Pragya Nagra viral video : ಇತ್ತೀಚಿಗೆ ಸ್ಟಾರ್ ನಟ ನಟಿಯರ ಖಾಸಗಿ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ. ಇದೀಗ ಈ ಫೈಕಿ ಸ್ಟಾರ್ ನಟಿಯೊಬ್ಬರ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ..? ಬನ್ನಿ ನೋಡೋಣ..
ಖಾಸಗಿ ವಿಡಿಯೋ ಆನ್ಲೈನ್ನಲ್ಲಿ ಸೋರಿಕೆಯಾದ ಹಿನ್ನಲೆ ಮಲಯಾಳಂ ಸೆನ್ಸೇಷನ್ ನಟಿ ಪ್ರಜ್ಞಾ ನಾಗ್ರಾ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ನಟಿಗೆ ಬೆದರಿಕೆ ಹಾಕುವ ಹಿನ್ನೆಲೆ ಈ ಕ್ಲಿಪ್ ಅನ್ನು ಲೀಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.. ಸಧ್ಯ MMS ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ..
ನಟಿ ಪ್ರಜ್ಞಾ ಅವರದ್ದು ಎನ್ನಲಾದ ವೀಡಿಯೊದ ಮೂಲ ಸ್ಪಷ್ಟವಾಗಿಲ್ಲ. ಕ್ಲಿಪ್ನ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗಿಲ್ಲ. ಯಾರೋ ಕಿಡಿಗೇಡಿಗಳು ಮಾರ್ಫಿಂಗ್ ಮಾಡಿ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಸಧ್ಯ ನಟಿಯ ವಿಡಿಯೋ ಎಲ್ಲೇಡೆ ಹರಿದಾಡುತ್ತಿದೆ..
ನಟಿ ಪ್ರಜ್ಞಾ ಇನ್ಸ್ಟಾಗ್ರಾಮ್ನಲ್ಲಿ 1.1 ಮಿಲಿಯನ್ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ವರಲಾರು ಮುಕ್ಕಿಯಂ (2022) ಎಂಬ ತಮಿಳು ಸಿನಿಮಾ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಮಲಯಾಳಂ ಚಲನಚಿತ್ರ ನಧಿಕಲಿಲ್ ಸುಂದರಿ ಯಮುನಾ (2023) ನಲ್ಲಿ ಕಾಣಿಸಿಕೊಂಡಿದ್ದರು. ತಮಿಳು ಚಲನಚಿತ್ರ N4 ನಲ್ಲಿ 'ಸ್ವಾತಿ' ಪಾತ್ರವನ್ನು ನಿರ್ವಹಿಸಿದ್ದಾರೆ. ತೆಲುಗು ಚಲನಚಿತ್ರ ಲಗ್ಗಮ್ನಲ್ಲಿ ನಟಿಸಿದ್ದಾರೆ.
ಡಿಸೆಂಬರ್ 14, 1998 ರಂದು ಹರಿಯಾಣದ ಅಂಬಾಲಾದಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ಪ್ರಜ್ಞಾ ನಾಗ್ರಾ ದೆಹಲಿಯಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ಆಕೆಯ ತಂದೆ ಚೆನ್ನೈನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಾಲೇಜು ದಿನಗಳಲ್ಲಿ, ಪ್ರಜ್ಞಾ ಮಾಡೆಲಿಂಗ್ನಲ್ಲಿ ಉತ್ಸಾಹವನ್ನು ಬೆಳೆಸಿಕೊಂಡರು, ಅಂತಿಮವಾಗಿ ನಟನೆಯತ್ತ ಮುಖ ಮಾಡಿದರು. 100 ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯಕ್ಕೆ, ಪ್ರಜ್ಞಾ ನಾಗ್ರಾ ಮತ್ತು ಅವರ ತಂಡವು ಸೋರಿಕೆಯಾದ ವೀಡಿಯೊ ಅಥವಾ ಅದರ ಸತ್ಯಾಸತ್ಯತೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಭಿಮಾನಿಗಳು ಮತ್ತು ಅನುಯಾಯಿಗಳು ಈ ವಿಷಯದ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಕಾಯುತ್ತಿದ್ದಾರೆ. ಕೆಲವು ನೆಟ್ಟಿಗರು ಇದು ಮಾರ್ಫಿಂಗ್ ವಿಡಿಯೋ ಎನ್ನುತ್ತಿದ್ದಾರೆ..