ವಿಜಯದಶಮಿ ದಿನ ಈ ದಿಕ್ಕಿಗೆ ಮುಖ ಹಾಕಿ ಕುಳಿತು ಊಟ ಮಾಡಿ: ಸಾಕ್ಷಾತ್ ದೇವಿಯೇ ಕೈತುತ್ತು ತಿನ್ನಿಸಿದಕ್ಕೆ ಸಮವಿದು! ಹೀಗೆ ಮಾಡಿದ ಕ್ಷಣದಿಂದಲೇ ಸಕಲ ಐಶ್ವರ್ಯ ಹುಡುಕಿ ಬರುತ್ತೆ

Vastu tips for eating food: ಇದೀಗ ನವರಾತ್ರಿ ಸಂಭ್ರಮ ಎಲ್ಲೆಡೆ ಕಳೆಗಟ್ಟಿದೆ. ಇನ್ನೇನು ಒಂದೆರಡು ದಿನಗಳಲ್ಲಿ ವಿಜಯದಶಮಿಯೂ ಬರಲಿದೆ. ದುಷ್ಟ ರಾಕ್ಷಸನನ್ನು ಸಂಹರಿಸಿದ ವಿಜಯ ಸಾಧಿಸಿದ ಸಂಭ್ರವನ್ನು ಮಹಾದೇವಿ ಆಚರಿಸಿದ ಆ ದಿನವನ್ನು ವಿಜಯ ದಶಮಿ ಎಂದು ಆಚರಿಸಲಾಗುತ್ತದೆ. ಇಂತಹ ಮಹತ್ವದ ದಿನದಂದು ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಶುಭ ಪ್ರಾಪ್ತಿಯಾಗುತ್ತದೆ. ಅದರಲ್ಲಿ ಒಂದು ಊಟ ಮಾಡುವ ವಾಸ್ತು.

ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಇದೀಗ ನವರಾತ್ರಿ ಸಂಭ್ರಮ ಎಲ್ಲೆಡೆ ಕಳೆಗಟ್ಟಿದೆ. ಇನ್ನೇನು ಒಂದೆರಡು ದಿನಗಳಲ್ಲಿ ವಿಜಯದಶಮಿಯೂ ಬರಲಿದೆ. ದುಷ್ಟ ರಾಕ್ಷಸನನ್ನು ಸಂಹರಿಸಿದ ವಿಜಯ ಸಾಧಿಸಿದ ಸಂಭ್ರವನ್ನು ಮಹಾದೇವಿ ಆಚರಿಸಿದ ಆ ದಿನವನ್ನು ವಿಜಯ ದಶಮಿ ಎಂದು ಆಚರಿಸಲಾಗುತ್ತದೆ. ಇಂತಹ ಮಹತ್ವದ ದಿನದಂದು ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಶುಭ ಪ್ರಾಪ್ತಿಯಾಗುತ್ತದೆ. ಅದರಲ್ಲಿ ಒಂದು ಊಟ ಮಾಡುವ ವಾಸ್ತು.  

2 /7

ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ವಿಷಯಕ್ಕೂ ವಿಶೇಷ ಮಹತ್ವವನ್ನು ನೀಡಲಾಗಿದೆ. ಅದರಲ್ಲೂ ಶುಭಸಂದರ್ಭಗಳಲ್ಲಿ ಪಾಲಿಸಬೇಕಾದ ವಿಷಯಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಅಂತೆಯೇ ನಾವಿಂದು ವಿಜಯದಶಮಿಯ ದಿನದಂದು ಯಾವ ದಿಕ್ಕಿಗೆ ಕುಳಿತು ಭೋಜನ ಸ್ವೀಕರಿಸಿದರೆ ಒಳಿತು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.  

3 /7

ವಾಸ್ತು ಶಾಸ್ತ್ರದ ಪ್ರಕಾರ, ಆಹಾರವನ್ನು ತಿನ್ನುವಾಗ ಕೆಲವು ನಿರ್ದೇಶನಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯ ದಿನಗಳಲ್ಲಿ ಅನೇಕರು ಎಲ್ಲೆಂದರಲ್ಲಿ ಕುಳಿತು ಆಹಾರ ಸೇವಿಸುವುದನ್ನು ನೋಡಿರುತ್ತೇವೆ. ಆದರೆ ಶುಭಸಂದರ್ಭಗಳಲ್ಲಿ ದೇವರಿಗೆ ಅರ್ಪಿಸಿದ ನೈವೇದ್ಯ ಮತ್ತು ಭಕ್ಷ್ಯ ಭೋಜನಗಳನ್ನು ಸೇವಿಸುವಾಗ, ಕೆಲವು ದಿಕ್ಕುಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.  

4 /7

ಅಂದಹಾಗೆ ವಿಜಯದಶಮಿ ದಿನದಂದು ಉತ್ತರ ಮತ್ತು ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತು ದೇವರ ಪ್ರಸಾದ ಸ್ವೀಕರಿಸಿ. ಇದು ಮನೆಯ ಸಮೃದ್ಧಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಪರಿಗಣಿಸಲಾಗುತ್ತದೆ. ಇನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಯಾವುದೇ ಕಾರಣಕ್ಕೂ ಆಹಾರವನ್ನು ಸೇವಿಸಬೇಡಿ. ಏಕೆಂದರೆ ಈ ದಿಕ್ಕನ್ನು ಯಮ ಎಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲದೆ, ವಾಸ್ತು ಪ್ರಕಾರ, ಈ ದಿಕ್ಕಿನಲ್ಲಿ ಆಹಾರ ತಿನ್ನುವುದು ವ್ಯಕ್ತಿಯ ವಯಸ್ಸನ್ನು ಕಡಿಮೆ ಮಾಡುತ್ತದೆ ಮತ್ತು ದುರದೃಷ್ಟವನ್ನು ಹೆಚ್ಚಿಸುತ್ತದೆ.  

5 /7

ಪಶ್ಚಿಮ ದಿಕ್ಕು ಕೂಡ ಆಹಾರ ಸೇವನೆಗೆ ಸೂಕ್ತ ಸ್ಥಳವಲ್ಲ. ಇಲ್ಲಿ ಕುಳಿತು ಆಹಾರ ಸೇವಿಸುವುದು ವ್ಯಕ್ತಿಯ ಮೇಲಿನ ಸಾಲವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.  

6 /7

ಪೂರ್ವ ಅಥವಾ ಉತ್ತರ ದಿಕ್ಕನ್ನು ದೇವರು ನೆಲೆಸಿರುವ ದಿಕ್ಕು ಎಂದು ಪರಿಗಣಿಸಲಾಗಿದೆ. ಹಾಗಾಗಿಯೇ ವಿಜಯದಶಮಿ ದಿನದಂದು ಈ ದಿಕ್ಕಿಗೆ ಮುಖ ಹಾಕಿ ಕುಳಿತು ಆಹಾರ ಸೇವಿಸಿದರೆ ಸಾಕ್ಷಾತ್‌ ದೇವಿಯೇ ಕೈತುತ್ತು ನೀಡುವ ಸಮವಾಗುತ್ತದೆ,  

7 /7

ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ನಂಬಿಕೆಗಳು ಮತ್ತು ಮಾಹಿತಿಯನ್ನು ಮಾತ್ರ ಆಧರಿಸಿದೆ. ಜೀ ಕನ್ನಡ ನ್ಯೂಸ್ ಯಾವುದೇ ರೀತಿಯ ಮಾನ್ಯತೆ, ಮಾಹಿತಿಯನ್ನು ದೃ‌ಢೀಕರಿಸುವುದಿಲ್ಲ.