ಬೆಂಗಳೂರು : ನವರಾತ್ರಿ ಅಕ್ಟೋಬರ್ 3 ರಿಂದ ಪ್ರಾರಂಭವಾಗಿದೆ. ನವರಾತ್ರಿಯ 9 ದಿನಗಳಲ್ಲಿ ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ.ನವರಾತ್ರಿಯ 9 ದಿನಗಳು ಬಹಳ ವಿಶೇಷ. ಪೂಜೆಯಿಂದ ಹಿಡಿದು ತಂತ್ರ-ಮಂತ್ರ,ಪರಿಹಾರಗಳಿಗೆ ನವರಾತ್ರಿ ವಿಶೇಷವಾಗಿವೆ.ನವರಾತ್ರಿಯ ದೈವಿಕ ರಾತ್ರಿಗಳಲ್ಲಿ ವಿಶೇಷ ಕ್ರಮಗಳನ್ನು ತೆಗೆದುಕೊಂಡರೆ,ಮನಸ್ಸಿನ ಎಲ್ಲಾ ರೀತಿಯ ಆಸೆ ಆಕಾಂಕ್ಷೆಗಳನ್ನು ಈಡೇರಿಸಬಹುದು.
ನವರಾತ್ರಿ ಪರಿಹಾರಗಳು :
ವಿವಾಹ ಯೋಗಕ್ಕೆ :
ನವರಾತ್ರಿಯ ಯಾವುದೇ ರಾತ್ರಿಯಲ್ಲಿ ಅಡಿಕೆಯ ಸುತ್ತಲೂ ಕುಂಕುಮ ಹಚ್ಚಿ, ಆ ಅಡಿಕೆಯನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ದೇವಿಗೆ ಅರ್ಪಿಸಬೇಕು.ನಂತರ ಪೂಜೆ ಮಾಡಿ ಬೇಗನೆ ವಿವಾಗ ಭಾಗ್ಯ ಕರುಣಿಸುವಂತೆ ದೇವಿಯನ್ನು ಬೇಡಿಕೊಳ್ಳಬೇಕು.ನಂತರ, ಅಡಿಕೆಯನ್ನು ನೀವು ಮಲಗುವ ಕೋಣೆಯಲ್ಲಿ ಇರಿಸಿ.ಇದು ಮದುವೆಗೆ ಎದುರಾಗುವ ಅಡೆತಡೆಗಳನ್ನು ನಿವಾರಿಸುತ್ತದೆ.
ಇದನ್ನೂ ಓದಿ: 365 ದಿನಗಳ ಬಳಿಕ ಕನ್ಯಾ ರಾಶಿಯಲ್ಲಿ ಶುಕ್ರಾದಿತ್ಯ ರಾಜಯೋಗ, 3 ರಾಶಿಯವರಿಗೆ ಕೈ ಇಟ್ಟಲ್ಲೆಲ್ಲಾ ಯಶಸ್ಸು, ಹಣಕ್ಕಿಲ್ಲ ಕೊರತೆ
ಸಂಪತ್ತು ಗಳಿಸುವ ಮಾರ್ಗಗಳು:
ನವರಾತ್ರಿಯ ಪೂಜೆಯಲ್ಲಿ ದೇವಿಗೆ ಅರಶಿನವನ್ನು ಅರ್ಪಿಸಿ ನಂತರ ಶ್ರೀ ಸೂಕ್ತಂ ಪಠಿಸಿ. ಆರ್ಥಿಕ ತೊಂದರೆಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.ಪ್ರತಿದಿನ ಅರಿಶಿನದ ಉಂಡೆಯನ್ನು ಪೂಜಿಸಿ.ನವರಾತ್ರಿಯ ನಂತರ,ಅರಿಶಿನದ ಉಂಡೆಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನಿಮ್ಮ ಬೀರುವಿನಲ್ಲಿ ಇಡಿ.ನಿಮ್ಮ ಸಂಪತ್ತು ಹೆಚ್ಚಾಗಲು ಇದು ಕಾರಣವಾಗುತ್ತದೆ.
ಇಚ್ಚೆಯ ಕೆಲಸ ಪಡೆಯಲು ಪರಿಹಾರ: 27 ವೀಳ್ಯದೆಲೆಗಳನ್ನು ತೆಗೆದುಕೊಂಡು ದಾರದಿಂದ ಕಟ್ಟಿ ಮಾಲೆಯನ್ನು ಮಾಡಬೇಕು.ನಂತರ ನವರಾತ್ರಿಯ ಯಾವುದಾದರೊಂದು ದಿನ ಪೂಜಿಸಿ ದೇವಿಗೆ ಈ ಮಾಲೆಯನ್ನು ಅರ್ಪಿಸಿ. ನಿಮ್ಮ ಮನಸ್ಸಿನ ಆಸೆಯನ್ನು ಹೇಳಿಕೊಳ್ಳಿ.ನಿಮ್ಮ ಮನದ ಆಸೆ ಈಡೇರಿದ ನಂತರ ಈ ಮಳೆಯನ್ನೂ ನೀರಿನಲ್ಲಿ ಹರಿಬಿಡಬೇಕು.
(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ, ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