ನವದೆಹಲಿ: ಕೊರೊನಾವೈರಸ್ COVID-19 ಲಾಕ್ಡೌನ್ನ ಕೆಟ್ಟ ಪರಿಣಾಮಗಳು ಈಗ ಸ್ಪಷ್ಟವಾಗಿ ಗೋಚರಿಸಲು ಆರಂಭಿಸಿವೆ. ಭಾರತದ ದೇಶೀಯ ವಿಮಾನಯಾನ ಸಂಸ್ಥೆ ಗೋಏರ್ (GoAir) ಲಾಕ್ಡೌನ್ನ ಈ ಸಮಯದಲ್ಲಿ ತನ್ನ 90 ಪ್ರತಿಶತದಷ್ಟು ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗುವುದಿಲ್ಲ ಎಂದು ಕಂಪನಿಯು ಸ್ಪಷ್ಟಪಡಿಸಿದೆ.
ಕೇಂದ್ರ ಗೃಹ ಸಚಿವಾಲಯದಿಂದ ಕಾರ್ಮಿಕರಿಗೆ ಗುಡ್ ನ್ಯೂಸ್
ಮಾಧ್ಯಮ ವರದಿಗಳ ಪ್ರಕಾರ ಗೋ ಏರ್ ತನ್ನ ಸಿಬ್ಬಂದಿಗೆ ಸಂಬಳ ನೀಡಲು ಹಣವಿಲ್ಲ ಎಂದು ತಿಳಿಸಿದೆ. ಲಾಕ್ಡೌನ್ ಮುಕ್ತಾಯಗೊಂಡ ಬಳಿಕವೇ ಸಿಬ್ಬಂದಿಗಳನ್ನು ಕೆಲಸಕ್ಕೆ ಕರೆಯಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಏತನ್ಮಧ್ಯೆ ಸುಮಾರು 90 ಪ್ರತಿಶತ ಸಿಬ್ಬಂದಿಯನ್ನು ವೇತನವಿಲ್ಲದೆ ರಜೆ ಮೇಲೆ ಕಳುಹಿಸಲಾಗಿದೆ.
ಏತನ್ಮಧ್ಯೆ ಲಾಕ್ಡೌನ್(Lockdown) ತೆರೆದ ನಂತರವೇ ವಿಮಾನಯಾನ ಸಂಸ್ಥೆಗಳಿಗೆ ಟಿಕೆಟ್ ಬುಕಿಂಗ್ ಪ್ರಾರಂಭಿಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಸರ್ಕಾರದ ಮುಂದಿನ ಆದೇಶ ಬರುವವರೆಗೂ ಟಿಕೆಟ್ ಮಾರಾಟವಂತಿಲ್ಲ ಎಂದು ಸಚಿವರು ಹೇಳಿದ್ದಾರೆ.
ಮಾರ್ಚ್ 25 ರಿಂದ ಕೊರೊನಾವೈರಸ್ (Coronavirus) ತಡೆಗಟ್ಟಲು ಇಡೀ ದೇಶದಲ್ಲಿ ಲಾಕ್ಡೌನ್ ಜಾರಿಗೆ ಬಂದಿರುವುದು ಗಮನಾರ್ಹವಾಗಿದೆ. ಇದರಿಂದಾಗಿ ವಿಮಾನ ನಿಲ್ದಾಣಗಳು ಕೂಡ ಮುಚ್ಚಲ್ಪಟ್ಟಿವೆ. ಮೇ 3ರ ಮೊದಲು ವಿಮಾನ ನಿಲ್ದಾಣಗಳು ತೆರೆಯುವುದಿಲ್ಲ ಎಂದು ಸರ್ಕಾರ ಹೇಳಿದೆ.