ಇದಕ್ಕೆ ಆಗಾಗ ಹೆಣ್ಮಕ್ಳು ಅಡುಗೆ ಮನೆ ಕಡೆ ಹೋಗ್ಬೇಕು ಅನ್ನೋದು.. ತಿನ್ನೋಕಲ್ಲ..! ವಿಡಿಯೋ ನೋಡಿ ಗೊತ್ತಾಗುತ್ತೆ..

Viral video : ಅಪರ್ಣಾ ಸಿಂಗ್ ಎಂಬುವರು ಹಂಚಿಕೊಂಡಿರುವ ವಿಡಿಯೋ ಒಂದು ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಮಗಳನ್ನು ಅಡುಗೆ ಮನೆಗೆ ಕರೆದೊಯ್ದು ನೀಡಿದ ಟಾಸ್ಕ್‌ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತ ಪಡಿಸುತ್ತಿದ್ದಾರೆ.. ಈ ಕುರಿತು ವಿಡಿಯೋ ಇಲ್ಲಿದೆ. ನೋಡಿ.. 

Written by - Krishna N K | Last Updated : Dec 22, 2024, 01:29 PM IST
    • ವಿಡಿಯೋ ಒಂದು ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ.
    • ಮಗಳಿಗೆ ಕುಕ್ಕರ್‌ ಮುಚ್ಚುವಂತೆ ಸವಾಲ್‌ ಹಾಕಿದ ತಾಯಿ
    • ಕುಕ್ಕರ್‌ ಮುಚ್ಚುಳ ಮುಚ್ಚಲು ಬಾರದೆ ತಲೆಕೆಡಿಸಿಕೊಂಡ ಮಗಳು
ಇದಕ್ಕೆ ಆಗಾಗ ಹೆಣ್ಮಕ್ಳು ಅಡುಗೆ ಮನೆ ಕಡೆ ಹೋಗ್ಬೇಕು ಅನ್ನೋದು.. ತಿನ್ನೋಕಲ್ಲ..! ವಿಡಿಯೋ ನೋಡಿ ಗೊತ್ತಾಗುತ್ತೆ.. title=

Girl viral video : ವಯಸ್ಸಿಗೆ ಬಂದ ಮೇಲೆ ಮದುವೆ ಆಗಿ ಗಂಡನ ಮನೆಗೆ ಹೋಗ್ಬೇಕು.... ನಿಂಗೆ ನೋಡಿದ್ರೆ ಕುಕ್ಕರ್‌ಗೆ ಮುಚ್ಚಳ ಹಾಕುವುದೂ ಗೊತ್ತಿಲ್ಲ ಎಂದು ಅಮ್ಮ ಆಗಾಗ ಮನೆ ಹೆಣ್ಮಕ್ಕಳಿಗೆ ಬೈಯುವುದು ಉಂಟು.. ಪೋಷಕರೂ ಮಕ್ಕಳಿಗೆ ದುಡಿಯಲು ಹೇಳುವುದಿಲ್ಲ.. ಕಷ್ಟ ಎದುರಿಸುವ ಹಾದಿ ತೋರಿಸುತ್ತಾರೆ.. ಅಷ್ಟೆ..

ಅಷ್ಟೇ ಏಕೆ, ಮನೆಯಲ್ಲಿ ತಾಯಿ ಇಲ್ಲದಿದ್ದರೆ ಸ್ವಿಗ್ಗಿ.. ಝೊಮ್ಯಾಟೋಸ್.. ಆಶ್ರಯಿಸುವ ಹುಡುಗಿಯರ ಇಂದು ಹೆಚ್ಚಾಗುತ್ತಿದ್ದಾರೆ.. ಗಂಡು ಮಕ್ಕಳಾದರೂ ಅಲ್ಪ ಸಲ್ಪ ಅಡುಗೆ ಕಲಿತಿರುತ್ತಾರೆ.. ಏಕೆಂದರೆ ಅಡುಗೆ ಮನೆಯಲ್ಲಿ ಅಮ್ಮನ ಜೊತೆ ಮಾತನಾಡುತ್ತಲೇ ನೋಡಿ ಕಲಿತು ಬಿಡುತ್ತಾರೆ.. ಆದ್ರೆ ಇಂದಿನ ಹೆಣ್ಮಕ್ಳು ಅಡುಗೆ ಮನೆ ಕಡೆ ಹೋಗುವುದೇ ಇಲ್ಲ..

