Vegetable Prices Hike: ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಮಾರುಕಟ್ಟೆಗೆ ತರಕಾರಿಗಳು ಬರುತ್ತಿಲ್ಲ. ಹಾಗಾಗಿ ಸಹಜವಾಗಿ ತರಕಾರಿ ಬೆಲೆಗಳಲ್ಲಿ ಗಣನೀಯ ಏರಿಕೆಯಾಗಿದೆ. ತರಕಾರಿ ಬೆಲೆಗಳನ್ನು ಕೇಳಿ ಗ್ರಾಹಕ ಗರ ಬಡಿದಂತವನಾಗುತ್ತಿದ್ದಾನೆ.
ತುಂತುರು ಮಳೆ ನಿಲ್ಲುತ್ತಲೇ ಇಲ್ಲ. ಬಿಸಿಲು ಬರುತ್ತಿಲ್ಲ. ಚಳಿ ಹೆಚ್ಚಾಗಿದೆ, ತಂಡಿ ಗಾಳಿ ಹಿಂಸೆ ಕೊಡುತ್ತಿದೆ. ಶೀತ, ನೆಗಡಿ, ಜ್ವರಗಳು ಬಾಧಿಸತೊಡಗಿವೆ. ಫೆಂಗಲ್ ಚಂಡಮಾರುತದಿಂದ ಇವಿಷ್ಟೆಯಲ್ಲ ಸಮಸ್ಯೆ. ಜನಸಾಮಾನ್ಯರಿಗೆ ಪ್ರತಿನಿತ್ಯವೂ ಬೇಕಾಗುವ ತರಕಾರಿ ಬೆಲೆಗಳು ಆಕಾಶ ಏರಿ ಕುಳಿತಿವೆ. ಕಳೆದ ನಾಲ್ಕು ದಿನಗಳಿಂದ ತರಕಾರಿಗಳ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಬೆಲೆ ಕೇಳಿದ ಗ್ರಾಹಕರಿಗೆ ಶಾಕ್ ಗೆ ಒಳಗಾಗುತ್ತಿದ್ದಾನೆ.
ಇದನ್ನೂ ಓದಿ- Business Idea: ಚಳಿಗಾಲದಲ್ಲಿ ಕೇವಲ 4 ರಿಂದ 5 ಗಂಟೆ ಕೆಲಸ ಮಾಡಿ, ಕೈ ತುಂಬಾ ಹಣ ಸಂಪಾದಿಸಿ!
ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲೆಡೆ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಇದರಿಂದ ರೈತರಿಗೆ ತರಕಾರಿಗಳನ್ನು ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣದಲ್ಲಿ ಅರ್ಧಕ್ಕೆ ಅರ್ಧದಷ್ಟು ಕಡಿಮೆಯಾಗಿದೆ. ಇದರಿಂದ ತರಕಾರಿ ಬೆಲೆ ಒಂದರ ಬೆಲೆ ಎರಡಾಗಿದೆ. ಗಗನಕ್ಕೇರಿರುವ ತರಕಾರಿ ಬೆಳೆಗಳನ್ನು ಕೇಳಿದ ಗ್ರಾಹಕರು ಸುಸ್ತಾಗಿ ಸುಧಾರಿಸಿಕೊಳ್ಳುವಂತಾಗಿದೆ.
ರೈತರಿಗೆ ಬೆಳೆದ ತರಕಾರಿಗಳನ್ನು ಮಾರಲು ಸಾಧ್ಯವಾಗದ ಸಮಸ್ಯೆ. ಗ್ರಾಹಕರಿಗೆ ತಮ್ಮ ದಿನನಿತ್ಯದ ಅಗತ್ಯಕ್ಕೆ ತಕ್ಕಷ್ಟು ತರಕಾರಿಯನ್ನು ಕೊಳ್ಳಲಾಗದ ಪರಿಸ್ಥಿತಿ. ಒಟ್ಟಾರೆ ಫೆಂಗಲ್ ಚಂಡಮಾರುತದಿಂದಾಗಿ ನಾಲ್ಕು ದಿನದಿಂದ ಮಾರುಕಟ್ಟೆಗೆ ಬರುವ ತರಕಾರಿ ಕಡಿಮೆಯಾಗಿದ್ದು ಅದರ ಪರಿಣಾಮ ತರಕಾರಿ ಬೆಲೆಗಳು ಆಕಾಶ ಏರಿ ಕುಳಿತಿವೆ.
ಇದನ್ನೂ ಓದಿ- SCAM ALERT: SBI ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದೀರಾ? ಹಾಗಿದ್ರೆ ನಿಮ್ಮ ಫೋನ್ ಗೆ ಈ ರೀತಿ ಮೆಸೇಜ್ ಬರಬಹುದು, ಎಚ್ಚರ!
ಯಾವ ತರಕಾರಿಗೆ ಎಷ್ಟು ಬೆಲೆ ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ತರಕಾರಿ ಹೆಸರು | ಕೆಜಿಗೆ ಎಷ್ಟು ರೂಪಾಯಿ |
ಬೀಟ್ ರೋಟ್ | 70-80 ರೂ. |
ಬೀನ್ಸ್ | 75-110 ರೂ. |
ಗ್ರೀನ್ ಕ್ಯಾಪ್ಸಿಕಂ | 62 ರೂ. |
ಯೆಲ್ಲೊ ಕ್ಯಾಪ್ಸಿಕಂ | 395 ರೂ. |
ರೆಡ್ ಕ್ಯಾಪ್ಸಿಕಂ | 395 ರೂ. |
ಮೆಣಸಿನಕಾಯಿ | 62 ರೂ. |
ಕ್ಯಾರೆಟ್ | 116 ರೂ. |
ಎಲೆಕೋಸು ರೆಡ್ | 110 ರೂ. |
ಚೆರ್ರಿ ಟೊಮೆಟೊ | 220 ರೂ. |
ಟೊಮೆಟೊ | 80 ರೂ. |
ಶುಂಠಿ | 160 ರೂ. |
ಬೆಂಡೆಕಾಯಿ | 75 ರೂ. |
ಈರುಳ್ಳಿ | 70-80 ರೂ. |
ಬೆಳುಳ್ಳಿ | 530 ರೂ. |
ಆಲೂಗಡ್ಡೆ | 60 ರೂ. |
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.