ವಿರಾಟ್ ಕೊಹ್ಲಿ ಕುಡಿಯುವ ನೀರಿನ 1 ಲೀಟರ್ ಬೆಲೆ ಎಷ್ಟು ಸಾವಿರ ರೂಪಾಯಿ ಗೊತ್ತಾ?

virat kohli water: 'ಫಿಟ್ನೆಸ್ ಫ್ರೀಕ್' ವಿರಾಟ್ ಫಿಟ್‌ನೆಸ್‌ಗೆ ಅವರು ಕುಡಿಯುವ ನೀರು ಕೂಡ ಸಾಕಷ್ಟು ಸಹಾಯಕವಾಗಿದೆ. ವಿರಾಟ್ ಕುಡಿಯುವ ನೀರಿನ ಬೆಲೆ ಲೀಟರ್‌ಗೆ 3000 ರಿಂದ 4000 ರೂಪಾಯಿ ಎಂದು ಹೇಳಲಾಗುತ್ತಿದೆ. 

Written by - Chetana Devarmani | Last Updated : Nov 18, 2024, 06:18 PM IST
ವಿರಾಟ್ ಕೊಹ್ಲಿ ಕುಡಿಯುವ ನೀರಿನ 1 ಲೀಟರ್ ಬೆಲೆ ಎಷ್ಟು ಸಾವಿರ ರೂಪಾಯಿ ಗೊತ್ತಾ? title=

Virat Kohli : ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಅವರು ನಿಯಮಿತ ವರ್ಕೌಟ್ ಜೊತೆ‌ ಡಯೆಟ್‌ ಅನ್ನು ಕೂಡ ಅಚ್ಚುಕಟ್ಟಾಗಿ ಪಾಲಿಸುತ್ತಾರೆ. 'ಫಿಟ್ನೆಸ್ ಫ್ರೀಕ್' ವಿರಾಟ್ ಫಿಟ್‌ನೆಸ್‌ಗೆ ಅವರು ಕುಡಿಯುವ ನೀರು ಕೂಡ ಸಾಕಷ್ಟು ಸಹಾಯಕವಾಗಿದೆ. ವಿರಾಟ್ ಕುಡಿಯುವ ನೀರಿನ ಬೆಲೆ ಲೀಟರ್‌ಗೆ 3000 ರಿಂದ 4000 ರೂಪಾಯಿ ಎಂದು ಹೇಳಲಾಗುತ್ತಿದೆ. 

ಈ ನೀರು ಸಾಮಾನ್ಯ ನೀರಿಗಿಂತ ಭಿನ್ನವಾಗಿದೆ. ಇದರಲ್ಲಿ ಅನೇಕ ಖನಿಜಗಳನ್ನು ಬಳಸಲಾಗುತ್ತದೆ. ಈ ನೀರಿನ ಬಣ್ಣವೂ ಕಪ್ಪು. ಆದ್ದರಿಂದ ಇದನ್ನು ಬ್ಲಾಕ್‌‌ ವಾಟರ್ ಎಂದು ಕರೆಯಲಾಗುತ್ತದೆ. 

ಇದು ಸಾಮಾನ್ಯ ನೀರಿಗಿಂತ ಹೆಚ್ಚು ಖನಿಜಗಳನ್ನು ಹೊಂದಿರುತ್ತದೆ. ಇದರ pH ಮಟ್ಟವೂ ಹೆಚ್ಚಾಗಿರುತ್ತದೆ. ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ಇತರ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಈ ನೀರು ಆಂಟಿ ಏಜಿಂಗ್‌ಆಗಿ ಕಾರ್ನನಿರ್ವಹಿಸುತ್ತದೆ. ದೇಹದ ಪಿಹೆಚ್ ಮಟ್ಟವನ್ನು ನಿಯಂತ್ರಿಸುತ್ತದೆ. ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕುವ ಮೂಲಕ ವಿವಿಧ ರೋಗಗಳಿಂದ ರಕ್ಷಿಸಲು ಇದು ಸಹಾಯಕವಾಗಿದೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಚನ್ನಪಟ್ಟಣ ಚುನಾವಣೆಯಲ್ಲಿ ಯಾರು ಬೆಟ್ಟಿಂಗ್ ಕಟ್ಟಬೇಡಿ: ನಿಖಿಲ್ ಕುಮಾರಸ್ವಾಮಿ ಮನವಿ

ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ

ಕಪ್ಪು ನೀರು ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ದೇಹದಲ್ಲಿ ಉತ್ತಮ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಕೆಲಸ ಮಾಡುತ್ತದೆ. ಇದು ಗ್ಯಾಸ್, ಅಸಿಡಿಟಿ ಮುಂತಾದ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.

