ಲವ್‌.. ಲವ್‌.. ಅಂತ ಕಾಡುತ್ತಿದ್ದ ಪಾಗಲ್‌ ಪ್ರೇಮಿ ಕಾಟಕ್ಕೆ ಕಾಲೇಜ್‌ ಕಟ್ಟಡದಿಂದ ಜಿಗಿದು ಯುವತಿ ಆತ್ಮಹತ್ಯೆ..!

ತರುಣ್, ನಿತ್ಯ ಈಕೆಗೆ ಚಾಟಿಂಗ್ ಮಾಡ್ತಾ, ಪ್ರೀತಿಸುವಂತೆ ಪೀಡಿಸುತಿದ್ದನು. ಇದರಿಂದ ಮನನೊಂದ ವಿದ್ಯಾರ್ಥಿನಿ ತನ್ನ ಮನೆಯವರಿಗೆ ನಿನ್ನೆ ಈ ವಿಷಯ ತಿಳಿಸಿದ್ದಳು. ಇಂದು ಕಾಲೇಜಿಗೆ‌ ತೆರಳಿದ್ದ ಪ್ರೇಮ, ಕಾಲೇಜಿನ ಮೂರನೇ ಅಂತಸ್ತನ್ನು ಏರಿ, ಅಲ್ಲಿಂದು ಜಿಗಿದು ಸಾವನ್ನಪ್ಪಿದ್ದಾಳೆ.

Written by - Krishna N K | Last Updated : Oct 18, 2024, 06:15 PM IST
    • ಪಾಗಲ್ ಪ್ರೇಮಿಯ ಕಿರುಕುಳ ತಾಳಲಾರದೇ ಆತ್ಮಹತ್ಯೆ..?
    • ಪಾಗಲ್ ಪ್ರೇಮಿಯ ಟಾರ್ಚರ್‌ಗೆ ಮನನೊಂದ ವಿದ್ಯಾರ್ಥಿನಿ
    • ಕಾಲೇಜು ಕಟ್ಟಡದಿಂದ‌ ಜಿಗಿದು‌ ಸೂಸೈಡ್ ಗೆ ಶರಣು
ಲವ್‌.. ಲವ್‌.. ಅಂತ ಕಾಡುತ್ತಿದ್ದ ಪಾಗಲ್‌ ಪ್ರೇಮಿ ಕಾಟಕ್ಕೆ ಕಾಲೇಜ್‌ ಕಟ್ಟಡದಿಂದ ಜಿಗಿದು ಯುವತಿ ಆತ್ಮಹತ್ಯೆ..! title=

ಚಿತ್ರದುರ್ಗ : ಪಾಗಲ್ ಪ್ರೇಮಿಯ ಕಿರುಕುಳದಿಂದ ಮನನೊಂದ‌ ವಿದ್ಯಾರ್ಥಿನಿ ಕಾಲೇಜು ಕಟ್ಟಡದ ಮೇಲಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಚಿತ್ರ ಡಾನ್ ಬೊಸ್ಕೋ ಕಾಲೇಜಿನಲ್ಲಿ ನಡೆದಿದೆ. 

ನಗರದ ಮಹೇಶ್ ಪಿಯು ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವಾಗ  ವಿದ್ಯಾರ್ಥಿನಿ ಪ್ರೇಮ( 18) ಹಾಗು ತರುಣ್  ಮದ್ಯೆ ಸ್ನೇಹ ಬೆಳೆದಿತ್ತು.ಈ ವೇಳೆ ತರುಣ್ ಪಿಯುಸಿ ಫೇಲ್ ಆಗಿದ್ದು, ಪ್ರೇಮ ಮಾತ್ರ ಚಿತ್ರ ಡಾನ್ ಬಾಸ್ಕೊ ಕಾಲೇಜಿನಲ್ಲಿ ಪ್ರಥಮ ಬಿಎಸ್‌ಸಿ ಓದುತ್ತಿದ್ದರು. ಆದ್ರೆ ಪ್ರೇಮ ಅವರ ಸಂಪರ್ಕ ಬಿಡದ ತರುಣ್, ನಿತ್ಯ ಈಕೆಗೆ ಚಾಟಿಂಗ್ ಮಾಡ್ತಾ, ಪ್ರೀತಿಸುವಂತೆ ಪೀಡಿಸುತಿದ್ದನು.

ಇದನ್ನೂ ಓದಿ:ಒಂದು ಕಾಲದಲ್ಲಿ ಆ್ಯಂಕರ್.. ಈಗ ಸ್ಟಾರ್‌ ಹೀರೋಯಿನ್..! ಕಿಚ್ಚ ಸುದೀಪ್‌ ಫ್ಯಾನ್ಸ್‌ಗಂತೂ ಈಕೆ ಫೇವರಿಟ್‌..

ಇದರಿಂದ ಮನನೊಂದ ವಿದ್ಯಾರ್ಥಿನಿ ತನ್ನ ಮನೆಯವರಿಗೆ ನಿನ್ನೆ ಈ ವಿಷಯ ತಿಳಿಸಿದ್ದಳು. ಆಗ ಅದನ್ನೆಲ್ಲ ನಾವು ನೋಡಿಕೊಳ್ತೇವೆ ನೀನು ಕಾಲೇಜಿಗೆ ಹೋಗು ಅಂತ ಪ್ರೇಮ ಅವರ ತಂದೆ ಸಮಾಧಾನ ಹೇಳಿದ್ದರು. ಹೀಗಾಗಿ ಇಂದು ಕಾಲೇಜಿಗೆ‌ ತೆರಳಿದ್ದ ಪ್ರೇಮ, ಕಾಲೇಜಿನ ಮೂರನೇ ಅಂತಸ್ತನ್ನು ಏರಿ, ಅಲ್ಲಿಂದು ಜಿಗಿದು ಸಾವನ್ನಪ್ಪಿದ್ದಾಳೆ. 

ಹೀಗಾಗಿ ಈ ಪ್ರಕರಣ‌ದಲ್ಲಿ ಸೂಕ್ತ ತನಿಖೆ ನಡೆಸಿ ತರುಣನನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರೇಮ ಪೋಷಕರು ಆಗ್ರಹಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ ಎಬಿವಿಪಿ ಕಾರ್ಯಕರ್ತರು ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News