ಇದನ್ನೂ ಓದಿ:ಮಶ್ರೂಮ್‌ ಸಸ್ಯಹಾರಿನಾ..? ಅಥವಾ ಮಾಂಸಹಾರಿನಾ..? ಅನೇಕ ವರ್ಷಗಳಿಂದ ಕಾಡ್ತಿದ್ದ ಗೊಂದಲಕ್ಕೆ ಕೊನೆಗೂ ಉತ್ತರ ಕಂಡುಹಿಡಿದ ವಿಜ್ಞಾನಿಗಳು

ಈ ಹಿಂದೆ ಪಾಲಕರು ತಮ್ಮ ಮಕ್ಕಳಿಗೆ ಮನೆಯ ಜವಾಬ್ದಾರಿಗಳನ್ನು ಹೇಳಿಕೊಡುತ್ತಿದ್ದರು. ಹುಡುಗರು ಹೊರಗೆ ಹೋಗಿ ದುಡಿಯಬೇಕು, ಹುಡುಗಿಯರು ಮನೆಗೆಲಸ ಮಾಡಬೇಕು ಎಂಬ ಮನಸ್ಥಿತಿ ಇತ್ತು. ಅದಕ್ಕೇ ಚಿಕ್ಕಂದಿನಿಂದಲೂ ಹೆಣ್ಣು ಮಕ್ಕಳಿಗೆ ಮನೆಕೆಲಸ, ಅಡುಗೆ ಕಲಿಸುತ್ತಿದ್ದಳು ಅಮ್ಮ. ಆದರೆ ಈಗ ಕಾಲ ಬದಲಾಗಿದೆ. ಎಲ್ಲದರಲ್ಲೂ ಬದಲಾವಣೆ ಆಗುವಂತೆ.. ತಂದೆ ತಾಯಿಯರ ಆಲೋಚನೆಗಳಲ್ಲೂ ಬದಲಾವಣೆ ಆಗುತ್ತಿದೆ. 

ಹೆಣ್ಣು ಮಗುವನ್ನು ಗಂಡು ಮಗುವಿನಂತೆ ಬೆಳೆಸುವ ಪೋಷಕರಿದ್ದಾರೆ. ಅದಕ್ಕೆ ತಕ್ಕಂತೆ ಹುಡುಗಿಯರು ಹುಡುಗರಿಗಿಂತ ಕಡಿಮೆ ಇಲ್ಲ ಎಂಬಂತೆ ದುಡಿಯುತ್ತಿದ್ದಾರೆ. ಶಿಕ್ಷಣದಲ್ಲಿ ಮಾತ್ರ ಹಲವು ವಿಷಯಗಳಲ್ಲಿ ಮುಂದಿದ್ದಾರೆ. ಅದಕ್ಕೇ ಹೆಣ್ಣುಮಕ್ಕಳಿಗೆ ಎಷ್ಟೇ ವಯಸ್ಸಾದರೂ ಕನಿಷ್ಠ ಅನ್ನ ಬೇಯಿಸಲು ಬರುವುದಿಲ್ಲ. ಇದಕ್ಕೆ ಜೀವಂತ ಸಾಕ್ಷಿ ಎಂಬಂತೆ ಇತ್ತೀಚೆಗೆ ವೈರಲ್ ವಿಡಿಯೋ..

ಇದನ್ನೂ ಓದಿ:ಇಬ್ಬರು ಮಕ್ಕಳ ತಂದೆಯನ್ನ ಪ್ರೀತಿಸಿದ 3 ಮಕ್ಕಳ ತಾಯಿ; ಕ್ಲೈಮ್ಯಾಕ್ಸ್​ನಲ್ಲಿ ರೋಚಕ ಟ್ವಿಸ್ಟ್ ಕೊಟ್ಟ ಮೊದಲ ಪತಿ!!

ಈ ವಿಡಿಯೋದಲ್ಲಿ ಯುವತಿಯೊಬ್ಬಳು ಕುಕ್ಕರ್ ಮುಚ್ಚಲು ಎಷ್ಟೋ ಪ್ರಯತ್ನಿಸಿದರೂ ಆಗಲ್ಲ.. ವಾಸ್ತವವಾಗಿ ಕುಕ್ಕರ್‌ನ ಮುಚ್ಚಳವನ್ನು ಹೇಗೆ ಹಾಕಬೇಕು ಎಂಬುದರ ಬಗ್ಗೆ ಈಕೆಗೆ ಸ್ವಲ್ಪವೂ ತಿಳುವಳಿಕೆ ಇರಲ್ಲ.. ಆಮೇಲೆ ಅಪರ್ಣಾ ಅವರು ತಮ್ಮ ಮಗಳಿಗೆ ಕುಕ್ಕರ್‌ ಮುಚ್ಚುವುದು ಹೇಗೆ ಅಂತ ಹೇಳಿಕೊಡುತ್ತಾರೆ.. ಈ ತಮಾಷೆಯ ವಿಡಿಯೋ 24 ಲಕ್ಷ ವೀಕ್ಷಣೆ ಪಡೆದಿದೆ. ಅನೇಕರು ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News