Aishwarya Rai-Salman Khan: ನಟ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರಿಬ್ಬರ ಬೇರೆ ಬೇರೆ ದಾರಿಗಳು ಹಲವು ವರ್ಷಗಳ ಹಿಂದೆ ಸ್ಪಷ್ಟವಾದವು... ಆದರೆ ಇಂದಿಗೂ ಐಶ್ವರ್ಯಾ-ಸಲ್ಮಾನ್ ಸಂಬಂಧ ಚರ್ಚೆಯಾಗುತ್ತಿದೆ. ಸದ್ಯ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಬ್ರೇಕಪ್ ಆದ ನಂತರ ಸಲ್ಮಾನ್ - ಐಶ್ವರ್ಯ ಒಬ್ಬರ ಮುಖವನ್ನೂ ನೋಡಿರಲಿಲ್ಲ. ಆದರೆ ಈಗ AI ಸಹಾಯದಿಂದ ಇಬ್ಬರ ಕೆಲವು ಫೋಟೋಗಳನ್ನು ರಚಿಸಲಾಗಿದೆ. ಫೋಟೋಗಳಲ್ಲಿ ಇಬ್ಬರೂ ಒಂದೇ ರೀತಿಯ ಬಟ್ಟೆಗಳನ್ನು ಧರಿಸಿದ್ದಾರೆ.
ಒಂದು ಫೋಟೋದಲ್ಲಿ, ಐಶ್ವರ್ಯಾ ರೈ ಸಲ್ಮಾನ್ ಖಾನ್ ಸ್ಕೂಟಿಯಲ್ಲಿ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಫೋಟೊಗಳು ಫೇಕ್ ಆಗಿದ್ದರೂ ಅಭಿಮಾನಿಗಳು ಸಾಕಷ್ಟು ಇಷ್ಟಪಟ್ಟಿದ್ದಾರೆ.
ಪ್ರತಿ ದಂಪತಿಗಳು ಒಮ್ಮೆಯಾದರೂ 'ಗೇಟ್‌ವೇ ಆಫ್ ಇಂಡಿಯಾ'ದಲ್ಲಿ ಐಸ್‌ಕ್ರೀಂ ಸವಿಯುತ್ತಾರೆ. ಚಿತ್ರದಲ್ಲಿ ಸಲ್ಮಾನ್ ಮತ್ತು ಐಶ್ವರ್ಯಾ ಕೂಡ ಐಸ್ ಕ್ರೀಮ್ ತಿನ್ನುತ್ತಿರುವುದನ್ನು ಕಾಣಬಹುದು.
ಸಲ್ಮಾನ್-ಐಶ್ವರ್ಯ ಅವರ ಎಐ ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯ ಸುರಿಮಳೆಗೈಯುತ್ತಿದ್ದಾರೆ. ಇವರಿಬ್ಬರ ಫೋಟೋಗಳಿಗೆ ಕಮೆಂಟ್ ಮಾಡಿರುವ ನೆಟಿಜನ್ ʼಸುಂದರವಾದ ಜಗತ್ತಿನಲ್ಲಿ ಸಲ್ಮಾನ್-ಐಶ್ವರ್ಯಾ...' ಎಂದಿದ್ದಾರೆ.
ಸಲ್ಮಾನ್-ಐಶ್ವರ್ಯಾ ಮುಂಬೈನ ಬೀದಿಗಳಲ್ಲಿ ವಡಾ ಪಾವ್ ತಿನ್ನುತ್ತಿರುವ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಒಟ್ಟಿನಲ್ಲಿ ಈ ವೈರಲ್ ಮಾಡಲಾದ ಪೋಟೋಗಳಲ್ಲಿ ಸಲ್ಮಾನ್-ಐಶ್ವರ್ಯ ಒಟ್ಟಿಗೆ ಮುಂಬೈನಲ್ಲಿ ಸುತ್ತಾಡುತ್ತಿದ್ದಾರೆ. ಸಲ್ಮಾನ್ ಮತ್ತು ಐಶ್ವರ್ಯ ಬ್ರೇಕಪ್ ಆದ ನಂತರವೂ ಇಬ್ಬರೂ ಸದಾ ಸುದ್ದಿಯಲ್ಲಿರುತ್ತಾರೆ.