Surya-Ketu Conjunction 2024: ಸೆಪ್ಟೆಂಬರ್ 16ರಂದು ಸೂರ್ಯನು ಕನ್ಯಾ ರಾಶಿಯಲ್ಲಿ ಸಂಜೆ 7.29ಕ್ಕೆ ಸಾಗುತ್ತಾನೆ. ಈ ರಾಶಿಯಲ್ಲಿ ಕೇತು ಈಗಾಗಲೇ ಇದೆ. ಈ ರೀತಿ 18 ವರ್ಷಗಳ ನಂತರ ಕನ್ಯಾ ರಾಶಿಯಲ್ಲಿ ಸೂರ್ಯ ಕೇತು ಸಂಯೋಗ ಆಗುತ್ತಿದೆ. 17 ಅಕ್ಟೋಬರ್ 2024ರವರೆಗೆ ಸೂರ್ಯನು ಈ ಸ್ಥಾನದಲ್ಲಿರುತ್ತಾನೆ.
Surya-Ketu Conjunction 2024: ಸೂರ್ಯ ಗ್ರಹವು ಪ್ರತಿ ತಿಂಗಳು ಅಂದರೆ 28ರಿಂದ 30 ದಿನಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ. ಈ ಸಂಚಾರದ ಸಮಯದಲ್ಲಿ ಸೂರ್ಯನು ಇತರ ಗ್ರಹಗಳೊಂದಿಗೆ ಸಂಯೋಗವಾದಾಗ ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಇದು ಸಕಾರಾತ್ಮಕ ಫಲಿತಾಂಶ ನೀಡುತ್ತದೆ. ಆದರೆ ಕೆಲವರು ಈ ಸಮಯದಲ್ಲಿ ನಕಾರಾತ್ಮಕ ಫಲಿತಾಂಶಗಳನ್ನು ಎದುರಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಸೆಪ್ಟೆಂಬರ್ 16ರಂದು ಸೂರ್ಯನು ಕನ್ಯಾ ರಾಶಿಯಲ್ಲಿ ಸಂಜೆ 7.29ಕ್ಕೆ ಸಾಗುತ್ತಾನೆ. ಈ ರಾಶಿಯಲ್ಲಿ ಕೇತು ಈಗಾಗಲೇ ಇದೆ. ಈ ರೀತಿ 18 ವರ್ಷಗಳ ನಂತರ ಕನ್ಯಾ ರಾಶಿಯಲ್ಲಿ ಸೂರ್ಯ ಕೇತು ಸಂಯೋಗ ಆಗುತ್ತಿದೆ. 17 ಅಕ್ಟೋಬರ್ 2024ರವರೆಗೆ ಸೂರ್ಯನು ಈ ಸ್ಥಾನದಲ್ಲಿರುತ್ತಾನೆ. ಅಕ್ಟೋಬರ್ 17ರವರೆಗೆ ಕೇತು ಮತ್ತು ಸೂರ್ಯನು ಕನ್ಯಾ ರಾಶಿಯಲ್ಲಿ ಸಂಯೋಗದಲ್ಲಿರುತ್ತಾರೆ.
ಸೂರ್ಯ ಗ್ರಹ ಆಕಾಂಕ್ಷೆಯನ್ನು ಪ್ರತಿನಿಧಿಸುತ್ತಾನೆ, ಆದರೆ ಕೇತುವು ನಿರಾಶೆಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಇದು ಕೆಲ ರಾಶಿಯ ಸ್ಥಳೀಯರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ, ಇನ್ನೂ ಕೆಲವರಿಗೆ ತೊಂದರೆಗಳನ್ನು ನೀಡುತ್ತದೆ. ಸೂರ್ಯ ಮತ್ತು ಕೇತುಗಳ ಸಂಯೋಗದ ಕಾರಣ ಕೆಲವು ರಾಶಿಯ ಸ್ಥಳೀಯರು ಜಾಗರೂಕರಾಗಿರಬೇಕು. ಯಾವ ರಾಶಿಯವರಿಗೆ ಇದರಿಂದ ತೊಂದರೆಯಾಗಲಿದೆ ಅನ್ನೋದರ ಬಗ್ಗೆ ತಿಳಿಯಿರಿ.
