Ajwain Water For Belly Fat: ಅನೇಕರು ಹೊಟ್ಟೆಯ ಕೊಬ್ಬನ್ನು ಕರಗಿಸಲು ಅನೇಕ ವಿಧಿ ವಿಧಾನಗಳ ಮೊರೆ ಹೋಗುತ್ತಾರೆ, ವ್ಯಾಯಾಮ ಡಯಟ್ ಅಂತ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಾರೆ. ಆದರೆ ಇವೆಲ್ಲವೂ ಬೇಡ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಒಂದು ನೀರು ಸಾಕು.
Ajwain Water For Belly Fat: ಅನೇಕರು ಹೊಟ್ಟೆಯ ಕೊಬ್ಬನ್ನು ಕರಗಿಸಲು ಅನೇಕ ವಿಧಿ ವಿಧಾನಗಳ ಮೊರೆ ಹೋಗುತ್ತಾರೆ, ವ್ಯಾಯಾಮ ಡಯಟ್ ಅಂತ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಾರೆ. ಆದರೆ ಇವೆಲ್ಲವೂ ಬೇಡ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಒಂದು ನೀರು ಸಾಕು.
ಇತ್ಥಿಚಿನ ಜೀವನ ಶೈಲಿಯ ಕಾರಣದಿಂದಾಗಿ ಅನೇಕರ ಅಧಿಕ ತೂಕ ಹಾಗೂ ಬೊಜ್ಜಿನಿಂದ ಬಳಲುತ್ತಿದ್ದಾರೆ.
ಜನರು ತಮ್ಮ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿಕೊಂಡು ತೆಳ್ಳಗೆ ಕಾಣಲು ಹಲವಾರು ಕಸರತ್ತುಗಳನ್ನು ಮಾಡುತ್ತಾರೆ, ವ್ಯಾಯಾಮ, ಜಿಮ್, ಡಯಟ್ನಂತಹ ಹಲವಾರು ಕಸರತ್ತುಗಳನ್ನು ಮಾಡುತ್ತಾರೆ.
ಆದರೆ, ಇದ್ಯಾವುದು ಅಲ್ಲ, ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಸಲು ನೀವು ಕಷ್ಟ ಪಡುವುದು ಬೇಡ, ಕೇವಲ ಈ ಒಂದು ಡಿಟಾಕ್ಸ್ ನೀರನ್ನು ಕುಡಿಯುವುದರಿಂದ ನೀವ ನಿಮ್ಮ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.
ರಾತ್ರಿ ಮಲಗುವ ಮುನ್ನ ಮನೆಯಲ್ಲಿಯೇ ತಯಾರಿಸಿದ ಈ ಡಿಟಾಕ್ಸ್ ಪಾನೀಯವನ್ನು ಕುಡಿದರೆ ನಿಮ್ಮ ಹೊಟ್ಟೆಯ ಕೊಬ್ಬು ಮಂಜು ಗಡೆಡಯಂತೆ ಕರಗಿ ನೀರಾಗುತ್ತದೆ, ಹಾಗಾದರೆ ಯಾವುದು ಆ ನೀರು..? ತಿಳಿಯಲು ಮುಂದೆ ಓದಿ...
ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಈ ಪದಾರ್ಥದ ನೀರನ್ನು ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.
ಅದಕ್ಕೆ ನೀವು, ಒಂದು ಚಮಚ ಅಜ್ವೈನ್, ಸೌನ್ಫ್, ಕೊತ್ತಂಬರಿ ಬೀಜಗಳು, ಒಂದು ಚಿಟಿಕೆ ಅರಿಶಿನ ಮತ್ತು ಒಂದು ಕಪ್ ನೀರನ್ನು ತೆಗೆದುಕೊಳ್ಳಿ.
ಈ ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿಗೆ ಹಾಕಿ ಈ ಮಿಶ್ರ ನೀರನ್ನು ಸ್ಟವ್ ಮೇಲೆ ಕುದಿಯಲು ಇಡಿ. 15-20 ನಿಮಿಷಗಳ ಕಾಲ ಕುದಿಸಿದ ನಂತರ ಇದನ್ನು ಕೆಳಗಿಳಿಸಿ, ರಾತ್ರಿ ಮಲಗುವ ಮುನ್ನ ಈ ನೀರನ್ನು ಸೇವಿಸಿ.
ವಾಮು ಬೀಜ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಇದು ವಾಯುವನ್ನು ಕಡಿಮೆ ಮಾಡುತ್ತದೆ, ಸೋಪು ಬೀಜ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅರಿಶಿನವು ಕೊಬ್ಬನ್ನು ಕರಗಿಸುತ್ತದೆ, ಹಸಿವನ್ನು ಕಡಿಮೆ ಮಾಡುತ್ತದೆ.
ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ, ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಈ ಎಲ್ಲಾ ವೈಶಿಷ್ಟ್ಯಗಳಿಂದಾಗಿ, ಹೊಟ್ಟೆಯ ಸುತ್ತಲೂ ಸಂಗ್ರಹವಾದ ಕೊಬ್ಬು ನೈಸರ್ಗಿಕವಾಗಿ ಕರಗುತ್ತದೆ.
30-50 ವರ್ಷ ವಯಸ್ಸಿನ ಜನರಿಗೆ ಹೊಟ್ಟೆಯ ಕೊಬ್ಬು ತುಂಬಾ ಅಪಾಯಕಾರಿ. ನಿರ್ದಿಷ್ಟವಾಗಿ ಹಾರ್ಮೋನುಗಳ ಅಸಮತೋಲನವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ವಾಮು ಪಾನೀಯವನ್ನು ಕುಡಿಯುವುದರಿಂದ ಹಾರ್ಮೋನ್ ಸಮತೋಲನಗೊಳ್ಳುತ್ತದೆ
(ಗಮನಿಸಿ: ವಿಷಯಗಳು ಮಾಹಿತಿಗಾಗಿ ಮಾತ್ರ. ಇದನ್ನು ನಿಮಗೆ ಯಾವುದೇ ಸಂದೇಹಗಳಿದ್ದರೆ, ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಹೊಣೆಯಲ್ಲ.)