Abhishek Bachchan Aishwarya Rai: ಹಿಂದಿ ಚಿತ್ರರಂಗದ ಹೈಪ್ರೊಫೈಲ್ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯಕ್ಕೆ ಬರ ಸಿಡಿಲು ಬಡಿದು ಅವರಿಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಬಗ್ಗೆ ದಿನಕ್ಕೊಂದು ರೀತಿಯ ವದಂತಿ ಹುಟ್ಟಿಕೊಳ್ಳುತ್ತಿವೆ. ಇದೇ ಹಿನ್ನೆಲೆಯಲ್ಲಿ ಇತ್ತೀಚೆಗೆ ನಿಧನರಾದ ದೇಶದ ಖ್ಯಾತ ಉದ್ಯಮಿ ರತನ್ ಟಾಟಾ ಅವರ ಮಾಜಿ ಲವರ್ ಹಾಗೂ ಮಾಜಿ ನಟಿ ಕಮ್ ಟಾಕ್ ಶೋ ಹೋಸ್ಟ್ ಸಿಮಿ ಗರೆವಾಲ್ ನೀಡಿರುವ ಹೇಳಿಕೆಯಿಂದ ಈ ವಿಚ್ಛೇದನ ವಿವಾದ ಮತ್ತೊಂದು ಸ್ವರೂಪ ಪಡೆದುಕೊಂಡಿದೆ.
ಸೆಲಬ್ರಿಟಿಗಳಿರಲಿ, ನಮ್ಮ-ನಿಮ್ಮಂತಹ ಸಾಮಾನ್ಯರಿರಲಿ ಗಂಡ-ಹೆಂಡತಿಯ ಜಗಳದಲ್ಲಿ ಮೂಗು ತೂರಿಸುವುದು ತರವಲ್ಲ. ಅದರಿಂದ ಸಮಸ್ಯೆ ಬಗೆಹರಿಯುವುದಕ್ಕಿಂತ ಅದು ನಮ್ಮ ಬುಡಕ್ಕೆ ಬರುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಜಗಳದ ವಿಷಯದಲ್ಲೂ ಹಾಗೆ ಹಾಗಿದೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ವದಂತಿ ಬಗ್ಗೆ ಮಾತನಾಡುತ್ತಾ ರತನ್ ಟಾಟಾ ಅವರ ಮಾಜಿ ಲವರ್ ಸಿಮಿ ಗರೆವಾಲ್ ನೀಡಿರುವ ಹೇಳಿಕೆ ಸಿಕ್ಕಾಪಟ್ಟೆ ಸೆನ್ಸೇಷನ್ ಆಗಿದೆ. ಟೆನ್ಷನ್ ಆಗಿ ಸಿಮಿ ಅಗರವಾಲ್ ತಮ್ಮ ಪೋಸ್ಟ್ ಅನ್ನೇ ಡಿಲೀಟ್ ಮಾಡಿದ್ದಾರೆ.
ವಿಷಯ ಏನಪ್ಪಾ ಅಂದ್ರೆ… ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯ ಈಗ ಸರಿ ಇಲ್ಲ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ. ಈಗಾಗಲೇ ಇವರಿಬ್ಬರೂ ಬೇರೆ ಬೇರೆಯಾಗಿದ್ದಾರೆ. ಅಧಿಕೃತವಾಗಿ ಕೆಲವೇ ದಿನಗಳಲ್ಲಿ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎನ್ನುವ ವದಂತಿ ಸಿಕ್ಕಾಪಟ್ಟೆ ಜೋರಾಗಿದೆ. ಈ ನಡುವೆ ರತನ್ ಟಾಟಾ ಮಾಜಿ ಲವರ್ ಸಿಮಿ ಗರೆವಾಲ್ ಅವರು ಅಭಿಷೇಕ್ ಬಚ್ಚನ್ ಅವರನ್ನು ಸಮರ್ಥಿಸುವಂತಹ ಒಂದು ಪೋಸ್ಟ್ ಹಾಕಿದ್ದಾರೆ.
ಇದನ್ನೂ ಓದಿ- ಅಭಿಷೇಕ್ ಬಚ್ಚನ್ ಜೊತೆ ಜಗಳ ಆದ್ರೆ ಯಾವಾಗ್ಲೂ ನಾನೇ Sorry ಕೇಳಬೇಕು… ವಿಚ್ಛೇದನ ವದಂತಿ ನಡುವೆ ಐಶ್ವರ್ಯ ರೈ ಮಾತು!
