Health Tips: ಚಳಿಗಾಲದಲ್ಲಿ ಕೀಲುನೋವನ್ನು ನಿವಾರಿಸಲು ಈ ಆಹಾರಗಳು ಸೇವಿಸಿರಿ

Joint pain remedies food: ಸಂಧಿವಾತ ಅಥವಾ ಇತರ ನೋವನಿಂದ ಬಳಲುತ್ತಿರುವವರು ತಮ್ಮ ವೈದ್ಯರು ಶಿಫಾರಸ್ಸು ಮಾಡಿದಂತೆ ಕೆಲವು ನಿತ್ಯ ವ್ಯಾಯಾಮಗಳನ್ನು ಮಾಡುವುದು, ಭಂಗಿಯನ್ನು ಸುಧಾರಿಸುವುದು, ಸೂಚಿಸಿದ ಔಷಧಿಗಳನ್ನು ಸೇವಿಸುವುದು ಹಾಗೂ ವಿಶ್ರಾಂತಿಯನ್ನು ಪಡೆಯುವುದರಿಂದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ​

Foods to relieve joint pain in winter: ವಯಸ್ಸು, ಸಂಧಿವಾತ ಅಥವಾ ಇತರ ಯಾವುದೇ ಸ್ಥಿತಿಯಿಂದಾಗಿ ಕೀಲು ಹಾಗೂ ಮೂಳೆಗಳ ನೋವಿನಿಂದ ಬಳಲುತ್ತಿರುವವರು ಚಳಿಗಾಲದಲ್ಲಿ ಹೆಚ್ಚು ನೋವು, ಅಸ್ವಸ್ಥೆಗೆ ಒಳಗಾಗಬಹುದು. ಚಳಿಗಾಲದ ಶೀತದ ವಾತಾವರಣ ಕೆಲವೊಮ್ಮೆ ನೋವನ್ನು ಉಲ್ಬಣಗೊಳಿಸುವ ಸಾಧ್ಯತೆಯೂ ಇರುತ್ತದೆ. ಸಂಧಿವಾತ ಅಥವಾ ಇತರ ನೋವನಿಂದ ಬಳಲುತ್ತಿರುವವರು ತಮ್ಮ ವೈದ್ಯರು ಶಿಫಾರಸ್ಸು ಮಾಡಿದಂತೆ ಕೆಲವು ನಿತ್ಯ ವ್ಯಾಯಾಮಗಳನ್ನು ಮಾಡುವುದು, ಭಂಗಿಯನ್ನು ಸುಧಾರಿಸುವುದು, ಸೂಚಿಸಿದ ಔಷಧಿಗಳನ್ನು ಸೇವಿಸುವುದು ಹಾಗೂ ವಿಶ್ರಾಂತಿಯನ್ನು ಪಡೆಯುವುದರಿಂದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಸಂಧಿವಾತದ ಪರಿಹಾರಕ್ಕೆ ಯಾವುದೇ ಆಹಾರದ ಚಿಕಿತ್ಸೆ ಇಲ್ಲವಾದರೂ ಕೆಲವು ಆಹಾರಗಳನ್ನು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ, ಕೀಲುಗಳಲ್ಲಿನ ಊತವನ್ನು ಕಡಿಮೆ ಮಾಡುತ್ತದೆ. ಅಂತೆಯೇ ಚಳಿಗಾಲದಲ್ಲಿ ನೀವು ಸೇವಿಸಬಹುದಾದ ಅಂತಹ ಕೆಲವು ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಸಾಲ್ಮನ್‌, ಬಂಗುಡೆಯಂತಹ ಕೊಬ್ಬಿನ ಮೀನು ಪ್ರಭೇದಗಳು ಸಮೃದ್ಧ ಪ್ರಮಾಣದಲ್ಲಿ ಒಮೆಗಾ-೩ ಕೊಬ್ಬಿನಾಮ್ಲಗಳು, ವಿಟಮಿನ್‌ ಡಿ ಹೊಂದಿರುತ್ತವೆ. ಇದು ಉರಿಯೂತ ವಿರೋಧಿ ಗುಣಲಕ್ಷಣವನ್ನು ಹೊಂದಿದ್ದು, ಕೀಲುಗಳ ನೋವು ನಿವಾರಿಸಲು ನೆರವಾಗುತ್ತದೆ. ಹೀಗಾಗಿ ಈ ಆಹಾರಗಳನ್ನು ನಿಮ್ಮ ಡಯೆಟ್‌ನಲ್ಲಿ ಸೇರಿಸಿಕೊಳ್ಳಬಹುದು.

