Operation Ration Card: ಸರ್ಕಾರದ ಯಾವುದೇ ಯೋಜನೆಗಳಿರಲಿ, ಅವು ಅರ್ಹರಿಗೆ ಮಾತ್ರವೇ ಸಿಗಬೇಕು. ಆದರೆ ರೇಷನ್ ಕಾರ್ಡ್ ವಿಷಯದಲ್ಲಿ ಸಿಕ್ಕಾಪಟ್ಟೆ ದುರುಪಯೋಗ ಆಗಿದೆ. ಅನರ್ಹರು ಒಂದೆಡೆ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳುತ್ತಲೇ ಇನ್ನೊಂದೆಡೆ ‘ಇದರಿಂದ ಬೊಕ್ಕಸಕ್ಕೆ ನಷ್ಟ. ನಮ್ಮ ತೆರಿಗೆ ಹಣ ವ್ಯರ್ಥ’ ಅಂತೆಲ್ಲಾ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದಿನಿಂದ ‘ಆಪರೇಷನ್ ರೇಷನ್ ಕಾರ್ಡ್’ ಶುರುಮಾಡಿದೆ. ಅನರ್ಹ ಫಲಾನುಭವಿಗಳ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲು ಮುಂದಾಗಿದೆ.
ನೆರೆಯ ತಮಿಳುನಾಡು, ಆಂಧ್ರ ಮತ್ತು ತೆಲಂಗಾಣದಲ್ಲಿ ಸುಮಾರು ಶೇಕಡಾ 50ರಷ್ಟು ಜನ ರೇಷನ್ ಕಾರ್ಡ್ ವ್ಯಾಪ್ತಿಗೆ ಸೇರಿದ್ದಾರೆ. ಆದರೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 80ರಷ್ಟು ರೇಷನ್ ಕಾರ್ಡ್ ವ್ಯಾಪ್ತಿಯಲ್ಲಿ ಇದ್ದಾರೆ. ವಾಸ್ತವ ಏನು ಎಂದರೆ ನಿಜಕ್ಕೂ ರಾಜ್ಯದ ಶೇಕಡಾ 80ರಷ್ಟು ಜನ ಬಡತನ ರೇಖೆಗಿಂತ ಕೆಳಗೆ ಇಲ್ಲ. ತುಂಬಾ ಜನ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಎಚ್ಛೆತ್ತುಕೊಂಡಿರುವ ಸರ್ಕಾರ ಈಗ ಅನರ್ಹರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಕೆಲಸ ಆರಂಭಿಸಿದೆ.
ಸದ್ಯದ ರಾಜ್ಯ ಸರ್ಕಾರಗಳಿಂದ ಸಿಗುತ್ತಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಶೀಘ್ರವೇ ಎಲ್ಲಾ ರೀತಿಯ ಸೌಲಭ್ಯಗಳು ಇದ್ದು ಕೂಡ, ಸುಳ್ಳು ಮಾಹಿತಿ ನೀಡಿ ಪಡೆದಿರುವ 14 ಲಕ್ಷ ಬಿಪಿಎಲ್ ಕಾರ್ಡ್ ರದ್ದಾಗುವ ಸಾಧ್ಯತೆಗಳಿವೆ. ಆಹಾರ ಮತ್ತು ಪಡಿತರ ಇಲಾಖೆ ಅನರ್ಹ ಬಿಪಿಎಲ್ ಕಾರ್ಡುಗಳ ಗುರುತಿಸುವಿಕೆಯನ್ನು ಆರಂಭಿಸಿದ್ದು ಈಗಾಗಲೇ 3 ಲಕ್ಷ ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ (ಬಡತನ ರೇಖೆಗಿಂತ ಮೇಲಿರುವವರು) ಕಾರ್ಡುಗಳೆಂದು ಬದಲು ಮಾಡಲಾಗಿದೆ.
ಇದನ್ನೂ ಓದಿ- ನಿಮ್ಮ ಆಧಾರ್ ಕಾರ್ಡ್ ಅನ್ನು ಬೇರೆ ಯಾರಾದ್ರೂ ಬಳಸ್ತಾ ಇದ್ದಾರಾ? ಎರಡೇ ನಿಮಿಷದಲ್ಲಿ ಹೀಗೆ ಪತ್ತೆ ಹಚ್ಚಿ!
