Life story of Kannada Producer Ramesh Reddy: ಕನ್ನಡ ಇಂಡಸ್ಟ್ರಿಯಲ್ಲಿ ಬೇಕಾದಷ್ಟು ನಿರ್ಮಾಪಕರು ಸಿಗುತ್ತಾರೆ. ಅಂತಹ ನಿರ್ಮಾಪಕರ ಪಟ್ಟಿಯಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಒಂದು ಹೆಜ್ಜೆ ಮುಂದೆಯೇ ನಿಲ್ಲೋದು ಖುಷಿಯ ಸಂಗತಿ. ಏಕೆಂದರೆ ಈ ಪ್ರೊಡ್ಯೂಸರ್ ನಡೆದು ಬಂದ ಹಾದಿಯೇ ಅಂತಹದ್ದು.
ಗಾಳಿಪಟ 2 ಮತ್ತು ಅರ್ಜುನ್ ಜನ್ಯ ನಿರ್ದೇಶನದ ʼ45ʼ ಸಿನಿಮಾ ಪ್ರೊಡ್ಯೂಸರ್ ಆಗಿರುವ ಈ ರಮೇಶ್ ರೆಡ್ಡಿಯವರು ಎಂಥವರಿಗೂ ಸ್ಫೂರ್ತಿಯಾಗದೆ ಇರಲಾರರು. ಗಾರೆ ಕೆಲಸದಿಂದ ಶುರುವಾದ ಇವರ ಕೆಲಸ ಈಗ ಸ್ಟಾರ್ ನಿರ್ಮಾಪಕ ಎನಿಸಿಕೊಳ್ಳುವ ಮಟ್ಟಿಗೆ ಬೆಳೆದಿದ್ದಾರೆ.
ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಅವರನ್ನ ತಮ್ಮ ಸ್ಪೂರ್ತಿ ಎಂದು ಬದುಕಿರುವ ನಿರ್ಮಾಪಕ ರಮೇಶ್ ರೆಡ್ಡಿ, ಸ್ಯಾಂಡಲ್ವುಡ್‌ನ ಸ್ಟಾರ್ ನಿರ್ಮಾಪಕ ಅಂತಾನೇ ಹೇಳಬಹುದು. ಅರ್ಜುನ್ ಜನ್ಯ ನಿರ್ದೇಶನದ ಮೊದಲ ಸಿನಿಮಾ ʼ45ʼಕ್ಕೆ ರಮೇಶ್ ರೆಡ್ಡಿ ಅವರೇ ನಿರ್ಮಾಪಕ. ಗೋಲ್ಡನ್ ಸ್ಟಾರ್ ನಟನೆಯ ಹಿಟ್ ಸಿನಿಮಾ ʼಗಾಳಿಪಟ ಪಾರ್ಟ್ 2ʼ ನಿರ್ಮಾಣ ಮಾಡಿದ್ದು ಕೂಡ ಇವರೇ.
ಶಿಸ್ತು ಮತ್ತು ಸಂಯಮಕ್ಕೆ ಹೆಸರಾಗಿರುವ ರಮೇಶ್ ರೆಡ್ಡಿಯವರು ಗಾರೆ ಕೆಲಸ ಮಾಡುತ್ತಿದ್ದರಂತೆ. ಅಲ್ಲಿಂದ ಹಂತಹಂತವಾಗಿ ಬೆಳೆದ ಅವರಿಗೆ ಮುಂದೆ ಸುಧಾಮೂರ್ತಿಯವರ ಪರಿಚಯವಾಗುತ್ತದೆ. ಸುಧಾಮೂರ್ತಿ ಅವರ ಸಂಸ್ಥೆಗೆ ಕಾಂಪೌಂಡ್ ಕಟ್ಟುವ ಕೆಲಸ ಜವಾಬ್ದಾರಿ ತಗೊಂಡ ರಮೇಶ್ ರೆಡ್ಡಿ ಇಂದು ಕೋಟಿ ಒಡೆಯ.
ಇದನ್ನೂ ಓದಿ: ಈ ತರಕಾರಿಗಳು ಆರೋಗ್ಯ ಸಂಜೀವಿನಿಯಾಗಿದ್ದರೂ ಬ್ಲಡ್ ಶುಗರ್ ಇದ್ದವರಿಗೆ ಮಾತ್ರ ಇದು ಖಂಡಿತಾ ವಿಷ !ಒಂದು ತುಂಡು ಕೂಡಾ ಸೇವಿಸಬಾರದು
ಇನ್ನೊಂದು ರೋಚಕ ಸಂಗತಿ ಎಂದರೆ, ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಸಿನಿಮಾ ನೋಡಲು ಕ್ಯೂ ನಿಲ್ಲುತ್ತಿದ್ದ ಇದೇ ರಮೇಶ್ ರೆಡ್ಡಿಯವರು, ಇಂದು ಶಿವರಾಜ್ ಕುಮಾರ್ ಅವರ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. ಇದಲ್ಲವೇ ನಿಜವಾದ ಸಾಧನೆ ಅಂದ್ರೆ...!? ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕೇಸಿಗುತ್ತೆ ಅನ್ನೋದಕ್ಕೆ ಇವರೇ ಉತ್ತಮ ಉದಾಹರಣೆ ಎನ್ನಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