ಕಂಠೀರವ ಸ್ಟುಡಿಯೋ ರಸ್ತೆಯ ಕಂದಕಕ್ಕೆ ಬಿದ್ದು ಅವಘಡ : ಕೆಪಿಟಿಸಿಎಲ್‌ ಸ್ಪಷ್ಟನೆ

ಮೋಟಾರು ಸೈಕಲ್ ಸವಾರ ಕಂದಕಕ್ಕೆ ಬಿದ್ದ ಘಟನೆ ಇತ್ತೀಚೆಗೆ ವರದಿಯಾಗಿದೆ. ಪೊಲೀಸರು ಮತ್ತು ಸಾರ್ವಜನಿರ ಪ್ರಕಾರ, ವ್ಯಕ್ತಿಯು ಮದ್ಯದ ಅಮಲಿನಲ್ಲಿ ದುಡುಕಿನ ಚಾಲನೆಯಲ್ಲಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದದ್ದ.. ಆದರೆ,

Written by - Krishna N K | Last Updated : Dec 12, 2024, 05:52 PM IST
    • ಕಂಠೀರವ ಸ್ಟುಡಿಯೋದ ಮುಖ್ಯ ರಸ್ತೆಯಲ್ಲಿ ಭೂಗತ ಕೇಬಲ್ ಅಳವಡಿಕೆ
    • ಭೂಗತ ಕೇಬಲ್ ಅಳವಡಿಸುವ ಕಾಮಗಾರಿಗಾಗಿ ತೋಡಿದ್ದ ಕಂದಕ
    • ಕಂದಕಕ್ಕೆ ಬಿದ್ದು ಗಾಯಗೊಂಡಿದ್ದ ಬೈಕ್‌ ಸವಾರನ ಕುರಿತು ಸ್ಪಷ್ಟನೆ ನೀಡಿದ ಕೆಪಿಟಿಸಿಎಲ್‌
ಕಂಠೀರವ ಸ್ಟುಡಿಯೋ ರಸ್ತೆಯ ಕಂದಕಕ್ಕೆ ಬಿದ್ದು ಅವಘಡ : ಕೆಪಿಟಿಸಿಎಲ್‌ ಸ್ಪಷ್ಟನೆ title=

ಬೆಂಗಳೂರು : ಕಂಠೀರವ ಸ್ಟುಡಿಯೋದ ಮುಖ್ಯ ರಸ್ತೆಯಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿಗಾಗಿ ತೋಡಿದ್ದ ಕಂದಕ್ಕೆ ಅಡ್ಡವಾಗಿ ಬ್ಯಾರಿಕೇಡ್ ಹಾಕಿದ್ದರೂ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಅದಕ್ಕೆ ಡಿಕ್ಕಿ ಹೊಡೆದು ಬಿದ್ದಿದ್ದಾನೆ ಹೊರತು ಇಲಾಖೆಯ ನಿರ್ಲಕ್ಷ್ಯದಿಂದ ಅಲ್ಲ ಎಂದು ಕೆಪಿಟಿಸಿಎಲ್‌ ಗುರುವಾರ ಸ್ಪಷ್ಟಡಿಸಿದೆ. 

ಈ ಸಂಬಂಧ ಮಾಧ್ಯಗಳಲ್ಲಿ ಪ್ರಸಾರವಾಗಿರುವ ವರದಿಯಲ್ಲಿ ಕೆಪಿಟಿಸಿಎಲ್‌ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ, ಇದು ಸತ್ಯಕ್ಕೆ ದೂರವಾದುದು. ದ್ವಿಚಕ್ರ ವಾಹನದಲ್ಲಿದ್ದ ವ್ಯಕ್ತಿಯು ಮದ್ಯದ ಅಮಲಿನಲ್ಲಿ ಇದ್ದುದರಿಂದ ಅವಘಡ ಸಂಭವಿಸಿದೆ ಎಂದು ಕೆಪಿಟಿಸಿಎಲ್‌ ಪ್ರಕಟಣೆ ತಿಳಿಸಿದೆ. 

ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆಯನ್ನು ಮೀರಿಸುತ್ತೆ ಈ ಡಬಲ್ ಮರ್ಡರ್ ಸ್ಟೋರಿ..! ಲವ್ವರ್‌ಗೆ ಮೆಸೇಜ್ ಮಾಡಿದ್ದಕ್ಕೆ ಇಬ್ಬರು ಮಟ್ಯಾಶ್

ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಲಾರ್ಸನ್ ಮತ್ತು ಟೂಬ್ರೊ (ಎಲ್ & ಟಿ) ಸಹಯೋಗದೊಂದಿಗೆ ಪೀಣ್ಯದಿಂದ ಆನಂದ್ ರಾವ್ ವೃತ್ತದವರೆಗೆ 220 ಕೆವಿ ಭೂಗತ  ಕೇಬಲ್ (ಯುಜಿ) ಅಳವಡಿಸುವ ಕಾಮಗಾರಿ ಕೈಗೊಂಡಿದೆ. ಈ ಯೋಜನೆಯ ಭಾಗವಾಗಿ, ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಂದಕದ ಉದ್ದಕ್ಕೂ ಬ್ಯಾರಿಕೇಡ್‌ಗಳನ್ನು ಅಳವಡಿಸುವುದು ಸೇರಿದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮೋಟಾರು ಸೈಕಲ್ ಸವಾರ ಕಂದಕಕ್ಕೆ ಬಿದ್ದ ಘಟನೆ ಇತ್ತೀಚೆಗೆ ವರದಿಯಾಗಿದೆ. ಪೊಲೀಸರು ಮತ್ತು ಸಾರ್ವಜನಿರ ಪ್ರಕಾರ, ವ್ಯಕ್ತಿಯು ಮದ್ಯದ ಅಮಲಿನಲ್ಲಿ ದುಡುಕಿನ ಚಾಲನೆಯಲ್ಲಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದದ್ದ. ತಕ್ಷಣವೇ ಆತನನ್ನು ಪ್ರಥಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ನಂತರ ಡಿಸ್ಚಾರ್ಜ್ ಮಾಡಲಾಗಿದೆ. ಸದ್ಯ ಮೋಟಾರ್ ಸೈಕಲ್ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ವಶದಲ್ಲಿದೆ.

ಇದನ್ನೂ ಓದಿ:ಸಾಧನೆ ಮತ್ತು ಆದರ್ಶಕ್ಕೆ ಮತ್ತೊಂದು ಹೆಸರು ಎಸ್.ಎಂ ಕೃಷ್ಣ : ಡಿಸಿಎಂ ಡಿ.ಕೆ. ಶಿವಕುಮಾರ್

ತನ್ನ ಕಡೆಯಿಮದ ಯಾವುದೇ ನಿರ್ಲಕ್ಷ್ಯ ಆಗಿಲ್ಲ ಎಂದು ಸ್ಪಷ್ಟಪಡಿಸಿರುವ ಕೆಪಿಟಿಸಿಎಲ್‌, ಘಟನೆಯ ಬಳಿಕ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಸುರಕ್ಷತೆಗಾಗಿ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದೆ. ಯುಜಿ ಕೇಬಲ್ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಈ ವೇಳೆ ಆಗುವ ಅನಾನುಕೂಲತೆಗಾಗಿ ವಿಷಾದಿಸಿರುವ ಕೆಪಿಟಿಸಿಎಲ್‌, ಸಾರ್ವಜನಿಕರ ಸಹಕಾರವನ್ನು ಕೋರಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News