ನವೆಂಬರ್ 20 ರಂದು ಅಂದರೆ ನಾಳೆ ಬ್ಯಾಂಕ್‌ಗಳಿಂದ ಷೇರು ಮಾರುಕಟ್ಟೆಗಳಿಗೆ, ಶಾಲಾ-ಕಾಲೇಜುಗಳಿಂದ ಸರ್ಕಾರಿ ಕಚೇರಿಗಳವರೆಗೆ ರಜೆ ಇರಲಿದೆ. ಮದ್ಯದ ಅಂಗಡಿಗಳು ಸಂಪೂರ್ಣ ಬಂದ್. ನಾಳೆ ಬ್ಯಾಂಕುಗಳಿಗೂ ರಜೆ ಇರಲಿದೆ. ಅಷ್ಟೇ ಅಲ್ಲ, 4 ದಿನ ಮದ್ಯದಂಗಡಿ ಬಂದ್ ಸಂಪೂರ್ಣ ಬಂದ್.
ನವೆಂಬರ್ 20 ರಂದು ಮಹಾರಾಷ್ಟ್ರದಲ್ಲಿ ವಿಧಾನಸಭೆಗೆ ಮತದಾನ ನಡೆಯಲಿದೆ. ಮತದಾನದ ಕಾರಣ ಮುಂಬೈ, ನಾಗ್ಪುರ, ಬೇಲಾಪುರದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲು ಆರ್‌ಬಿಐ ನಿರ್ಧರಿಸಿದೆ. ಬ್ಯಾಂಕ್‌ಗಳನ್ನು ಮುಚ್ಚುವುದರಿಂದ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಇದನ್ನೂ ಓದಿ : Daily GK Quiz: ಕರ್ನಾಟಕದ ಮೊದಲ ಟೆಸ್ಟ್ ಆಟಗಾರ ಯಾರು..?
ಮಹಾರಾಷ್ಟ್ರ ಚುನಾವಣೆಯ ಕಾರಣ ನವೆಂಬರ್ 20 ರಂದು ಷೇರು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಯುವುದಿಲ್ಲ. ಎನ್‌ಎಸ್‌ಇ, ನವೆಂಬರ್ 8 ರಂದು ತನ್ನ ಅಧಿಸೂಚನೆಯಲ್ಲಿ, ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ಕಾರಣದಿಂದ 2024 ರ ನವೆಂಬರ್ 20 ರ ಬುಧವಾರದಂದು ವಿನಿಮಯವನ್ನು ಮುಚ್ಚಲಾಗುವುದು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಈಕ್ವಿಟಿ, ಇಕ್ವಿಟಿ ಡೆರಿವೇಟಿವ್‌ಗಳು ಮತ್ತು ಎಸ್‌ಎಲ್‌ಬಿ ವಿಭಾಗಗಳಲ್ಲಿ ಯಾವುದೇ ವಹಿವಾಟು ಇರುವುದಿಲ್ಲ. ಕರೆನ್ಸಿ ಉತ್ಪನ್ನಗಳ ವಿಭಾಗದಲ್ಲಿಯೂ ವಹಿವಾಟು ನಡೆಯುವುದಿಲ್ಲ. ಇದರ ಹೊರತಾಗಿ, ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ಮತ್ತು ರಾಷ್ಟ್ರೀಯ ಸರಕು ವಿನಿಮಯ (NCDEX) ನಲ್ಲಿನ ವಹಿವಾಟು ಕೂಡಾ ನವೆಂಬರ್ 20 ರಂದು ಬಂದ್ ಆಗಿರಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
4 ದಿನ ಮದ್ಯ ಮಾರಟಕ್ಕೆ ನಿಷೇಧ :
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈನಲ್ಲಿ ನಾಲ್ಕು ದಿನಗಳ ಡ್ರೈ ಡೇ . ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಚುನಾವಣಾ ಆಯೋಗವು ಮದ್ಯ ಮಾರಾಟವನ್ನು ನಿಲ್ಲಿಸುವಂತೆ ಆದೇಶಿಸಿದೆ. ಮತದಾನದ ವೇಳೆ ಮತದಾರರಲ್ಲಿ ಮದ್ಯದ ಆಮಿಷಗಳನ್ನು ತಡೆಗಟ್ಟುವುದು ಚುನಾವಣಾ ಆಯೋಗದ ಉದ್ದೇಶವಾಗಿದೆ. ಇದಕ್ಕಾಗಿ ಮುಂಬೈ ಮತ್ತು ಥಾಣೆ, ಪುಣೆ ಸೇರಿದಂತೆ ಇತರ ನಗರಗಳಲ್ಲಿ ನವೆಂಬರ್ 18 ರಂದು ಸಂಜೆ 6 ಗಂಟೆಯ ನಂತರ ಮದ್ಯ ಮಾರಾಟವನ್ನು ಆಯೋಗ ನಿಷೇಧಿಸಿದೆ. ನವೆಂಬರ್ 19 ರಂದು ನಗರದಲ್ಲಿ ಡ್ರೈ ಡೇ ಮತ್ತು ನವೆಂಬರ್ 20 ರಂದು ಮತದಾನದ ಕಾರಣ ಇಡೀ ದಿನ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇದರ ಹೊರತಾಗಿ ನವೆಂಬರ್ 23 ರಂದು ಚುನಾವಣಾ ಆಯೋಗವು ಸಂಜೆ 6 ಗಂಟೆಯವರೆಗೆ ಭಾಗಶಃ ಮದ್ಯಪಾನವನ್ನು ನಿಷೇಧಿಸಿದೆ. ಇದಲ್ಲದೆ ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳು ಸಹ ಮುಚ್ಚಲ್ಪಡುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.