Stock market Updates: ಭಾರತೀಯ ಷೇರು ಮಾರುಕಟ್ಟೆ ಅಕ್ಟೋಬರ್ 22ರ ಮಂಗಳವಾರದ ವಹಿವಾಹಿಟಿನಲ್ಲಿ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದೆ. ಷೇರುಗಳ ಮಾರಾಟದ ಒತ್ತಡಕ್ಕೆ ಒಳಗಾಗಿ BSE ಸೆನ್ಸೆಕ್ಸ್ ಮತ್ತು NSE ನಿಫ್ಟಿ 50ಗಳೆರಡು ಸಹ ತೀವ್ರ ಕುಸಿತ ಕಂಡಿದೆ. ಸೆನ್ಸೆಕ್ಸ್ 930.55 ಅಂಕಗಳು ಅಥವಾ ಶೇ1.15ರಷ್ಟು ನಷ್ಟದೊಂದಿಗೆ 80,220.72ಕ್ಕೆ ದಿನವನ್ನು ಮುಕ್ತಾಯಗೊಳಿಸಿದರೆ, ನಿಫ್ಟಿ 50 309 ಪಾಯಿಂಟ್ ಅಥವಾ ಶೇ.1.25ರಷ್ಟು ಕುಸಿದು 24,472.10ಕ್ಕೆ ಸ್ಥಿರವಾಯಿತು.
ಮಾರುಕಟ್ಟೆಯ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಷೇರುಗಳು ಭಾರೀ ಕುಸಿತ ಕಂಡಿದ್ದು, ಹೂಡಿಕೆದಾರರು ಕೈಸುಟ್ಟಿಕೊಂಡಿದ್ದಾರೆ. BSE ಮಿಡ್‌ಕ್ಯಾಪ್ ಸೂಚ್ಯಂಕವು ಶೇ.2.52ನಷ್ಟದೊಂದಿಗೆ ಕೊನೆಗೊಂಡರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇ.3.81ರಷ್ಟು ಕುಸಿತ ಕಂಡಿತು.BSEನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ಸೆಷನ್‌ನಲ್ಲಿ ಸುಮಾರು ₹453.7 ಲಕ್ಷ ಕೋಟಿಗಳಿಂದ ಸುಮಾರು ₹444.7 ಲಕ್ಷ ಕೋಟಿಗೆ ಕುಸಿದಿದೆ. ಪರಿಣಾಮ ಲಕ್ಷಾಂತರ ಹೂಡಿಕೆದಾರರು ಒಂದೇ ದಿನದಲ್ಲಿ ಸುಮಾರು ₹9 ಲಕ್ಷ ಕೋಟಿಗಳಷ್ಟು ನಷ್ಟ ಅನುಭವಿಇದ್ದಾರೆ.
ಇದನ್ನೂ ಓದಿ: ನಕಲಿ ದಾಖಲೆ ತೋರಿಸಿ ಬಿಪಿಎಲ್ ಕಾರ್ಡ್ ಪಡೆದು ಶಾಕ್‌ನಲ್ಲಿದ್ದವರಿಗೆ ಗುಡ್ ನ್ಯೂಸ್..!
ನಿಫ್ಟಿ 50 ಸೂಚ್ಯಂಕದಲ್ಲಿ ಕೇವಲ ಮೂರು ಷೇರುಗಳು ಮಾತ್ರ ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿವೆ. ಈ ಪೈಕಿ ಐಸಿಐಸಿಐ ಬ್ಯಾಂಕ್ (ಶೇ.0.74), ನೆಸ್ಲೆ (ಶೇ.0.10) ಮತ್ತು ಇನ್ಫೋಸಿಸ್ (ಶೇ.0.04) ಹಸಿರು ಬಣ್ಣದಲ್ಲಿ ವಹಿವಾಟನ್ನು ಅಂತ್ಯಗೊಳಿಸಿವೆ. ವಲಯವಾರು ಸೂಚ್ಯಂಕಗಳಲ್ಲಿ, ನಿಫ್ಟಿ PSU ಬ್ಯಾಂಕ್ (ಶೇ.4.18), ರಿಯಾಲ್ಟಿ (ಶೇ.3.38) ಮತ್ತು ಮೆಟಲ್ (ಶೇ.3) ಹೆಚ್ಚು ಕುಸಿತ ಕಂಡಿವೆ.
