Beijing Viral News: ಕಪ್ಪು ಬಣ್ಣದ ಮಗು ಹುಟ್ಟಿದ್ದಕ್ಕೆ ಅನುಮಾನಗೊಂಡ ವ್ಯಕ್ತಿಯೊಬ್ಬ ಹೆಂಡತಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಚೀನಾದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ನಾನು ಮತ್ತು ಹೆಂಡತಿ ಇಬ್ಬರೂ ಬಿಳಿ ಬಣ್ಣದವರಾಗಿದ್ದೇವೆ. ಆದರೆ ನಮಗೆ ಅದು ಹೇಗೆ ಕಪ್ಪು ಬಣ್ಣದ ಮಗು ಹುಟ್ಟಲು ಸಾಧ್ಯವೆಂದು ಪ್ರಶ್ನಿಸಿರುವ ಗಂಡ DNA ಪರೀಕ್ಷೆಗೆ ಒತ್ತಾಯಿಸಿದ್ದಾನೆ.
ತನ್ನ ಹೆಂಡತಿಯ ಚಾರಿತ್ರ್ಯ ಸರಿಯಿಲ್ಲವೆಂದು ಆರೋಪಿಸಿರುವ ಆತ ತನಗೆ ವಿಚ್ಛೇದನ ಬೇಕೆಂದು ಅರ್ಜಿ ಸಲ್ಲಿಸಿದ್ದಾನೆ. ವರದಿಯ ಪ್ರಕಾರ, ಸುಮಾರು 1 ತಿಂಗಳ ಹಿಂದೆ 30 ವರ್ಷದ ಮಹಿಳೆ ಸಿ-ಸೆಕ್ಷನ್(C-section delivery) ಮೂಲಕ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಅವರಿಗೆ ಕಪ್ಪು ಬಣ್ಣದ ಮಗು ಹುಟ್ಟಿತ್ತು. ಆಕೆ ಮತ್ತು ಆಕೆಯ ಗಂಡ ಬಿಳಿ ಬಣ್ಣದವರಾಗಿದ್ದು, ಕಪ್ಪು ಮಗು ಹೇಗೆ ಹುಟ್ಟಿತು ಅಂತಾ ಆಕೆಯ ಪತಿ ಆಘಾತಕ್ಕೊಳಗಾಗಿದ್ದಾನೆ. ಇದೇ ಕಾರಣಕ್ಕೆ ಇದೀಗ ಆತ ವಿಚ್ಛೇದನ ಕೋರಿದ್ದಾನೆ.
ಇದನ್ನೂ ಓದಿ: 2024ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ವಿಶ್ವ ನಾಯಕರು..! ಪ್ರಧಾನಿ ಮೋದಿ ಸ್ಥಾನ ಎಷ್ಟು ಗೊತ್ತೆ..?
ಈ ಘಟನೆಯನ್ನು ನೊಂದ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಸಂಕಷ್ಟದ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಸಲಹೆ ಕೇಳಿದ್ದಾಳೆ. ತನ್ನ ಪತಿ ಮೊದಲು ಮಗುವನ್ನು ನೋಡಲು ಬಂದಾಗ ಆಶ್ಚರ್ಯ ವ್ಯಕ್ತಪಡಿಸಿದ್ದ. ಕಪ್ಪು ಬಣ್ಣದ ಮಗುವಿನ ಕಾರಣ ಅದನ್ನು ಎತ್ತಿಕೊಳ್ಳಲು ನಿರಾಕರಿಸಿದ. ನಂತರ DNA ಪರೀಕ್ಷೆ ನಡೆಸಿ ಈ ಮಗು ನನಗೆ ಹುಟ್ಟಿದ್ದು ಅಂತಾ ದೃಢಪಡಿಸುವಂತೆ ಒತ್ತಾಯಿಸಿದ. ಅದು ನಮ್ಮಿಬ್ಬರದ್ದೇ ಮಗು ಅಂತಾ ಎಷ್ಟೇ ಹೇಳಿದರೂ ಆತ ಕೇಳಲಿಲ್ಲವೆಂದು ಮಹಿಳೆ ಬೇಸರ ವ್ಯಕ್ತಪಡಿಸಿದ್ದಾಳೆ.
ಮಗುವಿನ ಕಪ್ಪು ಮೈಬಣ್ಣದಿಂದ ನನಗೂ ಸಹ ಆಶ್ಚರ್ಯವಾಗಿದೆ ಅಂತಾ ಆಕೆ ಹೇಳಿಕೊಂಡಿದ್ದಾಳೆ. ಆದರೆ ಬಣ್ಣದ ಕಾರಣಕ್ಕೆ ನಾನು ಹೆತ್ತ ಮಗುವನ್ನು ಕೈಬಿಡುವುದಿಲ್ಲವೆಂದು ಹೇಳಿದ್ದಾನೆ. ಆಕೆಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಈ ವಿಷಯದ ಬಗ್ಗೆ ಚರ್ಚಿಸಿ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅನೇಕರು ಆಕೆಯ ಪತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇನ್ನೂ ಕೆಲವರು ಬಿಳಿ ಚರ್ಮದ ದಂಪತಿ ಕಪ್ಪು ಚರ್ಮದ ಮಗು ಹೊಂದುವುದು ಕಾಮನ್ ಅಂತಾ ಹೇಳಿದ್ದಾರೆ. ಏನೇ ಆಗಲಿ ಮೊದಲು DNA ಪರೀಕ್ಷೆಯಾಗಲಿ, ಇಲ್ಲವಾದರೆ ನನಗೆ ವಿಚ್ಛೇದನ ನೀಡುವಂತೆ ಮಹಿಳೆಯ ಪತಿ ಪಟ್ಟು ಹಿಡಿದಿದ್ದಾನಂತೆ.
ಇದನ್ನೂ ಓದಿ: ಕರೋನಾ ಬಳಿಕ ಇದೀಗ ಕವಾಸಕಿ ನೊರೊವೈರಸ್ ಸೋಂಕಿನ ಅಪಾಯ !ಹೀಗಿರಲಿದೆ ಈ ರೋಗದ ಲಕ್ಷಣಗಳು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