ಚೆನ್ನಾಗಿ ಹೈಡ್ರೇಟ್ ಮಾಡುತ್ತದೆ

ಕಪ್ಪು ನೀರು ದೇಹವನ್ನು ಚೆನ್ನಾಗಿ ಹೈಡ್ರೇಟ್ ಮಾಡುತ್ತದೆ. ಇದನ್ನು ಎನರ್ಜಿ ಡ್ರಿಂಕ್ ಮತ್ತು ಸ್ಪೋರ್ಟ್ಸ್ ಡ್ರಿಂಕ್ ಎಂದೂ ಕರೆಯುತ್ತಾರೆ. ಆರೋಗ್ಯ ತಜ್ಞರ ಪ್ರಕಾರ ಕಪ್ಪು ನೀರಿನಲ್ಲಿ ಫುಲ್ವಿಕ್ ಆಮ್ಲವಿದೆ. 

ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ

ಕಪ್ಪು ನೀರು ರೋಗನಿರೋಧಕ ಶಕ್ತಿಯನ್ನು ಸಹ ಸುಧಾರಿಸುತ್ತದೆ. ಇದನ್ನು ಕುಡಿಯುವುದರಿಂದ ವ್ಯಕ್ತಿಯ ಜೀರ್ಣಾಂಗ ವ್ಯವಸ್ಥೆಯು ಸುಧಾರಿಸುತ್ತದೆ. ದೇಹದ ಪೌಷ್ಟಿಕಾಂಶದ ಹೀರಿಕೊಳ್ಳುವಿಕೆ ಸುಧಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.

ಚರ್ಮದ ಕಾಂತಿ ಹೆಚ್ಚುತ್ತದೆ

ಕಪ್ಪು ನೀರು ನಿಮ್ಮ ಚರ್ಮಕ್ಕೆ ಉತ್ತಮವೆಂದು ಪರಿಗಣಿಸಲಾಗಿದೆ. ಇದನ್ನು ಕುಡಿಯುವುದರಿಂದ ಚರ್ಮವು ಉತ್ತಮಗೊಳ್ಳುತ್ತದೆ. ಇದು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಜನರು ದೀರ್ಘಕಾಲದವರೆಗೆ ಕಿರಿಯರಾಗಿ ಕಾಣುವಂತೆ ಮಾಡುತ್ತದೆ.

ಈ ನೀರನ್ನು ವಿಶೇಷವಾಗಿ ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಎವಿಯನ್-ಲೆಸ್-ಬೈನ್ಸ್ ಇದು ಜಿನೀವಾ ಸರೋವರದ ದಕ್ಷಿಣ ತೀರದಲ್ಲಿದೆ. ಇದು ಪಶ್ಚಿಮ ಯುರೋಪ್‌ನ ಅತಿದೊಡ್ಡ ಸರೋವರಗಳಲ್ಲಿ ಒಂದಾಗಿದೆ. ಇದನ್ನು ಸ್ವಿಟ್ಜರ್ಲೆಂಡ್ ಮತ್ತು ಫ್ರಾನ್ಸ್ ಹಂಚಿಕೊಂಡಿದೆ. ಇದನ್ನು ಎವಿಯಾನ್ ವಾಟರ್ ಎನ್ನುತ್ತಾರೆ. ಇದನ್ನೇ ವಿರಾಟ್‌ ಕೊಹ್ಲಿ ಕುಡಿಯುತ್ತಾರೆ.

ಇತ್ತೀಚಿನ ದಿನಗಳಲ್ಲಿ ಕಪ್ಪು ನೀರು ಅನೇಕ ಸೆಲೆಬ್ರಿಟಿಗಳ ಆಯ್ಕೆಯಾಗಿದೆ. ಮಲೈಕಾ ಅರೋರಾ, ಊರ್ವಶಿ ರೌಟೇಲಾ, ಶ್ರುತಿ ಹಾಸನ್ ಮತ್ತು ಅನುಷ್ಕಾ ಶರ್ಮಾ ಅವರಂತಹ ಅನೇಕ ಸೆಲೆಬ್ರಿಟಿಗಳು ಕಪ್ಪು ನೀರನ್ನು ಕುಡಿಯುತ್ತಾರೆ. ಫಿಟ್ನೆಸ್ ಬಗ್ಗೆ ಹೆಚ್ಚು ಜಾಗೃತರಾಗಿರುವ ಜನರಲ್ಲಿ ಕಪ್ಪು ನೀರು ಹೆಚ್ಚು ಜನಪ್ರಿಯವಾಗುತ್ತಿದೆ.

ಇದನ್ನೂ ಓದಿ: ಟೀಂ ಇಂಡಿಯಾ ತಂಡಕ್ಕೆ ಹೊಸ ಆಟಗಾರರ ಎಂಟ್ರಿ..! ಆ ಯುವ ಆಟಗಾರರು ಯಾರು ಗೊತ್ತಾ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News