ಯಾರ ಬಿಪಿಎಲ್ ಕಾರ್ಡುಗಳು ರದ್ದಾಗಲಿವೆ?
ರಾಜ್ಯ ಸರ್ಕಾರ ಅನರ್ಹ ಬಿಪಿಎಲ್ ಕಾರ್ಡ್ ದಾರರನ್ನು ಗುರುತಿಸಲು ಮಾನದಂಡ ರೂಪಿಸಿದೆ. ಅದರ ಪ್ರಕಾರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೌಕರರು, ಅರೆ ಸರ್ಕಾರಿ ನೌಕರರು, ನಿಗಮ-ಮಂಡಳಿಯ ಕಾಯಂ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರ ಬಿಪಿಎಲ್ ಕಾರ್ಡುಗಳು ರದ್ದಾಗಲಿವೆ. ಇವರೆಲ್ಲರ ಬಿಪಿಎಲ್ ಕಾರ್ಡುಗಳನ್ನು ಕೂಡಲೇ ಎಪಿಎಲ್ ಕಾರ್ಡುಗಳೆಂದು ಬದಲು ಮಾಡಲಾಗುತ್ತದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೌಕರರು, ಅರೆ ಸರ್ಕಾರಿ ನೌಕರರು, ನಿಗಮ-ಮಂಡಳಿಯ ಕಾಯಂ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರ ಹೆಸರಿನಲ್ಲಿ ಇರುವ ಬಿಪಿಎಲ್ ಕಾರ್ಡುಗಳನ್ನು ಮಾತ್ರವಲ್ಲ, ಇವರನ್ನೊಳಗೊಂಡ ಕುಟುಂಬದ ಬೇರೆಯವರ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಇದ್ದರೆ ಆ ಕುಟುಂಬದ ಕಾರ್ಡ್ ಕೂಡ ರದ್ದಾಗಲಿದೆ.
ಬಾಡಿಗೆ ಮನೆಯವರ ಬಗ್ಗೆ ಏನು ಕ್ರಮ?
ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಕೆಲವರು ಮನೆ ಅಥವಾ ಇನ್ನಿತರ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಕೊಟ್ಟು ಜೀವನ ನಡೆಸುತ್ತಿದ್ದಾರೆ. ಬಾಡಿಗೆ ಎನ್ನುವುದು ಜೀವನ ನಿರ್ವಹಣೆಯ ಆದಾಯ ಮೂಲವಾಗಿರುವುದರಿಂದ ಅಂತಹವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಅದನ್ನು ರದ್ದುಗೊಳಿಸಲಾಗುತ್ತದೆ.
ಇದನ್ನೂ ಓದಿ- TAX ವಿಷಯದಲ್ಲಿ ಸ್ವಲ್ಪ ರಿಲೀಫ್ ಕೊಡಿ ಮೇಡಂ ಎಂಬ ಟ್ವೀಟ್ ಗೆ ನಿರ್ಮಲಾ ಸೀತಾರಾಮನ್ ರಿಪ್ಲೆ ಏನು ಗೊತ್ತಾ?
ಎಷ್ಟು ಭೂಮಿ ಇದ್ದರೆ ಬಿಪಿಎಲ್ ಕಾರ್ಡ್ ಹೋಗುತ್ತೆ?
ಗ್ರಾಮಾಂತರ ಪ್ರದೇಶಗಳಲ್ಲಿ ಕೆಲವರು ದೊಡ್ಡ ಮಟ್ಟದಲ್ಲಿ ಭೂಮಿಯನ್ನು ಹೊಂದಿ ಅದರಿಂದ ಜೀವನ ನಿರ್ವಹಣೆ ಮಾಡಬಹುದಾದರೂ ಬಿಪಿಎಲ್ ಕಾರ್ಡ್ ಪಡೆದು ಅರ್ಹರ ಹೊಟ್ಟೆಯ ಮೇಲೆ ಹೊಡೆಯುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕುಟುಂಬಕ್ಕೆ 7.5 ಎಕರೆಗಿಂತ ಹೆಚ್ಚು ಜಮೀನು ಇದ್ದರೆ ಅವರಿಗೆ ನೀಡಿರುವ ಬಿಪಿಎಲ್ ಕಾರ್ಡುಗಳನ್ನು ಕ್ಯಾನ್ಸಲ್ ಮಾಡಲಾಗುತ್ತದೆ.
ಬೇರೆ ಯಾವ್ಯಾವ ಮಾನದಂಡಗಳಿವೆ?
