ಕ್ರಿಕೆಟ್ ಚರಿತ್ರೆಯ ಶ್ರೇಷ್ಠ ದಾಖಲೆ ಸರ್ಫರಾಜ್ ಹೆಸರಿಗೆ... ಸಚಿನ್, ರೋಹಿತ್‌ ಕೂಡ ಮುಟ್ಟಲು ಸಾಧ್ಯವಾಗದ ಶ್ರೇಷ್ಠ ದಾಖಲೆಯಿದು! 65 ವರ್ಷಗಳಲ್ಲಿ ಇದೇ ಮೊದಲು

Sarfaraz Khan Double Century: ಸರ್ಫರಾಜ್ ಖಾನ್ ಇರಾನಿ ಕಪ್‌ನಲ್ಲಿ ಅಜಿಂಕ್ಯ ರಹಾನೆ ನಾಯಕತ್ವದ ತಂಡದ ಭಾಗವಾಗಿದ್ದಾರೆ. ಮುಂಬೈ ಪರ 65 ವರ್ಷಗಳ ಇತಿಹಾಸದಲ್ಲಿ ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಸರ್ಫರಾಜ್ ಪಾತ್ರರಾಗಿದ್ದಾರೆ.

Written by - Bhavishya Shetty | Last Updated : Oct 2, 2024, 08:26 PM IST
    • ಚೊಚ್ಚಲ ಸರಣಿಯಲ್ಲೇ ಬ್ರಿಟಿಷರಲ್ಲಿ ಭಯ ಮೂಡಿಸಿದ್ದ ಸರ್ಫರಾಜ್
    • ಇರಾನಿ ಕಪ್‌ನಲ್ಲಿ ದ್ವಿಶತಕ ಬಾರಿಸಿ ಸಂಚಲನ ಮೂಡಿಸಿದ್ದಾರೆ
    • ಸರ್ಫರಾಜ್ ಖಾನ್ ಇರಾನಿ ಕಪ್‌ನಲ್ಲಿ ಅಜಿಂಕ್ಯ ರಹಾನೆ ನಾಯಕತ್ವದ ತಂಡದ ಭಾಗವಾಗಿದ್ದಾರೆ
ಕ್ರಿಕೆಟ್ ಚರಿತ್ರೆಯ ಶ್ರೇಷ್ಠ ದಾಖಲೆ ಸರ್ಫರಾಜ್ ಹೆಸರಿಗೆ... ಸಚಿನ್, ರೋಹಿತ್‌ ಕೂಡ ಮುಟ್ಟಲು ಸಾಧ್ಯವಾಗದ ಶ್ರೇಷ್ಠ ದಾಖಲೆಯಿದು! 65 ವರ್ಷಗಳಲ್ಲಿ ಇದೇ ಮೊದಲು title=
File Photo

Sarfaraz Khan: ಚೊಚ್ಚಲ ಸರಣಿಯಲ್ಲೇ ಬ್ರಿಟಿಷರಲ್ಲಿ ಭಯ ಮೂಡಿಸಿದ್ದ ಸರ್ಫರಾಜ್ ಇರಾನಿ ಕಪ್‌ನಲ್ಲಿ ದಾಖಲೆಯ ಇನ್ನಿಂಗ್ಸ್ ಆಡಿದ್ದಾರು. ಇರಾನಿ ಕಪ್‌ನಲ್ಲಿ ಸಚಿನ್, ಗವಾಸ್ಕರ್ ಮತ್ತು ರೋಹಿತ್ ಕೂಡ ಮುಟ್ಟಲು ಸಾಧ್ಯವಾಗದ ದಾಖಲೆಯನ್ನು ಸರ್ಫರಾಜ್ ಖಾನ್ ನಿರ್ಮಿಸಿದ್ದಾರೆ. ದೇಶಿ ಕ್ರಿಕೆಟ್‌ನ ಈ ರನ್ ಮಷಿನ್ ಇರಾನಿ ಕಪ್‌ನಲ್ಲಿ ದ್ವಿಶತಕ ಬಾರಿಸಿ ಸಂಚಲನ ಮೂಡಿಸಿದ್ದಾರೆ.

ಇದನ್ನೂ ಓದಿ: ಭಾರತದ ಜೊತೆಗಿನ ಪ್ರತಿ ಪಂದ್ಯವೂ ಫಿಕ್ಸ್...‌ ಮ್ಯಾಚ್‌ ಫಿಕ್ಸಿಂಗ್‌ ಆರೋಪ ಹೊರಿಸಿದ ಪಾಕ್‌ ಆಟಗಾರ!

ಸರ್ಫರಾಜ್ ಖಾನ್ ಇರಾನಿ ಕಪ್‌ನಲ್ಲಿ ಅಜಿಂಕ್ಯ ರಹಾನೆ ನಾಯಕತ್ವದ ತಂಡದ ಭಾಗವಾಗಿದ್ದಾರೆ. ಮುಂಬೈ ಪರ 65 ವರ್ಷಗಳ ಇತಿಹಾಸದಲ್ಲಿ ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಸರ್ಫರಾಜ್ ಪಾತ್ರರಾಗಿದ್ದಾರೆ. ಈ ಹಿಂದೆ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜರು ಮುಂಬೈಗೆ ಕೊಡುಗೆ ನೀಡಿದ್ದರು. ಆದರೆ ಈ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ದಿನದಾಟದ ಅಂತ್ಯದವರೆಗೂ ಸರ್ಫರಾಜ್ 221 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು, ತಮ್ಮ ಇನ್ನಿಂಗ್ಸ್‌ನಲ್ಲಿ 25 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.

ಇದನ್ನೂ ಓದಿ: ಐಪಿಎಲ್ 2025 ರಲ್ಲಿ ಆಡುವುದಿಲ್ಲವೇ ಧೋನಿ? ಸಿಎಸ್‌ಕೆ ಫ್ರಾಂಚೈಸಿಯಿಂದಲೇ ಬಂತು ಅಧಿಕೃತ ಉತ್ತರ

1972ರಲ್ಲಿ 194* ರನ್ ಗಳಿಸಿದ್ದ ರಾಮನಾಥ್ ಪಾರ್ಕರ್ ಅವರನ್ನು ಸರ್ಫರಾಜ್ ಖಾನ್ ಹಿಂದಿಕ್ಕಿದ್ದಾರೆ. ಇವರ ಜೊತೆಗೆ 2010 ರಲ್ಲಿ 191 ರನ್ ಗಳಿಸಿದ್ದ ನಾಯಕ ಅಜಿಂಕ್ಯ ರಹಾನೆ ಅವರನ್ನು ದಾಖಲೆಯನ್ನೂ ಸಹ ಮುರಿದಿದ್ದಾರೆ.  

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News