Anju prabhakar statement about tiger prabhakar: 1975 ರಲ್ಲಿ ಜನಿಸಿದ ಖ್ಯಾತ ನಟಿ ಅಂಜು, 1979 ರಲ್ಲಿ ತಮಿಳಿನಲ್ಲಿ ಬಿಡುಗಡೆಯಾದ "ಉತ್ರಿಪೂಕ್ಕಲ್" ಚಿತ್ರದ ಮೂಲಕ ಕಲಾ ಜಗತ್ತಿನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಅಂದಹಾಗೆ ಅಂಜು ತಮಿಳು ಚಿತ್ರರಂಗದಲ್ಲಿ ಬಾಲನಟಿಯಾಗಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
1975 ರಲ್ಲಿ ಜನಿಸಿದ ಖ್ಯಾತ ನಟಿ ಅಂಜು, 1979 ರಲ್ಲಿ ತಮಿಳಿನಲ್ಲಿ ಬಿಡುಗಡೆಯಾದ "ಉತ್ರಿಪೂಕ್ಕಲ್" ಚಿತ್ರದ ಮೂಲಕ ಕಲಾ ಜಗತ್ತಿನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಅಂದಹಾಗೆ ಅಂಜು ತಮಿಳು ಚಿತ್ರರಂಗದಲ್ಲಿ ಬಾಲನಟಿಯಾಗಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.
ತಮಿಳು ಮಾತ್ರವಲ್ಲದೆ ಮಲಯಾಳಂ ಮತ್ತು ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ನಾಯಕಿಯಾಗಿಯೂ ನಟಿಸಿರುವ ಅಂಜು ಅಂತಿಮವಾಗಿ 2013ರಲ್ಲಿ ತೆರೆಕಂಡ ತಮಿಳು ಚಿತ್ರ ಮಡಯನೈ ಕೂಟಂನಲ್ಲಿ ನಾಯಕಿಯಾಗಿ ನಟಿಸಿದ್ದರು.
1996 ರಲ್ಲಿ, ಅಂಜು 17 ವರ್ಷದವಳಿದ್ದಾಗ ಪ್ರಸಿದ್ಧ ಚಲನಚಿತ್ರ ನಟ ಟೈಗರ್ ಪ್ರಭಾಕರ್ ಅವರನ್ನು ವಿವಾಹವಾದರು. ಆ ನಂತರ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ ಅವರಿಂದ ದೂರವಾದರು. ನಟಿ ಅಂಜು ಮದುವೆಯಾದ ಒಂದು ವರ್ಷದಲ್ಲಿ ಪೋಷಕರ ಬಳಿಗೆ ಮರಳಿದ್ದು, ಇಲ್ಲಿಯವರೆಗೆ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಾರೆ. ಅವರಿಗೆ ಅರ್ಜುನ್ ಪ್ರಭಾಕರ್ ಎಂಬ ಮಗನೂ ಇದ್ದಾನೆ.
ಕೆಲ ವರ್ಷಗಳ ಹಿಂದೆ ತಮ್ಮ ಮದುವೆಯ ಬಗ್ಗೆ ಮನಬಿಚ್ಚಿದ ನಟಿ ಅಂಜು, "ನಾನು ಖ್ಯಾತ ನಟ ಟೈಗರ್ ಪ್ರಭಾಕರ್ ಅವರನ್ನು ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದೆ, ಆದರೆ ಅವರನ್ನು ಮದುವೆಯಾದ ನಂತರ ಸ್ವಲ್ಪ ಸಮಯದ ನಂತರ, ಅವರಿಗೆ ಈಗಾಗಲೇ ಮೂರು ಮದುವೆಯಾಗಿದ್ದು, ನನಗಿಂತ ದೊಡ್ಡ ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿದುಬಂದಿತ್ತು" ಎಂದಿದ್ದರು.
"ಆಗ ನನಗೆ ಕೇವಲ 17 ವರ್ಷ, ಮದುವೆಗೆ ಸಿದ್ಧಳಿರಲಿಲ್ಲ. ಆಗ ಪ್ರಭಾಕರ್ʼಗೆ 50 ವರ್ಷ. ಈ ಬಗ್ಗೆ ಮನೆಯಲ್ಲಿ ಹೇಳಿದಾಗ ಬೇಡ ಎಂದು ಹೇಳಿದ್ದರು. ಆದರೆ ಅವರ ಮಾತನ್ನು ಕೇಳದೆ ಪ್ರಭಾಕರ್ ಜೊತೆ ಓಡಿ ಹೋಗಿದ್ದೆ" ಎಂದು ಅಂಜು ಹೇಳಿದ್ದಾರೆ.
"ಕನ್ನಡ ಚಿತ್ರದಲ್ಲಿ ನಟಿಸಲೆಂದು ಬೆಂಗಳೂರಿಗೆ ಹೋದ ಸಂದರ್ಭದಲ್ಲೇ ನನ್ನ ಜೀವನ ತಿರುವು ಪಡೆದುಕೊಂಡಿತ್ತು. ಪ್ರಭಾಕರ್ ಆಗಲೇ ಮೂರು ಮದುವೆಯಾಗಿದ್ದನ್ನು ಮರೆಮಾಚಿ ನನ್ನನ್ನು ಮದುವೆಯಾದರು" ಎಂದಿದ್ದಾರೆ.
"ಹಾಗಾಗಿ ಮದುವೆಯಾಗಿ ಒಂದು ವರ್ಷದ ನಂತರ ನಾನು ಅವರನ್ನು ಬಿಟ್ಟೆ. ಆಗ ನಾನು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದೆ. ಆ ಘಟನೆ ನಡೆದ ಕೆಲವು ವರ್ಷಗಳ ನಂತರ ನನಗೆ 2001 ರಲ್ಲಿ ಅವರ ಸಾವಿನ ಸುದ್ದಿ ಸಿಕ್ಕಿತು" ಎಂದು ಅಂಜು ಹೇಳಿದ್ದಾರೆ.