ಇವತ್ತು ಕಾರು ಹೊಂದುವುದು ಲೆಕ್ಸುರಿ ಅಲ್ಲ, ಜೀವನಾನಿವಾರ್ಯ ಎನ್ನುವ ಮಾತು ಇದೆ. ಆದರೆ ಒಂದು ಕಾರನ್ನು ನಿರ್ವಹಿಸಬಲ್ಲ ವ್ಯಕ್ತಿ ಅಥವಾ ಕುಟುಂಬ ಬಡತನ ರೇಖೆಗಿಂತ ಮೇಲಿರಲಿದೆ ಎನ್ನುವ ವ್ಯಾಖಾನವೂ ಇದೆ. ಈ ಹಿನ್ನೆಲೆಯಲ್ಲಿ ಸ್ವಂತಕ್ಕೆಂದು (ವೈಟ್ ಬೋರ್ಡ್) 4 ಚಕ್ರ ವಾಹನ ಹೊಂದಿರುವವರ ಬಿಪಿಎಲ್ ಕಾರ್ಡುಗಳನ್ನು ಕೂಡ ಕೈಬಿಡಲಾಗುತ್ತದೆ.
ಬಡತನ ರೇಖೆಗಿಂತ ಕೆಳಗಿರುವವರು ಎಂದು ನಿರ್ಧರಿಸಲು ಸರ್ಕಾರ ಕೆಲವೊಂದು ಮಾನದಂಡ ರೂಪಿಸಿದೆ. ಕುಟುಂಬದ ವಾರ್ಷಿಕ ವರಮಾನ ಇಂತಿಷ್ಟೇ ಇರಬೇಕು ಎನ್ನುವ ನಿಯಮ ಇದೆ. ಆ ಮಾನದಂಡದ ಅನುಸಾರ ನಿಗದಿತ ವಾರ್ಷಿಕ ವರಮಾನಕ್ಕಿಂತ ಹೆಚ್ಚು ಗಳಿಸುತ್ತಿರುವವರ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಲಾಗುತ್ತದೆ. ಅದೇ ರೀತಿ ನಿಯಮಾವಳಿಗಳಿಗಿಂತ ವಾರ್ಷಿಕವಾಗಿ ಹೆಚ್ಚು ವಹಿವಾಟು ಮಾಡುವವರ ಬಿಪಿಎಲ್ ಕಾರ್ಡುಗಳನ್ನೂ ಕ್ಯಾನ್ಸಲ್ ಮಾಡಲಾಗುತ್ತದೆ.
ಬಿಪಿಎಲ್ ಕಾರ್ಡ್ ರದ್ದು ಮಾಡುವ ಬಗ್ಗೆ ಸಿಎಂ ಪ್ರತಿಕ್ರಿಯೆ ಏನು?
ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಏನೂ ತೊಂದರೆ ಆಗುವುದಿಲ್ಲ. ಅವರ ಕಾರ್ಡ್ ರದ್ದಾಗುವುದಿಲ್ಲ. ಯಾರು ಅನರ್ಹರೋ ಅವರ ಬಿಪಿಎಲ್ ಕಾರ್ಡುಗಳು ಮಾತ್ರ ರದ್ದಾಗುತ್ತವೆ. ಬಡವರಿಗೆ ಸರ್ಕಾರ ಸಹಾಯ ಮಾಡಬೇಕು. ಅದಕ್ಕಾಗಿ ಅನರ್ಹರನ್ನು ಕೈಬಿಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ ಬಿಜೆಪಿ ಅಥವಾ ಜೆಡಿಎಸ್ ಸರ್ಕಾರಗಳು ಎಂದಾದರೂ ಅನ್ನಭಾಗ್ಯ ಯೋಜನೆಯನ್ನು ಕೊಟ್ಟಿವೆಯಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ‘ನಾನು 2013ರಲ್ಲಿ ಮೋದಲ ಬಾರಿಗೆ ಮುಖ್ಯಮಂತ್ರಿಯಾದಾಗ 1 ರೂಪಾಯಿಗೆ 1 ಕೆಜಿ ಅಕ್ಕಿ ಕೊಡಲು ಶುರುಮಾಡಿದೆ. ಈಗ ಉಚಿತವಾಗಿ ಕೊಡಲಾಗುತ್ತಿದೆ’ ಎಂದು ಹೇಳಿದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