ಭಾರತದಾದ್ಯಂತ 50 ವೈದ್ಯರು, ದಾದಿಯರಿಗೆ ಕೊರೋನಾ ಸೋಂಕು- ಆರೋಗ್ಯ ಸಚಿವಾಲಯ

ದೇಶಾದ್ಯಂತ ವೈದ್ಯರು, ದಾದಿಯರು ಮತ್ತು ಅರೆ-ವೈದ್ಯರು ಸೇರಿದಂತೆ ಸುಮಾರು 50 ಮಂದಿ ವೈದ್ಯಕೀಯ ಸಿಬ್ಬಂದಿ ಕೊರೊನಾ ವೈರಸ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಗುರುವಾರ (ಏಪ್ರಿಲ್ 2) ಮಾಧ್ಯಮಗಳನ್ನುದ್ದೇಶಿಸಿ ಹೇಳಿದರು.

Last Updated : Apr 2, 2020, 08:20 PM IST
ಭಾರತದಾದ್ಯಂತ 50 ವೈದ್ಯರು, ದಾದಿಯರಿಗೆ ಕೊರೋನಾ ಸೋಂಕು- ಆರೋಗ್ಯ ಸಚಿವಾಲಯ   title=
file photo

ನವದೆಹಲಿ: ದೇಶಾದ್ಯಂತ ವೈದ್ಯರು, ದಾದಿಯರು ಮತ್ತು ಅರೆ-ವೈದ್ಯರು ಸೇರಿದಂತೆ ಸುಮಾರು 50 ಮಂದಿ ವೈದ್ಯಕೀಯ ಸಿಬ್ಬಂದಿ ಕೊರೊನಾವೈರಸ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಗುರುವಾರ (ಏಪ್ರಿಲ್ 2) ಮಾಧ್ಯಮಗಳನ್ನುದ್ದೇಶಿಸಿ ಹೇಳಿದರು.'

ಬುಧವಾರದಿಂದ 328 ಹೊಸ COVID-19ಮತ್ತು 12 ಸಾವುಗಳು ವರದಿಯಾಗಿವೆ, ಹೀಗಾಗಿ ಒಟ್ಟು ದೃಢಪಡಿಸಿದ ಪ್ರಕರಣಗಳ ಸಂಖ್ಯೆ 1,965 ಕ್ಕೆ ಮತ್ತು ದೇಶದಲ್ಲಿ ಸಾವಿನ ಸಂಖ್ಯೆ 50ಕ್ಕೆ ತಲುಪಿದೆ' ಎಂದು ಆರೋಗ್ಯ ಸಚಿವಾಲಯದ ಮತ್ತು ಕುಟುಂಬ ಕಲ್ಯಾಣದ ಜಂಟಿ ಕಾರ್ಯದರ್ಶಿ ಲಾವ್ ಅಗರವಾಲ್ ಹೇಳಿದ್ದಾರೆ.

ದೇಶಾದ್ಯಂತ ಸುಮಾರು 50 ವೈದ್ಯಕೀಯ ಸಿಬ್ಬಂದಿಗಳು (ವೈದ್ಯರು, ದಾದಿಯರು ಮತ್ತು ಅರೆ-ವೈದ್ಯರು ಸೇರಿದಂತೆ) ಕೊರೊನಾವೈರಸ್‌ಗೆ ಧನಾತ್ಮಕ ಪರೀಕ್ಷೆಗೆ ಒಳಗಾಗಿದ್ದಾರೆ.ಲಾವ್ ಅಗರ್‌ವಾಲ್ ಅವರ ಪ್ರಕಾರ, ಈವರೆಗೆ 151 ಜನರು COVID-19 ನಿಂದ ಚೇತರಿಸಿಕೊಂಡಿದ್ದಾರೆ.

 

 

 

Trending News