ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಇಸ್ರೋ!ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ

10ನೇ ತರಗತಿಯಿಂದ ಹಿಡಿದು ಪದವಿವರೆಗಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ವಿವಿಧ ಖಾಲಿ ಇರುವ ಹುದ್ದೆಗಳಿಗೆ ಇಸ್ರೋ ಅರ್ಜಿ ಆಹ್ವಾನಿಸಿದೆ. 

Last Updated : Sep 23, 2024, 06:33 PM IST
ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಇಸ್ರೋ!ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ  title=

ISRO recruitment 2024 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ದ ಬೆಂಗಳೂರು ಮೂಲದ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರ (HSFC) ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.ತಂತ್ರಜ್ಞ ಮತ್ತು ವೈದ್ಯಕೀಯ ಅಧಿಕಾರಿ ಸೇರಿದಂತೆ ಒಟ್ಟು 103 ಹುದ್ದೆಗಳಿಗೆ  ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿಯಿಂದ ಹಿಡಿದು ಪದವಿವರೆಗಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ತಮ್ಮ ಅರ್ಜಿಗಳನ್ನು ಅಕ್ಟೋಬರ್ 9 ರವರೆಗೆ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.

ಹುದ್ದೆ ವಿವರ ಮತ್ತು ವಿದ್ಯಾರ್ಹತೆ: 
ISRO ದ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (HSFC)ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಪ್ರತಿ ಪೋಸ್ಟ್‌ಗೆ ಅಗತ್ಯವಿರುವ ವಿದ್ಯಾರ್ಹತೆಗಳನ್ನು ಪೂರೈಸಬೇಕು. 

ಇದನ್ನೂ ಓದಿ : ಕಾನೂನು ಆಡಳಿತ ನ್ಯಾಯಾಧಿಕರಣ ತರಬೇತಿ; ಅರ್ಜಿ ಸಲ್ಲಿಕೆ ಅವಧಿ ಸೆ.30ರವರೆಗೆ ವಿಸ್ತರಣೆ

ವೈದ್ಯಕೀಯ ಅಧಿಕಾರಿ – 3 ಹುದ್ದೆಗಳು, ವಿದ್ಯಾರ್ಹತೆ: MBBS, MD
ಸೈಂಟಿಫಿಕ್ ಇಂಜಿನಿಯರ್ – 10 ಹುದ್ದೆಗಳು, ವಿದ್ಯಾರ್ಹತೆ: B.E ಅಥವಾ B.Tech ಅಥವಾ M.Tech
ಟೆಕ್ನಿಕಲ್ ಅಸಿಸ್ಟೆಂಟ್ – 28 ಹುದ್ದೆಗಳು, ವಿದ್ಯಾರ್ಹತೆ: Diploma
Scientific Assistant – 1 ಹುದ್ದೆ, ವಿದ್ಯಾರ್ಹತೆ: B.Sc , ಪದವಿ
ತಂತ್ರಜ್ಞ-ಬಿ (ಫಿಟ್ಟರ್) - 22 ಹುದ್ದೆಗಳು, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ತಂತ್ರಜ್ಞ-ಬಿ (ಎಲೆಕ್ಟ್ರಾನಿಕ್ ಮೆಕ್ಯಾನಿಕ್) - 12 ಹುದ್ದೆಗಳು, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನಿಷಿಯನ್-ಬಿ (ಎಸಿ ಮತ್ತು ರೆಫ್ರಿಜರೇಷನ್) - 1 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ , ಐಟಿಐ
ತಂತ್ರಜ್ಞ-ಬಿ (ವೆಲ್ಡರ್) - 2 ಹುದ್ದೆಗಳು, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನಿಷಿಯನ್-ಬಿ (ಮೆಷಿನಿಸ್ಟ್) - 1 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನಿಷಿಯನ್-ಬಿ (ಎಲೆಕ್ಟ್ರಿಕಲ್) - 3 ಹುದ್ದೆಗಳು, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಟೆಕ್ನಿಷಿಯನ್-ಬಿ (ಟರ್ನರ್) - 1 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ತಂತ್ರಜ್ಞ-ಬಿ (ಗ್ರೈಂಡರ್) - 1 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಡ್ರಾಫ್ಟ್‌ಮ್ಯಾನ್-ಬಿ (ಮೆಕ್ಯಾನಿಕಲ್) - 9 ಹುದ್ದೆಗಳು, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಡ್ರಾಫ್ಟ್‌ಮನ್ - ಬಿ (ಸಿವಿಲ್) – 4 ಹುದ್ದೆಗಳು, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
ಸಹಾಯಕ (ಅಧಿಕೃತ ಭಾಷೆ) – 5 ಹುದ್ದೆಗಳು, ವಿದ್ಯಾರ್ಹತೆ: ಪದವಿ

ಇದನ್ನೂ ಓದಿ : Career in KPCL: ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನ

ವಯಸ್ಸಿನ ಮಿತಿ ಮತ್ತು ಅರ್ಜಿ ಶುಲ್ಕ: 
ISRO ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (HSFC) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ಮತ್ತು ಗರಿಷ್ಠ ವಯಸ್ಸು 35 ವರ್ಷಗಳು.ಮೀಸಲಾತಿ ನೀತಿಗಳ ಪ್ರಕಾರ ವಯಸ್ಸಿನಲ್ಲಿ ವಿನಾಯಿತಿ ಇರುತ್ತದೆ. OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತು SC/ST ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇದೆ.ಎಲ್ಲಾ ಅಭ್ಯರ್ಥಿಗಳು  750 ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಆಯ್ಕೆ ಪ್ರಕ್ರಿಯೆ: 
ಇಸ್ರೋದ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್‌ನಲ್ಲಿ (ಎಚ್‌ಎಸ್‌ಎಫ್‌ಸಿ) ಖಾಲಿ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. 

ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿ ಸಲ್ಲಿಸಲು, https://cdn.digialm.com/EForms/configuredHtml/1258/90047/Registration.html)ಈ ಲಿಂಕ್‌ಗೆ ಹೋಗಿ 
ಈ ಲಿಂಕ್ ತೆರೆದಾಗ, ಇಲ್ಲಿ ಲಾಗಿನ್ ಮಾಡಿ. 
ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. 
ಅರ್ಜಿ ಶುಲ್ಕವನ್ನು ಜಮಾ ಮಾಡಿ. 
ಭರ್ತಿ ಮಾಡಿದ ವಿವರಗಳನ್ನು ಪುನಃ ಪರಿಶೀಲಿಸಿ ಮತ್ತು ಸಬ್ಮಿಟ್ ಬಟನ್ ಕ್ಲಿಕ್ ಮಾಡಿ. ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಸೇವ್ ಮಾಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News