ಸಿಮಿ ಗರೆವಾಲ್ ಅವರು ಅಭಿಷೇಕ್ ಬಚ್ಚನ್ ಜೊತೆ ನಡೆಸಿದ ತಮ್ಮ ‘ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್’ ಟಾಕ್ ಶೋ ತುಣುಕೊಂದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಆ ವಿಡಿಯೋ ತುಣಕಿನಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ‘ಒಳ್ಳೆಯ ಪುರುಷರು’ ಎಂಬ ಪಟ್ಟಿಗೆ ಸೇರಿಸಿದ್ದಾರೆ. ಸಿಮಿ ಗರೆವಾಲ್ ಅವರು ಅಭಿಷೇಕ್ ಬಗ್ಗೆ ‘ಕ್ಯಾರೆಕ್ಟರ್ ಸರ್ಟಿಫಿಕೇಟ್’ ಕೊಟ್ಟ ರೀತಿಯಲ್ಲಿ ಮಾತನಾಡಿರುವುದು ಐಶ್ವರ್ಯ ರೈ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಸಿಮಿ ಗರೆವಾಲ್ ಅಭಿಷೇಕ್ ಬಚ್ಚನ್ ಅವರನ್ನು ‘ಒಳ್ಳೆಯ ಪುರುಷ’ ಎಂದಷ್ಟೇ ಹೇಳಿ ಸುಮ್ಮನಾಗಿಲ್ಲ. ಅವರು ‘ಯಾವ ರೀತಿಯಲ್ಲಿ ಒಳ್ಳೆಯವರು’ ಎಂಬುದನ್ನು ವಿವರಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ‘ಅಭಿಷೇಕ್ ಬಚ್ಚನ್ ಅವರನ್ನು ಗೊತ್ತಿರುವ ಪ್ರತಿಯೊಬ್ಬರೂ ಅವರು ಬಾಲಿವುಡ್ ನಲ್ಲಿ ಬಹಳ ಒಳ್ಳೆಯ ಪುರುಷರಲ್ಲಿ ಒಬ್ಬರು ಎಂಬುದನ್ನು ಒಪ್ಪಿಕೊಳ್ಳುತ್ತಾರೆ ಎಂದುಕೊಂಡಿದ್ದೇನೆ. ಅಭಿಷೇಕ್ ಬಚ್ಚನ್ ಉತ್ತಮ ಮೌಲ್ಯಗಳನ್ನು ಹೊಂದಿರುವ, ಸಹಜವಾಗಿರುವ ಸಭ್ಯ ವ್ಯಕ್ತಿತ್ವವುಳ್ಳವರು’ ಎಂದೆಲ್ಲಾ ಕೊಂಡಾಡಿದ್ದಾರೆ. ಅಭಿಷೇಕ್ ಬಚ್ಚನ್ ಬಗ್ಗೆ ಸಿಮಿ ಗರೆವಾಲ್ ಆಡಿರುವ ಮಾತುಗಳು ಈಗ ಸಂಚಲನ ಮೂಡಿಸಿವೆ.
ಮೊನ್ನೆ ಮೊನ್ನೆಯಷ್ಟೇ ಅಭಿಷೇಕ್ ಬಚ್ಚನ್ ತಮ್ಮ ‘ಲಂಚ್ ಬಾಕ್ಸ್’ ಸಿನಿಮಾ ಹೀರೋಯಿನ್ ನಿಮ್ರತ್ ಕೌರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಸಂಬಂಧ ಹಾಳಾಗಿ ವಿಚ್ಛೇದನ ಪಡೆಯುವ ಹಂತಕ್ಕೆ ತಲುಪಿದೆ ಎಂದು ಚರ್ಚೆಯಾಗುತ್ತಿತ್ತು. ಇದರ ನಡುವೆ ಸಿಮಿ ಗರೆವಾಲ್ ಅವರು ಅಭಿಷೇಕ್ ಬಚ್ಚನ್ ‘ಬಹಳ ಒಳ್ಳೆಯ ಮನುಷ್ಯ, ಸಭ್ಯ, ಉತ್ತಮ ಮೌಲ್ಯ ಇಟ್ಟುಕೊಂಡಿರುವ ವ್ಯಕ್ತಿ’ ಎಂದೆಲ್ಲಾ ಬಣ್ಣಿಸಿರುವುದು ಐಶ್ವರ್ಯ ರೈ ಅಭಿಮಾನಿಗಳನ್ನು ಕೆರಳಿಸಿದೆ.
ಸಿಮಿ ಗರೆವಾಲ್ ಮಂಗಳವಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಷೇಕ್ ಬಚ್ಚನ್ ಬಗ್ಗೆ ಪೋಸ್ಟ್ ಮಾಡುತ್ತಿದ್ದಂತೆ ಐಶ್ವರ್ಯ ರೈ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯ ಕೊನೆಯಾಗಲು ಅಭಿಷೇಕ್ ಬಚ್ಚನ್ ಅವರೇ ಕಾರಣ. ಅವರನ್ನು ಸಮರ್ಥಿಸುವ ಮೂಲಕ ಸಿಮಿ ಗರೆವಾಲ್ ದೊಡ್ಡ ತಪ್ಪು ಮಾಡಿದ್ದಾರೆ ಎನ್ನುವ ಪೋಸ್ಟ್ ಗಳ ಸುನಾಮಿ ಎದ್ದಿತು. ಐಶ್ವರ್ಯ ರೈ ಅಭಿಮಾನಿಗಳ ಆಕ್ರೋಶವನ್ನು ತಡೆದುಕೊಳ್ಳಲಾಗದೆ ಸಿಮಿ ಗರೆವಾಲ್ ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಅವರಿಗೆ ‘ಗಂಡ-ಹೆಂಡತಿಯ ಜಗಳದಲ್ಲಿ ಮೂರನೆಯವರಿರಲಿ-ಆರನೆಯವರಿರಲಿ ಮೂಗು ತೂರಿಸಬಾರದು ಎನ್ನುವುದು ಮನವರಿಕೆಯಾಗಿ ಈಗ ಮೌನಕ್ಕೆ ಜಾರಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.