ನಿಫ್ಟಿ ಆಟೋ, ಮೀಡಿಯಾ, ಕನ್ಸ್ಯೂಮರ್ ಡ್ಯೂರಬಲ್ಸ್ ಮತ್ತು ಆಯಿಲ್ ಮತ್ತು ಗ್ಯಾಸ್ ತಲಾ ಶೇ.2ರಷ್ಟು ಕುಸಿದಿವೆ. ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ.1.36ರಷ್ಟು ಕುಸಿದಿದ್ದರೆ, ಖಾಸಗಿ ಬ್ಯಾಂಕ್ ಸೂಚ್ಯಂಕ ಶೇ.0.97ರಷ್ಟು ನಷ್ಟ ಅನುಭವಿಸಿದೆ.
ಇಂದು ಷೇರು ಮಾರುಕಟ್ಟೆ ಕುಸಿಯಲು ಕಾರಣವೇನು?
ವಿಶ್ವದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, 2024ರ ಅಮೆರಿಕ ಚುನಾವಣೆ ಸುತ್ತಲಿನ ಅನಿಶ್ಚಿತತೆ ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರಿಂದ(FPIಗಳು) ನಿರಂತರ ಷೇರುಗಳ ಮಾರಾಟವು ಮಾರುಕಟ್ಟೆ ಕುಸಿಯಲು ಪ್ರಮುಖ ಕಾರಣಗಳಾಗಿವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ, ಪ್ರಭಾವಶಾಲಿಯಾಗದ ಸೆಪ್ಟೆಂಬರ್ ತ್ರೈಮಾಸಿಕ ಗಳಿಕೆಗಳು ಮತ್ತು ಭಾರತೀಯ ಷೇರು ಮಾರುಕಟ್ಟೆಯ ವಿಸ್ತರಿಸಿದ ಮೌಲ್ಯಮಾಪನವು ಮಾರುಕಟ್ಟೆಯ ಕುಸಿತಕ್ಕೆ ಕಾರಣವಾಗಿದೆ. FII/FPI & DIIಗಳು ಇದೀಗ ಪ್ರಾಫಿಟ್ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ನಿರಂತರವಾಗಿ ಅವರು ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಮಾರಾಟದ ಒತ್ತಡಕ್ಕೆ ಸಿಲುಕಿ ಕುಸಿತವಾಗಿದೆ.
ಹೂಡಿಕೆದಾರರು ಈಗ ಏನು ಮಾಡಬೇಕು..?
ಭಾರತೀಯ ಷೇರುಪೇಟೆ ಇತ್ತೀಚೆಗಷ್ಟೇ ದಾಖಲೆ ಮಟ್ಟಕ್ಕೆ ಏರಿಕೆ ಕಂಡು ಹೊಸ ದಾಖಲೆ ಬರೆದಿತ್ತು. ಆದರೆ ಇದೀಗ ಆ ದಾಖಲೆ ಮಟ್ಟದಿಂದ ಶೇ.೭ರಷ್ಟು ಕುಸಿತ ಕಂಡಿದೆ. ಹೂಡಿಕೆದಾರರು ಇದೀಗ ಕಾದು ನೋಡುವ ತಂತ್ರ ಅನುಭವಿಸಬೇಕು. ದೀಪಾವಳಿ ಹಬ್ಬದವರೆಗೂ ಮಾರುಕಟ್ಟೆ ಕುಸಿತ ಕಾಣುವ ಸಾಧ್ಯತೆ ಇದ್ದು, ಆನಂತರ ಮತ್ತೆ ಚೇತರಿಕೆ ಕಾಣಲಿದೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅನೇಕ ಕಂಪನಿಗಳ ಷೇರುಗಳು ಇದೀಗ ಭರ್ಜರಿ ಡಿಸ್ಕೌಂಟ್‌ಗೆ ಲಭ್ಯವಿವೆ. ಹೂಡಿಕೆದಾರರು ಫಂಡಮೆಂಟಲಿ ಸ್ಟ್ರಾಂಗ್ ಇರುವ ಷೇರುಗಳನ್ನು ಖರೀದಿಸಿ ದೀರ್ಘಾವಧಿಗೆ ಇಟ್ಟುಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.