ದರ್ಶನ್‌ ಮೇಲೆ ಹಳೆಯ ಕೇಸ್‌ ರಿ-ಓಪನ್‌... ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ ಡಿʼಬಾಸ್‌ !

ಮೈಸೂರು ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಗೆ ಸಂಕಷ್ಟ ಎದುರಾಗಿದೆ. 

Written by - Chetana Devarmani | Last Updated : Oct 18, 2024, 01:49 PM IST
  • ದರ್ಶನ್‌ ಮೇಲೆ ಹಳೆಯ ಕೇಸ್‌ ರಿ-ಓಪನ್‌
  • ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ ಡಿʼಬಾಸ್‌ !
  • ಕೊಲೆಬೆದರಿಕೆ ಆರೋಪದ ಹಳೆಯ ಕೇಸ್‌
ದರ್ಶನ್‌ ಮೇಲೆ ಹಳೆಯ ಕೇಸ್‌ ರಿ-ಓಪನ್‌... ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ ಡಿʼಬಾಸ್‌ ! title=

ಮೈಸೂರು ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಗೆ ಸಂಕಷ್ಟ ಎದುರಾಗಿದೆ. ದರ್ಶನ್ ವಿರುದ್ಧ ಇದೀಗ ಹಳೆಯ ಪ್ರಕರಣವೊಂದನ್ನು ರೀ ಓಪನ್‌ ಮಾಡಲಾಗಿದೆ. ಯುವ ನಿರ್ಮಾಪಕರೊಬ್ಬರಿಗೆ ಕೆಲ ವರ್ಷಗಳ ಹಿಂದೆ ದರ್ಶನ್ ಬೆದರಿಕೆ ಹಾಕಿದ್ದರು ಎಂಬ ಆರೋಪ ಮಾಡಲಾಗಿತ್ತು. 2022 ರಲ್ಲಿ ಈ ಕುರಿತು ದೂರು ದಾಖಲಾಗಿತ್ತು. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆ ಪ್ರಕರಣಕ್ಕೆ ಇದೀಗ ಮರು ಜೀವ ಸಿಕ್ಕಂತಿದೆ. ಪ್ರಕರಣದ ಕುರಿತಾಗಿ ಹೊಸದಾಗಿ ಎನ್‌ಸಿಆರ್ ದಾಖಲಾಗಿದ್ದು ದರ್ಶನ್‌ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ದರ್ಶನ್‌ ತಮಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಯುವ ನಿರ್ಮಾಪಕ ಭರತ್ ಎಂಬುವರು ದೂರು ದಾಖಲಿಸಿದ್ದರು. ಈ ಆರೋಪಕಕೆ ಪುರಾವೆಯಾಗಿ ಕರೆ ಮಾಹಿತಿ, ಕಾಲ್ ರೆಕಾರ್ಡ್‌ಗಳನ್ನು ಮಾಧ್ಯಮಗಳ ಮುಂದೆ ನಿರ್ಮಾಪಕ ಭರತ್ ಬಿಡುಗಡೆ ಮಾಡಿದ್ದರು. 2022 ರಲ್ಲಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣಕ್ಕೆ NCR ದಾಖಲಾಗಿತ್ತು. ಈಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಎನ್‌ಸಿಆರ್​ ದಾಖಲಾಗಿದೆ.

ʻಭಗವಾನ್ ಶ್ರೀಕೃಷ್ಣಾ’ ಹೆಸರಿನ ಸಿನಿಮಾವನ್ನು ಯುವ ನಿರ್ಮಾಪಕ ಭರತ್ ನಿರ್ಮಿಸುತ್ತಿದ್ದರು. ಈ ಸಿನಿಮಾಗೆ ಧ್ರುವನ್ ನಾಯಕರಾಗಿದ್ದರು. ಆದರೆ ಕೋವಿಡ್ ಹಿನ್ನೆಲೆ ಚಿತ್ರೀಕರಣ ನಿಂತು ಹೋಗಿತ್ತು. ಸಿನಿಮಾ ನಿಲ್ಲಿಸಿದ ಕಾರಣಕ್ಕೆ ದರ್ಶನ್ ಬಳಿ ಹೋದ ನಟ ಧ್ರುವನ್ ಭರತ್‌ಗೆ ಕರೆ ಮಾಡಿಸಿದ್ದರು. ಈ ಕರೆಯಲ್ಲಿ ಭರತ್‌ಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. 

ಇದನ್ನೂ ಓದಿ: ಮರ್ಯಾದೆ ಪ್ರಶ್ನೆ ಸಿನಿಮಾದಿಂದ ಒಂದು ಮಿಡ್ಲ್ ಕ್ಲಾಸ್ ಆಂತೆಮ್

ಭರತ್ ಆ ಸಮಯದಲ್ಲಿ ಈ ಕಾಲ್‌ ರೆಕಾರ್ಡ್‌ನ್ನು ಬಿಡುಗಡೆ ಮಾಡಿದ್ದರು. ಆರಂಭದಲ್ಲಿ ಕೂಲ್ ಆಗಿ ಮಾತನ್ನು ಆರಂಭಿಸಿದ್ದ ದರ್ಶನ್, ‘ಧ್ರುವನ್ ನಿಮ್ಮನ್ನೇ ನಂಬಿದ್ದಾನೆ. ಸಿನಿಮಾ ನಿಲ್ಲಿಸಬೇಡಿ’ ಎಂದು ದರ್ಶನ್‌ ಮನವಿ ಮಾಡಿದ್ದರು. ಬಳಿಕ ಮಾತಿಗೆ ಮಾತು ಬೆಳೆದಾಗ ‘ಒಂದು ವೇಳೆ ಸಿನಿಮಾ ಕಂಪ್ಲೀಟ್‌ ಆಗದಿದ್ದರೆ, ಭೂಮಿ ಮೇಲೆ ಇಲ್ಲದಂತೆ ಮಾಡುತ್ತೇನೆ’ ಎಂದೆಲ್ಲ ದರ್ಶನ್‌ ಬೆದರಿಕೆ ಹಾಕಿದ್ದ ಕಾಲ್‌ ರೆಕಾರ್ಡ್‌ ಅದಾಗಿತ್ತು. ಅವಾಚ್ಯ ಶಬ್ದಗಳಿಂದ ದರ್ಶನ್ ನಿಂದಿಸಿದ್ದರು. 

ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ದರ್ಶನ್ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಆದರೆ ಈಗ ಹೊದ ಎನ್‌ಸಿಆರ್‌ ದಾಖಲಾದ ಹಿನ್ನೆಲೆ ಪ್ರಕರಣದ ತನಿಖೆ ನಡೆಸುವ ಸಾಧ್ಯತೆ ಇದೆ.  

ಇದನ್ನೂ ಓದಿ: ಇಷ್ಟು ದಿನ ಸಲ್ಮಾನ್‌ ಖಾನ್‌ ಜೀವ ಉಳಿಸಿದ್ದೇ ಈ ಬ್ರೇಸ್ಲೆಟ್! ಇದರ ವಿಶೇಷತೆಗಳೇನು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News