ಸೂರ್ಯ ಮತ್ತು ಕೇತು ಸಂಯೋಗವು ಮೇಷ ರಾಶಿಯವರಿಗೆ ತುಂಬಾ ಕಷ್ಟಕರ. ಮೇಷ ರಾಶಿಯವರು ಹೊರಗಿನ ಆಹಾರ ಸೇವನೆ ಮಾಡಬಾರದು. ನೀವು ಹೃದಯ ಸಂಬಂಧಿ ಕಾಯಿಲೆಗಳನ್ನು ಎದುರಿಸಿದರೆ, ಸಮಯಕ್ಕೆ ಸರಿಯಾಗಿ ಔಷಧಿಯನ್ನು ತೆಗೆದುಕೊಳ್ಳಿ. ಈ ಅವಧಿಯಲ್ಲಿ ನೀವು ಯಾರಿಗೂ ಸಾಲ ನೀಡಬೇಡಿ. ಹಣವನ್ನು ವ್ಯರ್ಥ ಮಾಡಬೇಡಿ. ಕಾನೂನು ಪ್ರಕರಣಗಳಿಂದ ನಿಮಗೆ ತೊಂದರೆಯಾಗಿದ್ದರೆ, ಈ ಅವಧಿಯಲ್ಲಿ ಇನ್ನಷ್ಟು ಸಮಸ್ಯೆ ಹೆಚ್ಚಾಗಬಹುದು. ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾರೆ. ಆರೋಗ್ಯ ಹದಗೆಡುವ ಸಾಧ್ಯತೆಗಳಿವೆ. ನಿಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಿ ಮತ್ತು ಆರೋಗ್ಯವನ್ನು ಸುರಕ್ಷಿತವಾಗಿರಿಸಲು ವೈದ್ಯರನ್ನು ಸಂಪರ್ಕಿಸಿ.
ಸೂರ್ಯ ಮತ್ತು ಕೇತುಗಳ ಸಂಯೋಗದಿಂದ ಮೀನ ರಾಶಿಯವರು ಜಾಗರೂಕರಾಗಿರಬೇಕು. ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಇದರಿಂದ ಕೌಟುಂಬಿಕ ಶಾಂತಿ ಕದಡುವ ಸಂಭವವಿದೆ. ಮೀನ ರಾಶಿಯವರ ಆರೋಗ್ಯ ಹದಗೆಡಬಹುದು ಮತ್ತು ಹೃದಯ ಸಂಬಂಧಿ ತೊಂದರೆ ಎದುರಿಸಬಹುದು. ಈ ಸಮಯದಲ್ಲಿ ಶನಿಯ ಪ್ರಭಾವ ಹೆಚ್ಚಾಗಲಿದೆ. ಹಣ ಮತ್ತು ಆರೋಗ್ಯದ ವಿಷಯಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಪತಿ-ಪತ್ನಿಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಉಂಟಾಗಬಹುದು. ನಿಮ್ಮ ಸಂಗಾತಿಯ ನಡುವೆ ಸಮನ್ವಯದ ಕೊರತೆಯಿರಬಹುದು. ನೀವು ಸಹಭಾಗಿತ್ವದಲ್ಲಿ ಕೆಲಸ ಮಾಡುವುದನ್ನು ತಪ್ಪಿಸಬೇಕು.
ಕನ್ಯಾ ರಾಶಿಯವರಿಗೆ ಸೂರ್ಯ ಮತ್ತು ಕೇತುವಿನ ಸಂಯೋಗ ತುಂಬಾ ತೊಂದರೆಯನ್ನುಂಟು ಮಾಡಲಿದೆ. ನೀವು ಇತರರೊಂದಿಗೆ ಎಚ್ಚರಿಕೆಯಿಂದ ಮಾತನಾಡಬೇಕು. ನಿಮ್ಮ ಮಾತನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಇಲ್ಲವಾದರೆ ನೀವು ಬೇರೆಯವರೊಂದಿಗೆ ಜಗಳವಾಡಬೇಕಾಗುತ್ತದೆ. ಹೂಡಿಕೆಗೆ ಇದು ಅನುಕೂಲಕರ ಅವಧಿಯಲ್ಲ. ಹಣ ಉಳಿತಾಯದತ್ತ ಗಮನ ಹರಿಸಬೇಕು. ಯಾರೊಂದಿಗೂ ಜಗಳದಲ್ಲಿ ತೊಡಗಬೇಡಿ ಮತ್ತು ತೊಂದರೆಗೊಳಗಾದ ಸಂದರ್ಭಗಳಲ್ಲಿ ಶಾಂತವಾಗಿರಲು ಪ್ರಯತ್ನಿಸಿ. ಈ ಅವಧಿಯಲ್ಲಿ ಕನ್ಯಾ ರಾಶಿಯವರ ಧೈರ್ಯ ಮತ್ತು ಶೌರ್ಯ ಕುಗ್ಗುತ್ತದೆ. ವ್ಯಾಪಾರಸ್ಥರು ಪ್ರಯಾಣ ತಪ್ಪಿಸಬೇಕು. ನಿಮ್ಮ ಪ್ರಯಾಣದ ಸಮಯದಲ್ಲಿ ಅಪಘಾತದ ಸಾಧ್ಯತೆಗಳಿವೆ. ಈ ಸಮಯದಲ್ಲಿ ನೀವು ಚಾಲನೆ ಮಾಡುವಾಗ ಅತ್ಯಂತ ಜಾಗರೂಕರಾಗಿರಬೇಕು.