Bigg Boss Kannada 11 nomination : ಬಿಗ್ ಬಾಸ್ ಕನ್ನಡ ಸೀಸನ್ 11 ರ ಎರಡನೇ ವಾರದಲ್ಲಿ ಬಹುದೊಡ್ಡ ತಪ್ಪೊಂದು ನಡೆದು ಹೋಗಿದೆ. ಬಿಗ್ ಬಾಸ್ ಮನೆಗೆ ಅದರದೇ ಆದ ಒಂದಿಷ್ಟು ನಿಯಮಗಳಿವೆ. ಇದನ್ನು ಸ್ಪರ್ಧಿಗಳು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಇಲ್ಲದಿದ್ದರೆ ಶಿಕ್ಷೆ ತಪ್ಪಿದ್ದಲ್ಲ. ಇದೀಗ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಎಂದೂ ನಡೆಯದ ಘನಘೋರ ತಪ್ಪು ಈ ಬಾರಿ ನಡೆದಿದೆ. ಇದು ಬಿಗ್ ಬಾಸ್ ಕೋಪಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ನಾಮಿನೇಷನ್ ಚಟುವಟಿಕೆ ಬಳಿಕೆ ತ್ರಿವಿಕ್ರಂ, ಅನುಷಾ, ಧನರಾಜ್, ಜಗದೀಶ್, ಐಶ್ವರ್ಯಾ, ಮಾನಸಾ ಹಾಗೂ ರಂಜಿತ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಆ ಬಳಿಕ ಎರಡು ತಂಡಗಳನ್ನು ಮಾಡಿದ ಬಿಗ್ ಬಾಸ್ ಸ್ವರ್ಗ ಮತ್ತು ನರಕವಾಸಿಗಳಿಗೆ ವಾರದ ಟಾಸ್ಕ್ ನೀಡಲು ಸಿದ್ಧತೆ ನಡೆಸಿದ್ದರು. ಸ್ವರ್ಗದ ಟೀಮ್ಗೆ ಕ್ಯಾಪ್ಟನ್ ಆಗಿ ತ್ರಿವಿಕ್ರಮ್ ಮತ್ತು ನರಕದ ತಂಡಕ್ಕೆ ಕ್ಯಾಪ್ಟನ್ ಆಗಿ ಶಿಶಿರ್ ಅವರನ್ನು ಸ್ಪರ್ಧಿಗಳೇ ಆಯ್ಕೆ ಮಾಡಿದರು.
ನಿಯಮಗಳ ಪ್ರಕಾರ ಬ್ಲೈಂಡ್ಸ್ ಇಳಿಸಿದಾಗ ಯಾರೂ ಇಣುಕಿ ನೋಡಬಾರದು. ಇದು ಬಿಗ್ ಬಾಸ್ನ ಮಹತ್ವದ ನಿಯಮಗಳಲ್ಲಿ ಒಂದು. ಬ್ಲೈಂಡ್ಸ್ ಇಳಿಸಿದಾಗ ಅದರ ಆಚೆ ಟಾಸ್ಕ್ಗೆ ಸಿದ್ಧತೆ ನಡೆದಿರುತ್ತದೆ. ಈ ಕಾರಣದಿಂದ ಬ್ಲೈಂಡ್ಸ್ ಇಳಿಸಿದಾಗ ಯಾರೂ ಇಣುಕಿ ನೋಡಬಾರದು ಎಂಬ ರೂಲ್ಸ್ ಬಿಗ್ ಬಾಸ್ನಲ್ಲಿದೆ.
ಮಾನಸಾ, ಶಿಶಿರ್, ಮೋಕ್ಷಿತಾ ಮತ್ತು ಜಗದೀಶ್ ಈ ಮೂಲ ನಿಯಮವನ್ನೇ ಬ್ರೇಕ್ ಮಾಡಿದ್ದಾರೆ. ಬ್ಲೈಂಡ್ಸ್ ಡೌನ್ ಆಗಿದ್ದಾಗ ಆಚೆಗೆ ಇಣುಕಿ ನೋಡಿದ್ದಾರೆ. ಮೊದಲು ಮಾನಸಾ ಈ ಕೆಲಸ ಮಾಡಿದ್ದು, ಶಿಶಿರ್ ಅವರ ಬಳಿ ಬಂದು ಟಾಸ್ಕ್ ಏನಿರಬಹುದೆಂದು ಚರ್ಚಿಸಿದ್ದಾರೆ. ಬಳಿಕ ಶಿಶಿರ್, ಮೋಕ್ಷಿತಾ ಕೂಡ ಬ್ಲೈಂಡ್ಸ್ ದಾಟಿ ಆಚೆ ಹೋಗಿ ನೋಡಿದ್ದಾರೆ. ಆ ನಂತರ ಬಟ್ಟೆ ಬದಲಿಸುವ ನೆಪದಲ್ಲಿ ಜಗದೀಶ್ ಕೂಡ ಬ್ಲೈಂಡ್ಸ್ ದಾಟಿದ್ದಾರೆ.
ಬಿಗ್ ಬಾಸ್ ಹಾಗೂ ಬಿಗ್ ಬಾಸ್ ನಿಯಮಗಳನ್ನು ಗೌರವಿಸದ ಸ್ಪರ್ಧಿಗಳೇ ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲ ಎಂದು ಹೇಳಿದ್ದಾರೆ. ಈ ಕ್ಷಣದಿಂದ ಬಿಗ್ ಬಾಸ್ ಮನೆಯ ಎಲ್ಲ ಸದಸ್ಯರನ್ನು ನಾಮಿನೇಟ್ ಮಾಡುತ್ತಿದ್ದಾರೆ ಎಂದು ಆದೇಶಿಸಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲಿ ಯಾವ ಕ್ಯಾಪ್ಟನ್ ಸಹ ನಾಮಿನೇಟ್ ಆಗಿದ್ದಿಲ್ಲ. ಆದರೆ ಮೂಲ ನಿಯಮದ ಉಲ್ಲಂಘನೆ ಇಂದಾಗಿ ಈ ವಾರದ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಹಂಸ ಕೂಡ ತಮ್ಮ ಇಮ್ಯನಿಟಿ ಕಳೆದು ಕೊಂಡು ನಾಮಿನೇಟ್ ಆಗಿದ್ದಾರೆ.
ಮನೆಯಲ್ಲಿರುವ ಎಲ್ಲರೂ ನಾಮಿನೇಟ್ ಆದ ಕಾರಣ ಈ ವಾರದ ಎಲಿಮಿನೇಷನ್ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ತಪ್ಪನ್ನು ಮಾಡಿ ಮನೆಯ ಇತರ ಸದಸ್ಯರಿಗೆ ತೊಂದರೆ ನೀಡಿದ ಕಾರಣ. ಮಾನಸಾ, ಶಿಶಿರ್, ಮೋಕ್ಷಿತಾ ಮತ್ತು ಜಗದೀಶ್ ಅವರಲ್ಲೇ ಒಬ್ಬರು ಎಲಿಮಿನೇಟ್ ಆಗಬಹುದು ಎಂದು ನೆಟ್ಟಿಜನ್ಸ್ ಚರ್ಚಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.