ಏರ್‌ಟೆಲ್ ಧಮಾಕಾ ಪ್ಲಾನ್ಸ್: ಕೇವಲ 7 ರೂ.ಗೆ ಸಿಗುತ್ತೆ 1 GB ಡೇಟಾ

Airtel Prepaid Plans: ನಿಮಗೂ ಹೆಚ್ಚು ಇಂಟರ್ನೆಟ್ ಅವಶ್ಯಕತೆ ಇದೆಯೇ? ಹೌದು, ಎಂದಾದರೆ ನಿಮಗಾಗಿ ಏರ್‌ಟೆಲ್ ಪರಿಚಯಿಸಿದೆ ಧಮಾಕಾ ರೀಚಾರ್ಜ್ ಯೋಜನೆಗಳು. 

Written by - Yashaswini V | Last Updated : Sep 24, 2024, 01:39 PM IST
  • ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಹಲವು ಕೈಗೆಟುಕುವ ಯೋಜನೆಗಳನ್ನು ನೀಡುತ್ತಲೇ ಇರುತ್ತದೆ.
  • ಏರ್‌ಟೆಲ್ ಇದೀಗ ಮೂರು ಅದ್ಭುತ ಪ್ಲಾನ್‌ಗಳನ್ನು ಪರಿಚಯಿಸಿದೆ.
  • ಇವುಗಳಲ್ಲಿ ಒಂದು ಯೋಜನೆಯಲ್ಲಿ ಕೇವಲ 7 ರೂ. ಗೆ ಒಂದು ಜಿಬಿ ಡೇಟಾ ಲಭ್ಯವಾಗಲಿದೆ.
ಏರ್‌ಟೆಲ್ ಧಮಾಕಾ ಪ್ಲಾನ್ಸ್: ಕೇವಲ 7 ರೂ.ಗೆ ಸಿಗುತ್ತೆ 1 GB ಡೇಟಾ  title=
Airtel Cheapest Plans

Cheapest Airtel Data Packs: ಭಾರತದ ಪ್ರಸಿದ್ಧ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಮೂರು ಅದ್ಭುತ ಧಮಾಕಾ ರಿಚಾರ್ಜ್ ಪ್ಯಾಕ್‌ಗಳನ್ನು ಪರಿಚಯಿಸಿದೆ. ಹೆಚ್ಚುವರಿ ಡೇಟಾ ಒಳಗೊಂಡಿರುವ ಈ ರಿಚಾರ್ಜ್ ಪ್ಲಾನ್ಸ್ ಬೆಲೆಯೂ ತುಂಬಾ ಕೈಗೆಟುಕುವಂತಿದೆ. 

ಏರ್‌ಟೆಲ್‌ನ ಡೇಟಾ ಪ್ಲಾನ್‌ಗಳು (Data Plans of Airtel): 
ಏರ್‌ಟೆಲ್‌ನ ಡೇಟಾ ಪ್ಯಾಕ್‌ಗಳು 161 ರೂ, 181 ರೂ. ಮತ್ತು 361 ರೂ.ಗಳಿಗೆ ಲಭ್ಯವಿದ್ದು ಈ ಯೋಜನೆಗಳ ಮಾನ್ಯತೆ, ಮತ್ತು ಏನೆಲ್ಲಾ ಪ್ರಯೋಜನಗಳು ಲಭ್ಯವಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. 

ಏರ್‌ಟೆಲ್‌ನ 161 ರೂ. ಯೋಜನೆ (Airtel Rs 161 Plan) : 
ಸಂಪೂರ್ಣ ತಿಂಗಳ ಪ್ಯಾಕ್ ಆಗಿರುವ 161 ರೂ. ಯೋಜನೆಯಲ್ಲಿ ಏರ್‌ಟೆಲ್ ಯಾವುದೇ ದೈನಂದಿನ ಮಿತಿಯಿಲ್ಲದೆ 12ಜಿ‌ಬಿ ಡೇಟಾ ಒದಗಿಸುತ್ತದೆ. ಇದು ಪ್ರತಿ ಜಿಬಿಗೆ 13ರೂ. ತಗುಲುತ್ತದೆ. 

ಇದನ್ನೂ ಓದಿ- ಗ್ರಾಹಕರಿಗಾಗಿ ಕೇವಲ 26 ರೂ. ರಿಚಾರ್ಜ್ ಪ್ಲಾನ್ ಪರಿಚಯಿಸಿದ ಏರ್‌ಟೆಲ್..! 

181 ರೂ. ಯೋಜನೆ (Airtel Rs 181 Plan): 
ಏರ್‌ಟೆಲ್ ಪರಿಚಯಿಸಿರುವ ಈ ಯೋಜನೆ ಕೂಡ 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ಇದರಲ್ಲಿ ಒಟ್ಟು 15 ಜಿ‌ಬಿ ಡೇಟಾ ಲಭ್ಯವಿದ್ದು ಪ್ರತಿ ಜಿಬಿ ಬೆಲೆ 12 ರೂ. ಆಗಿರುತ್ತದೆ. 

ಇದನ್ನೂ ಓದಿ- ಸೆಟ್ಟಿಂಗ್ ನಲ್ಲಿ ಈ ಬಟನ್ ಆನ್ ಮಾಡಿದರೆ ಸಾಕು ರಾಕೆಟ್ ನಂತೆ ಸ್ಪೀಡ್ ಆಗುವುದು BSNL ಇಂಟರ್ ನೆಟ್ !

ಏರ್‌ಟೆಲ್ 361 ರೂ. ಡೇಟಾ ಯೋಜನೆ (Airtel Rs 361 Plan): 
ಸಂಪೂರ್ಣ 30 ದಿನಗಳವರೆಗೆ ಮಾನ್ಯವಾಗಿರುವ ಏರ್‌ಟೆಲ್ 361 ರೂ. ಡೇಟಾ ಯೋಜನೆಯಲ್ಲಿ ಒಟ್ಟು 50ಜಿಬಿ ಡೇಟಾಲಭ್ಯವಿರುತ್ತದೆ. ಅರ್ಥಾತ್, ಪ್ರತಿ ಜಿಬಿ ಬೆಲೆ ಕೇವಲ 7 ರೂ.ಗಳು ಮಾತ್ರ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News