತದೆ. ಈ ಯೋಜನೆಯಲ್ಲಿ ಪ್ರತಿ ಸೆಕೆಂಡಿಗೆ 50 ಮೆಗಾಬೈಟ್ ವೇಗದ ಇಂಟರ್ನೆಟ್ ದೊರೆಯುತ್ತದೆ. ಇದರಲ್ಲೂ ತಿಂಗಳಿಗೆ 3300 ಜಿಬಿ ಡೇಟಾ ದೊರೆಯುತ್ತದೆ. ದೈನಂದಿನ ಡೇಟಾ ಮುಗಿದ ಬಳಿಕವೂ ನಿಧಾನ ವೇಗದ ಇಂಟರ್ನೆಟ್ ಲಭ್ಯವಾಗಲಿದೆ.
ಗಮನಿಸಿ: ಬಿಎಸ್ಎನ್ಎಲ್ ನೀಡಿರುವ ಈ ಕೊಡುಗೆಯ ಲಾಭವನ್ನು ಪಡೆಯಲು ಆಸಕ್ತರಾಗಿದ್ದರೆ ಈ ವರ್ಷಾಂತ್ಯದ ಒಳಗೆ ಎಂದರೆ ಡಿಸೆಂಬರ್ 31 ರ ಮೊದಲು ಈ ಯೋಜನೆಗಳನ್ನು ಪಡೆಯಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.