2 /6

ಬೆಳ್ಳುಳ್ಳಿ, ಈರುಳ್ಳಿಯಂತಹ ಬೇರು ಮೂಲದ ತರಕಾರಿಗಳು ಡಯಾಲಿಲ್‌ ಡೈಸಲ್ಫೈಡ್‌ ಅನ್ನು ಹೊಂದಿರುತ್ತವೆ. ಇದು ಉರಿಯೂತ ವಿರೋಧಿ ಸಂಯುಕ್ತವಾಗಿದ್ದು, ಊರಿಯೂತದ ವಿರುದ್ಧ ಹೋರಾಡಲು, ನೋವನ್ನು ನಿವಾರಿಸಲು ಹಾಗೂ ಒಟ್ಟಾರೆ ಕೀಲುಗಳ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ ಎನ್ನಲಾಗುತ್ತದೆ. 

3 /6

ಶುಂಠಿ ಕೂಡ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ತಾಜಾ ಅಥವಾ ಒಣಗಿದ ರೂಪದಲ್ಲಿ ಶುಂಠಿಯ ನಿಯಮಿತ ಸೇವನೆಯಿಂದ ಕೀಲುಗಳ ಉರಿಯೂತವನ್ನು ಪರಿಹರಿಸಿಕೊಳ್ಳಬಹುದು. ನಿಮ್ಮ ದೈನಂದಿನ ಚಹಾ, ಸಾರು ಅಥವಾ ಇತರ ಖಾದ್ಯಗಳಲ್ಲಿ ಶುಂಠಿಯನ್ನು ಸೇರಿಸಬಹುದು ಅಥವಾ ಒಂದು ಕಪ್‌ ಬೆಚ್ಚಗಿನ ನೀರಿನಲ್ಲಿ ಸೇರಿಸಿ ಜೇನುತುಪ್ಪವನ್ನು ಬೆರೆಸಿ ಕುಡಿಯಬಹುದು.

4 /6

ಒಣಬೀಜಗಳು ಅಥವಾ ಡ್ರೈಫ್ರೂಟ್ಸ್‌ ಆರೋಗ್ಯಕರ ಕೊಬ್ಬು, ಒಮೆಗಾ-೩ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ. ಬಾದಾಮಿ, ವಾಲ್ನಟ್‌, ಅಗಸೆ ಬೀಜಗಳಂತಹ ಬೀಜಗಳನ್ನು ಸಣ್ಣ ಪ್ರಮಾಣದಲ್ಲಿ ನಿಯಮಿತವಾಗಿ ಸೇವಿಸುವುದರಿಂದ ಕೀಲುಗಳ ಉರಿಯೂತದಿಂದ ಪರಿಹಾರ ಕಂಡುಕೊಳ್ಳಬಹುದು.

5 /6

ಸೇಬು ಹಣ್ಣುಗಳು, ಸ್ಟ್ರಾಬೆರ್ರಿಯಂತಹ ಹಣ್ಣುಗಳು ಆಂಟಿ-ಆಕ್ಸಿಡೆಂಟ್‌ ಗುಣಗಳಿಂದ ಸಮೃದ್ಧವಾಗಿರುತ್ತವೆ. ಇವುಗಳು ದೇಹವು ಹಾನಿಕಾರಕ ಫ್ರೀ ರಾಡಿಕಲ್‌ಗಳನ್ನು ತೊಡೆದುಹಾಕಲು, ಉರಿಯೂತ ತಗ್ಗಿಸಲು ಸಹಾಯ ಮಾಡುತ್ತದೆ. ಆಂಥೋಸಯಾನಿನ್‌ಗಳಲ್ಲಿ ಸಮೃದ್ಧವಾಗಿರುವ ಚರ್ರಿಗಳ ಸೇವನೆಯೂ ಕೀಲು, ಸ್ನಾಯುಗಳ ಊತವನ್ನು ಕಡಿಮೆ ಮಾಡಲು ಸಹಾಯಕವಾಗಿವೆ.

6 /6

ಆಲಿವ್‌ ಎಣ್ಣೆ ಅನ್‌ಸ್ಯಾಚುರೇಡೆಟ್‌, ಆರೋಗ್ಯಕರ ಕೊಬ್ಬು ಹಾಗೂ ಒಮೆಗಾ-೩ ಮೂಲವಾಗಿದೆ. ಆಲಿವ್‌ ಎಣ್ಣೆಯು ಒಲಿಯೊಕಾಂಥಲ್‌ ಅನ್ನು ಕೂಡ ಹೊಂದಿದೆ. ಇದು ಉರಿಯೂತದಿಂದ ಪರಿಹಾರವನ್ನು ನೀಡುತ್ತದೆ. ಹೀಗಾಗಿ ನಿಮ್ಮ ದೈನಂದಿನ ಅಡುಗೆಯಲ್ಲಿ ಆಲಿವ್‌ ಎಣ್ಣೆಯನ್ನು ಸೇರಿಸಬಹುದು.