ದೇಶದ ಟಾಪ್ 10 ಕಾಲೇಜುಗಳ ಪಟ್ಟಿ ಇಲ್ಲಿವೆ ! ನಂಬರ್ ಒನ್ ಸ್ಥಾನದಲ್ಲಿ ಬೆಂಗಳೂರಿನ ವಿದ್ಯಾಸಂಸ್ಥೆ

ಟೈಮ್ಸ್ ಹೈಯರ್ ಎಜುಕೇಶನ್ (THE) ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ 2025 ಐದು ಪ್ರಮುಖ ಕ್ಷೇತ್ರಗಳ ಆಧಾರದ ಮೇಲೆ ವಿಶ್ವವಿದ್ಯಾನಿಲಯಗಳನ್ನು ಮೌಲ್ಯಮಾಪನ ಮಾಡುತ್ತದೆ.

Written by - Ranjitha R K | Last Updated : Oct 9, 2024, 05:48 PM IST
  • ಎಜುಕೇಶನ್ (THE) ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ ಪಟ್ಟಿ
  • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಬೆಂಗಳೂರಿಗೆ ಅಗ್ರಸ್ಥಾನ
  • ಭಾರತದ ಹಲವು ವಿಶ್ವವಿದ್ಯಾನಿಲಯಗಳು ಈ ವರ್ಷದ ಶ್ರೇಯಾಂಕದಲ್ಲಿ ಸುಧಾರಣೆಯನ್ನು ತೋರಿಸಿವೆ.
ದೇಶದ ಟಾಪ್ 10 ಕಾಲೇಜುಗಳ ಪಟ್ಟಿ ಇಲ್ಲಿವೆ ! ನಂಬರ್ ಒನ್ ಸ್ಥಾನದಲ್ಲಿ ಬೆಂಗಳೂರಿನ ವಿದ್ಯಾಸಂಸ್ಥೆ  title=

Top 10 Indian Institutes List : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಬೆಂಗಳೂರು, ಇತ್ತೀಚೆಗೆ ಬಿಡುಗಡೆಯಾದ ಟೈಮ್ಸ್ ಹೈಯರ್ ಎಜುಕೇಶನ್ (THE) ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ 2025 ರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಆದರೂ ಇದು ಗ್ಲೋಬಲ್ ಟಾಪ್ 250ರಲ್ಲಿ ಸ್ಥಾನ ಗಳಿಸುವಲ್ಲಿ ವಿಫಲವಾಗಿದೆ.

ಟೈಮ್ಸ್ ಹೈಯರ್ ಎಜುಕೇಶನ್ (THE) ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ 2025 ಐದು ಪ್ರಮುಖ ಕ್ಷೇತ್ರಗಳ ಆಧಾರದ ಮೇಲೆ ವಿಶ್ವವಿದ್ಯಾನಿಲಯಗಳನ್ನು ಮೌಲ್ಯಮಾಪನ ಮಾಡುತ್ತದೆ.ಬೋಧನೆ,ಸಂಶೋಧನಾ ಪರಿಸರ,ಸಂಶೋಧನಾ ಗುಣಮಟ್ಟ,ಅಂತರರಾಷ್ಟ್ರೀಯ ದೃಷ್ಟಿಕೋನ ಮತ್ತು ಉದ್ಯಮದ ಆದಾಯವನ್ನು ಆಧರಿಸಿ ಮೌಲ್ಯಮಾಪನ ಮಾಡಲಾಗುತ್ತದೆ. 

ಇದನ್ನೂ ಓದಿ : Government Jobs: ನಿಮಗೆ ಕೃಷಿಯಲ್ಲಿ ಅನುಭವ ಇದೆಯಾ? ತಿಂಗಳಿಗೆ 30 ಸಾವಿರ ರೂ ವೇತನ ನಿಮ್ಮದಾಗಲಿದೆ..!

ಬೋಧನೆಯ ಖ್ಯಾತಿ,ವಿದ್ಯಾರ್ಥಿ ಶಿಕ್ಷಕರ ಅನುಪಾತ,ಸಂಶೋಧನಾ ಉತ್ಪಾದಕತೆ, ಮತ್ತು ಅಂತರರಾಷ್ಟ್ರೀಯ ಸಹಯೋಗದ ವ್ಯಾಪ್ತಿಯಂತಹ ಅಂಶಗಳನ್ನು ಒಳಗೊಂಡಿರುವ 18 ಕಾರ್ಯಕ್ಷಮತೆ ಸೂಚಕಗಳನ್ನು ಬಳಸಿಕೊಂಡು ಮೌಲ್ಯಮಾಪನವನ್ನು ಮಾಡಲಾಗುತ್ತದೆ.

ಭಾರತದ ಹಲವು ವಿಶ್ವವಿದ್ಯಾನಿಲಯಗಳು ಈ ವರ್ಷದ ಶ್ರೇಯಾಂಕದಲ್ಲಿ ಸುಧಾರಣೆಯನ್ನು ತೋರಿಸಿವೆ.ಅಣ್ಣಾ ವಿಶ್ವವಿದ್ಯಾನಿಲಯ, ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯ, ಸವಿತಾ ವೈದ್ಯಕೀಯ ಮತ್ತು ತಾಂತ್ರಿಕ ವಿಜ್ಞಾನ ಸಂಸ್ಥೆ, ಮತ್ತು ಶೂಲಿನಿ ಬಯೋಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ ಸೈನ್ಸಸ್ ವಿಶ್ವವಿದ್ಯಾಲಯಗಳು 401-500 ಬ್ಯಾಂಡ್‌ನಲ್ಲಿ ಬಂದಿವೆ. 

ಇದನ್ನೂ ಓದಿ : SSLC ಪಾಸ್/ಫೇಲ್ ಆದವರಿಗೆ ಇಲ್ಲಿದೆ ಸುವರ್ಣಾವಕಾಶ..! ನವೆಂಬರ್ 4 ರೊಳಗೆ ಅರ್ಜಿ ಸಲ್ಲಿಸಿ...!

ಟಾಪ್ ೧೦ ವಿಶ್ವ ವಿದ್ಯಾನಿಲಯಗಳು : 
1.ಭಾರತೀಯ ವಿಜ್ಞಾನ ಸಂಸ್ಥೆ    ಬೆಂಗಳೂರು
2. ಅಣ್ಣಾ ವಿಶ್ವವಿದ್ಯಾಲಯ    ಗಿಂಡಿ
3. ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ    ಕೊಟ್ಟಾಯಂ
4. ಸವೀತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ಟೆಕ್ನಿಕಲ್ ಸೈನ್ಸಸ್ ಚೆನ್ನೈ
5.ಶೂಲಿನಿ ಯುನಿವರ್ಸಿಟಿ ಆಫ್ ಬಯೋಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಸೈನ್ಸಸ್ ಬಜೋಲ್
6. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂದೋರ್     ಸಿಮ್ರೋಲ್
7. ಜಾಮಿಯಾ ಮಿಲಿಯಾ ಇಸ್ಲಾಮಿಯಾ ನವದೆಹಲಿ
8. ಯುಪಿಇಎಸ್  ಡೆಹ್ರಾಡೂನ್    
9. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಅಲಿಗಢ    
10. ಅಮಿಟಿ ವಿಶ್ವವಿದ್ಯಾಲಯ ನೋಯ್ಡಾ    

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News