ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಆರಂಭವಾಗಿದೆ.ಈ ಮಾರಾಟದಲ್ಲಿ ಐಫೋನ್ಗಳ ಮೇಲೆ ಉತ್ತಮ ರಿಯಾಯಿತಿಗಳನ್ನು ಪಡೆಯಬಹುದು.iPhone 14 Plus, iPhone 15, iPhone 15 Proನಂತಹ ಅನೇಕ ಫೋನ್ಗಳಲ್ಲಿ ನೇರ ರಿಯಾಯಿತಿಗಳು ಮತ್ತು ಬ್ಯಾಂಕ್ ಕೊಡುಗೆಗಳನ್ನು ಪಡೆಯಬಹುದು.ಇಂದು ಐಫೋನ್ 15 ಅನ್ನು ಅಗ್ಗದ ಬೆಲೆಗೆ ಖರೀದಿಸಬಹುದು.
ಐಫೋನ್ 15 :
ಐಫೋನ್ 15 ಅನ್ನು 69,900 ರೂಪಾಯಿಗೆ ಪರಿಚಯಿಸಲಾಯಿತು.ಆದರೆ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಫೋನ್ನ ಬೆಲೆ 54,999 ರೂ. ಅಂದರೆ ಈ ಫೋನಿನ ಮೇಲೆ 21 ಶೇ ದಷ್ಟು ರಿಯಾಯಿತಿ ನೀಡಲಾಗುತ್ತಿದೆ.ಈ ಬೆಲೆ ಇದುವರೆಗಿನ ಅತ್ಯಂತ ಕಡಿಮೆ ಬೆಲೆಯಾಗಿದೆ.
ಇದನ್ನೂ ಓದಿ : 6 ಸಾವಿರ ರೂಪಾಯಿಗೆ Smart Tv!ಫ್ಲಿಪ್ಕಾರ್ಟ್ ಸೇಲ್ ನ ಆಫರ್, ಡಿಸ್ಕೌಂಟ್ ಬಗ್ಗೆ ಫುಲ್ ಡಿಟೇಲ್ಸ್ !
iPhone 15 Flipkart ಆಫರ್ :
ನೀವು ಎಚ್ಡಿಎಫ್ಸಿ ಕಾರ್ಡ್ ಹೊಂದಿದ್ದರೆ ನಿಮಗೆ 3,500 ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ.ಈ ರಿಯಾಯಿತಿಯೊಂದಿಗೆ ಫೋನ್ ಬೆಲೆ ಸ್ವಲ್ಪ ಕಡಿಮೆಯಾಗುತ್ತದೆ.ಆದರೆ, ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ಮತ್ತೆ 1500 ರೂ. ರಿಯಾಯಿತಿ ಸಿಗುತ್ತದೆ.ಇದಾದ ನಂತರ ಫೋನ್ ಬೆಲೆ 49,999 ರೂ ಆಗಲಿದೆ.
iPhone 15 ವಿಶೇಷಣಗಳು :
ಐಫೋನ್ 15 6.1-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ.ಇದು ಉತ್ತಮ ರೆಸಲ್ಯೂಶನ್ ಹೊಂದಿದೆ.ಇದು ಡೈನಾಮಿಕ್ ಐಲ್ಯಾಂಡ್ ಡಿಸೈನ್ ಹೊಂದಿದೆ. .48 MP ಮುಖ್ಯ ಕ್ಯಾಮೆರಾ ಮತ್ತು 12 MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಹೀಗೆ ಐಫೋನ್ 15 ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿದೆ.ಇನ್ನು ಸೆಲ್ಫಿಗಾಗಿ 12 MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
iPhone 15 ಬಯೋನಿಕ್ A16 ಚಿಪ್ ಅನ್ನು ಹೊಂದಿದೆ. ಇದು ತುಂಬಾ ವೇಗವಾಗಿದೆ.ಇದು 6GB RAM ಅನ್ನು ಹೊಂದಿದ್ದು, ಇದರಿಂದ ನೀವು ಮಲ್ಟಿಟಾಸ್ಕ್ ಮಾಡಬಹುದು.ವೆಬ್ ಬ್ರೌಸ್ ಮಾಡುತ್ತಿರಲಿ, ವೀಡಿಯೊಗಳನ್ನು ವೀಕ್ಷಿಸುತ್ತಿರಲಿ ಅಥವಾ ಯಾವುದೇ ಕೆಲಸ ಮಾಡುತ್ತಿರಲಿ,iPhone 15 ಸರಾಗವಾಗಿ ನಡೆಯುತ್ತದೆ. ಐಫೋನ್ 15 ರ ವಿನ್ಯಾಸವು ತುಂಬಾ ಚೆನ್ನಾಗಿದೆ.ಈ ಫೋನ್ ವಿವಿಧ ಬಣ್ಣಗಳಲ್ಲಿ ಬರುತ್ತದೆ.
ಇದನ್ನೂ ಓದಿ : Amazon Great Indian Festival Sale: 15 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಬ್ರ್ಯಾಂಡೆಡ್ ಸ್ಮಾರ್ಟ್ಫೋನ್ಗಳು ಲಭ್ಯ
ಈ ಫೋನ್ 3349 mAh ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್ನಲ್ಲಿ ಇಡೀ ದಿನ ಕಾರ್ಯನಿರ್ವಹಿಸುತ್ತದೆ.ಈ ಫೋನ್ ಬಹಳ ಬೇಗನೆ ಚಾರ್ಜ್ ಆಗುತ್ತದೆ. ಆದ್ದರಿಂದ ಇದನ್ನು ಚಾರ್ಜ್ ಮಾಡಲು ಹೆಚ್ಚು ಸಮಯ ಕಾಯಬೇಕಾಗಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.