ಧಾರವಾಡ : ಕಲಬುರ್ಗಿ ಅವರ ಶ್ರೇಷ್ಠತೆ ಇರುವುದು ಕೇವಲ ಅವರು ಹಿರಿಯ ಸಂಶೋಧಕರು ಆಗಿದ್ದರು ಎಂಬುವುದಕ್ಕಲ್ಲ; ಅವರು ಸೃಜನಶೀಲ ಬರಹಗಾರರಾಗಿದ್ದರು ಎಂಬ ಕಾರಣಕ್ಕೂ ಅಲ್ಲ; ಅದಕ್ಕಿಂತ ಅವರಲ್ಲಿದ್ದ ಮಾನವೀಯ ಅಂಥಃಕರಣ ಎಂಬುದು ಅವರ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತದೆ. ನಾವು ಮಾಡುವಂತಹ ಕೆಲಸದಲ್ಲಿ ನಿಷ್ಠ ಇಲ್ಲದಿದ್ದರೆ ನಮ್ಮ ಬದುಕು ಶೃತಿ ಕೆಟ್ಟ ಸಂಗೀತವಾಗುತ್ತದೆ ಎಂದು ಹೇಳುತ್ತಿದ್ದರು. ಸಂಗೀತ ಮತ್ತು ಅಧ್ಯಯನದಲ್ಲಿ ಯಾವುದೇ ರೀತಿಯ ಅಡೆತಡೆಗಳು ಬರದಂತೆ ಎಚ್ಚರ ವಹಿಸಿದ ವ್ಯಕ್ತಿ ನಮ್ಮ ಕಲಬುರ್ಗಿಯವರು ಎಂದು ನಾಡೋಜ ಗೊ.ರು.ಚನ್ನಬಸಪ್ಪ ಅವರು ಹೇಳಿದರು.
ಅವರು ಇಂದು ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಲಾದ ಡಾ.ಎಂ.ಎಂ.ಕಲಬುರ್ಗಿ ಅವರ 86 ನೇ ಜನ್ಮ ದಿನಾಚರಣೆ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಗ್ರಂಥ ಬಿಡುಗಡೆ ಕಾರ್ಯಕ್ರಮದ ಅಂಗವಾಗಿ ಡಾ.ಎಂ.ಎಂ.ಕಲಬುರ್ಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಕಲಬುರ್ಗಿ ಅವರು ಯಾವುದೇ ಕೊರತೆ, ಹಸಿವು, ನಿದ್ದೆಗಳ ಹಂಗಿಲ್ಲದೆ ಕೆಲಸ ಮಾಡುವ ವ್ಯಕ್ತಿ ಆಗಿದ್ದರು. ಸಾಮಾನ್ಯವಾಗಿ ನಾವು ಸಮಗ್ರ ಎಂಬ ಪದವನ್ನು ಬಳಸುತ್ತೇವೆ. ಸಮಗ್ರ ಅಂದರೆ ಪೂರ್ಣವಾಗಿದ್ದು, ಒಟ್ಟಾಗಿರುವುದು ಎಂಬ ಅರ್ಥ ಇದೆ. ಲೋಕವ್ಯವಹಾರದಲ್ಲಿ ಸಮಗ್ರ ನೋಟ, ಸಮಗ್ರ ವರದಿ, ಸಮಗ್ರ ವ್ಯಕ್ತಿತ್ವ ಎಂಬ ಇಂತಹ ಪದಗಳನ್ನು ಬಳಸುತ್ತೇವೆ. ವ್ಯಕ್ತಿಗತವಾಗಿ ಅನ್ವಯಿಸುವುದಾದರೆ ಅದು ನಮ್ಮ ನೆಚ್ಚಿನ ಸಾಹಿತಿಗಳಾದ ಡಾ.ಎಂ.ಎಂ ಕಲಬುರ್ಗಿ ಅವರಿಗೆ ಅನ್ವಯಿಸುತ್ತದೆ ಎಂದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಅವರು ಕಲಬುರ್ಗಿ ಅವರ ಸಮಗ್ರ ಲೇಖನಗಳು ಪ್ರಕಟವಾಗಬೇಕು. ಸರಕಾರ ಕಲಬುರ್ಗಿ ಟ್ರಸ್ಟ್ ಸ್ಥಾಪಿಸಿದೆ, ಅವರ ಮನಸ್ಸಿನಲ್ಲಿ ಏನು ಇತ್ತೋ ಅದೆಲ್ಲಾ ಇಂದು ನೆರವೇರುತ್ತಿದೆ. ಕಲಬುರ್ಗಿ ಅವರು ತಮ್ಮ ಸಾಧನೆ, ಅವರು ನಡೆದು ಬಂದ ಬದುಕು, ಇದಾವುದರ ಬಗ್ಗೆಯೂ ಸಹ ಬರೆಯಲಿಲ್ಲ.
