ʼಬಘೀರʼ ಚಿತ್ರದ ʼಪರಿಚಯವಾದೆ..ʼ ಎರಡನೇ ಹಾಡು ಔಟ್‌.! ಪ್ರೇಕ್ಷಕರ ಮನಕದ್ದ ರೊಮ್ಯಾಂಟಿಕ್‌ ಗೀತೆ

Bagheera Kannada movie : ರುಧಿರ ಧಾರಾ ಹಾಡಿನ ಬಳಿಕ ಬಘೀರ ಸಿನಿಮಾದಿಂದ ಇದೀಗ ಎರಡನೇ ಹಾಡು ರಿಲೀಸ್‌ ಆಗಿದೆ. ಮೆಲೋಡಿಯ ಗುಂಗು ಹಿಡಿಸುವ "ಪರಿಚಯವಾದೆ.." ಹಾಡು ಕಿವಿಗಿಂಪು ನೀಡುವುದಷ್ಟೇ ಅಲ್ಲದೆ, ನಾಯಕ ಮತ್ತು ನಾಯಕಿಯ ಕೆಮಿಸ್ಟ್ರಿ ಈ ಹಾಡಿನಲ್ಲಿ ಸಖತ್ ವರ್ಕೌಟ್‌ ಆಗಿದೆ. 

Written by - Krishna N K | Last Updated : Oct 25, 2024, 03:56 PM IST
    • ಬಘೀರ ಚಿತ್ರದ ಎರಡನೇ ಹಾಡು ಬಿಡುಗಡೆ ಆಗಿದೆ.
    • ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಪರಿಚಯವಾದೆ..
    • ವಿಜಯ್ ಕಿರಗಂದೂರು ನಿರ್ಮಾಣದ ಬಘೀರ ಸಿನಿಮಾ..
ʼಬಘೀರʼ ಚಿತ್ರದ ʼಪರಿಚಯವಾದೆ..ʼ ಎರಡನೇ ಹಾಡು ಔಟ್‌.! ಪ್ರೇಕ್ಷಕರ ಮನಕದ್ದ ರೊಮ್ಯಾಂಟಿಕ್‌ ಗೀತೆ title=

Bagheera Parichayavade song : ಇದೇ ಅಕ್ಟೋಬರ್‌ 31ರಂದು ತೆರೆಗೆ ಬರಲಿರುವ ಬಘೀರ ಚಿತ್ರದ ಎರಡನೇ ಹಾಡು ಬಿಡುಗಡೆ ಆಗಿದೆ. ಹಾಡಿನಲ್ಲಿ ನಾಯಕ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಮತ್ತು ನಾಯಕಿ ರುಕ್ಮಿಣಿ ವಸಂತ್‌ ಇಬ್ಬರೂ ಅಷ್ಟೇ ಮುದ್ದಾಗಿ ಕಂಡಿದ್ದಾರೆ. ಖಡಕ್‌ ಪೊಲೀಸ್‌ ಪಾತ್ರದಲ್ಲಿ ಶ್ರೀಮುರಳಿ ಎದುರಾದರೆ, ವೈದ್ಯೆಯಾಗಿ ರುಕ್ಮಿಣಿ ವಸಂತ್‌ ನಟಿಸಿದ್ದಾರೆ. 

ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಪರಿಚಯವಾದೆ.. ಹಾಡಿಗೆ ಪ್ರಮೋದ್ ಮರವಂತೆ ಅವರ ಹೃದಯಸ್ಪರ್ಶಿ ಸಾಹಿತ್ಯವಿದೆ.  ರಿತೇಷ್‌ ಜಿ ರಾವ್‌ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಹೊಂಬಾಳೆ ಫಿಲಂಸ್‌ನ  ಬ್ಯಾನರ್‌ನಲ್ಲಿ ವಿಜಯ್ ಕಿರಗಂದೂರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 

ಇದನ್ನೂ ಓದಿ:0 ವರ್ಷದ ಹೀರೋ ಜೊತೆ ಹೋಟೆಲ್‌ ರೂಮ್‌ನಲ್ಲಿ ಸಿಕ್ಕಿಬಿದ್ದಿದ್ದ ಸ್ಟಾರ್‌ ಹೀರೋಯಿನ್‌! ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿತ್ತು ಶಾಕಿಂಗ್‌ ಸುದ್ದಿ

ಈಗಾಗಲೇ ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪ್ರಶಾಂತ್‌ ನೀಲ್‌, ಈ ಬಘೀರ ಸಿನಿಮಾಕ್ಕೆ ಕಥೆ ಬರೆದಿದ್ದಾರೆ. ಡಾ. ಸೂರಿ ಈ ಸಿನಿಮಾಕ್ಕೆ ನಿರ್ದೇಶನದ ಜತೆಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಎ ಜೆ ಶೆಟ್ಟಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದರೆ, ಚೇತನ್‌ ಡಿಸೋಜಾ ಸಾಹಸ ನಿರ್ದೇಶನ ಮಾಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News