ಅವರು ಸಂಶೋಧನೆ ಸ್ತರಗಳ ಬಗ್ಗೆ ಬರೆದರು. ಮುಂದೆ ಬರುವಂತಹ ವಿದ್ಯಾರ್ಥಿಲೋಕಕ್ಕೆ ತಿಳುವಳಿಕೆ ಉಂಟಾಗಬೇಕು. ಸಂಶೋಧನೆ ಅಂದರೆ ಏನು?, ಸಂಶೋಧನೆಯ ಬಗ್ಗೆ ಯಾಕೆ ಆಸಕ್ತಿಯನ್ನು ಹೊಂದಬೇಕು, ಸಂಶೋಧನೆಯ ಸ್ವರೂಪ ಯಾವುದು ಎಂಬುದನ್ನು ತಿಳಿಸಿಕೊಡುವುದು ಪ್ರಾಮಾಣಿಕ ಪ್ರಯತ್ನವನ್ನು ಅವರು ಮಾಡಿದರು.
ಡಾ.ಎಂ.ಎಂ.ಕಲಬುರ್ಗಿ ವಚನ ಸಂಗೀತ ಪ್ರಶಸ್ತಿ ಪುರಸ್ಕೃತ ಡಾ. ಶರಣಬಸಪ್ಪ ಮೇಡೆದಾರ ಅವರು ಮಾತನಾಡಿ, ಡಾ.ಎಂ.ಎಂ.ಕಲಬುರ್ಗಿ ಹೆಸರಿನ ಪ್ರಶಸ್ತಿ ಪಡೆದಿರುವುದಾಗಿ ತುಂಬಾ ಸಂತಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಹೆಚ್ಚು ಶರಣರ ವಚನಗಳು ಮತ್ತು ಸಾಹಿತ್ಯವನ್ನು ಉತ್ತಮವಾಗಿ ನಿಮ್ಮ ಮುಂದೆ ಹಾಡುತ್ತೇನೆ. ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಸ್ವತಃ ನಾನೇ ಬರೆದು ಕಲಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ. ಎಚ್. ಚನ್ನೂರ, ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷ ವೀರಣ್ಣ ರಾಜೂರ, ಉಮಾದೇವಿ ಎಂ. ಕಲಬುರ್ಗಿ ಉಪಸ್ಥಿತರಿದ್ದರು.
ಡಾ. ಎಂ ಎಂ ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಸದಸ್ಯ ಶಶಿಧರ ತೊಡಕರ ಅವರು ಅತಿಥಿ ಪರಿಚಯ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು. ಡಾ.ಈರಣ್ಣ ಇಂಜಗನೇರಿ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಸದಸ್ಯ ಡಾ. ಬಾಳಣ್ಣ ಶೀಗಿಹಳ್ಳಿ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರು, ಗಣ್ಯವ್ಯಕ್ತಿಗಳು, ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
**