Lizard falling on body Astrology : ಹಲ್ಲಿ ಎಲ್ಲರ ಮನೆಯಲ್ಲೂ ಕಾಣಸಿಗುವ ಜೀವಿ. ಹೆಚ್ಚಿನ ಜನರಿಗೆ ಇದನ್ನ ಕಂಡ್ರೆ ಹೆದರಿಕೆ, ಅದಕ್ಕಾಗಿಯೇ ಕೆಲವರು ಹಲ್ಲಿಗಳನ್ನು ಮನೆಯಿಂದ ಓಡಿಸುತ್ತಾರೆ.. ಆದರೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇವುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ನಮ್ಮ ಮೇಲೆ ಹಲ್ಲಿ ಬೀಳುವುದು ಶುಭ ಶಕುನ ಎಂದು ಪರಿಗಣಿಸಲಾಗಿದ್ದರೂ ಕೌಳಿ ಶಾಸ್ತ್ರ ಕೆಲವೊಂದಿಷ್ಟು ವಿಶೇಷತೆಗಳನ್ನು ತಿಳಿಸುತ್ತದೆ..
ನಿಮ್ಮ ತಲೆಯ ಮೇಲೆ ಹಲ್ಲಿ ಬಿದ್ದರೆ, ಅದು ನಿಮಗೆ ಬರುವ ಕೆಟ್ಟ ಶಕುನವನ್ನು ಸೂಚಿಸುತ್ತದೆ. ನಿಮ್ಮ ಕೆಟ್ಟ ಸಮಯವನ್ನು ಎದುರಿಸಲು ಹಲ್ಲಿ ಎಚ್ಚರಿಕೆ ನೀಡುತ್ತದೆ. ತಲೆಯ ಮೇಲೆ ಹಲ್ಲಿ ಬಿದ್ದರೆ, ವ್ಯಕ್ತಿಯ ಸಂಬಂಧಿ ಅಥವಾ ಪರಿಚಯಸ್ಥರು ಸಾಯಬಹುದು. ಅಲ್ಲದೆ, ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುತ್ತೀರಿ.
ಹಣೆಯ ಮೇಲೆ ಹಲ್ಲಿ ಬೀಳುವುದನ್ನು ಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಹಣೆಯ ಎಡಭಾಗದಲ್ಲಿ ಬಿದ್ದರೆ ಕೀರ್ತಿ ಪ್ರಾಪ್ತಿಯಾಗುತ್ತದೆ, ಬಲ ಹಣೆಯ ಮೇಲೆ ಬಿದ್ದರೆ ಲಕ್ಷ್ಮೀ ಕಟಾಕ್ಷ ಉಂಟಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಮುಖದ ಮೇಲೆ ಹಲ್ಲಿ ಬಿದ್ದರೆ ಮನೆಗೆ ಸಂಬಂಧಿಕರು ಬರುತ್ತಾರೆ ಎಂದು ಹೇಳಲಾಗುತ್ತದೆ.
ಹುಬ್ಬಿನ ಮೇಲೆ ಹಲ್ಲಿ ಬಿದ್ದರೆ ಕಚೇರಿಯಲ್ಲಿ ಅಧಿಕಾರಿಗಳ ಸಹಾಯ ಲಭಿಸುತ್ತದೆ ಎಂಬ ನಂಬಿಕೆ ಇದೆ. ಹಲ್ಲಿ ಕಣ್ಣುಗಳ ಮೇಲೆ ಬಿದ್ದರೆ, ನೀವು ಯಾವುದೋ ಕಾರಣಕ್ಕಾಗಿ ಶಿಕ್ಷೆಗೆ ಒಳಗಾಗಬಹುದು ಎಂದರ್ಥ. ನಮ್ಮ ದೇಹದ ಎಡಗೈ ಅಥವಾ ಎಡಗಾಲಿನ ಮೇಲೆ ಹಲ್ಲಿ ಬಿದ್ದರೆ ದಿನವಿಡೀ ಅತೀವ ಸುಖವಿದೆ ಎಂಬ ನಂಬಿಕೆ.
ನಮ್ಮ ದೇಹದ ಬಲಗೈ ಅಥವಾ ಬಲ ಕಾಲಿನ ಮೇಲೆ ಹಲ್ಲಿ ಬಿದ್ದರೆ ಆ ದಿನ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಕಾಲಿನ ಮೇಲೆ ಬಿದ್ದರೆ ಮುಂದಿನ ದಿನಗಳಲ್ಲಿ ವಿದೇಶ ಪ್ರವಾಸಕ್ಕೆ ಅವಕಾಶ ಸಿಗಲಿದೆ ಎಂಬ ನಂಬಿಕೆ. ಹೊಕ್ಕುಳ ಪ್ರದೇಶದಲ್ಲಿ ಹಲ್ಲಿ ಬಿದ್ದರೆ ಚಿನ್ನ, ವಜ್ರ, ಸೇರಿದಂತೆ ಬೆಲೆಬಾಳುವ ಅತ್ಯಮೂಲ್ಯ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಹೆಚ್ಚು.
ಬಲ ಪಾದದ ಪಾದದ ಮೇಲೆ ಹಲ್ಲಿ ಬಿಳುವುದು ಆರೋಗ್ಯ ಸಂಬಂಧಿತ ಚಟುವಟಿಕೆಗಳಿಗೆ ಗಮನವನ್ನು ಸೂಚಿಸುತ್ತದೆ. ಎಡಗಾಲಿನ ಮೇಲೆ ಹಲ್ಲಿ ಹತ್ತಿದರೆ ಆರೋಗ್ಯದ ಕಡೆ ಗಮನ ಹರಿಸಬೇಕು ಎಂಬುವುದರ ಸೂಚಕ. ತೊಡೆಯ ಮೇಲೆ ಹಲ್ಲಿ ಬಿದ್ದರೆ, ನೀವು ಹೆತ್ತವರಿಗೆ ದುಃಖವನ್ನುಂಟುಮಾಡುವ ಕೆಲಸವನ್ನು ಮಾಡುತ್ತೀರಿ ಎಂದರ್ಥ.
ಬಲ ಎದೆಯ ಮೇಲೆ ಹಲ್ಲಿ ಬಿದ್ದರೆ ಲಾಭ. ಎಡ ಎದೆಯ ಮೇಲೆ ಹಲ್ಲಿ ಬಿದ್ದರೆ ಸುಖ. ಕುತ್ತಿಗೆಯ ಎಡಭಾಗದಲ್ಲಿ ಬಿದ್ದರೆ ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ. ಬಲ ಕುತ್ತಿಗೆಯ ಮೇಲೆ ಹಲ್ಲಿ ಬಿದ್ದರೆ ಸಂಬಂಧಿ ಅಥವಾ ಇತರೆ ವ್ಯಕ್ತಿಯೊಂದಿಗೆ ದ್ವೇಷ ಉಂಟಾಗುತ್ತದೆ ಎಂಬ ನಂಬಿಕೆ ಇದೆ.
ಹಲ್ಲಿ ಬಿದ್ದರೆ ಏನು ಮಾಡಬೇಕು? : ನಮ್ಮ ದೇಹದ ಯಾವುದೇ ಭಾಗದ ಮೇಲೆ ಹಲ್ಲಿ ಬಿದ್ದರೆ ತಕ್ಷಣ ಸ್ನಾನ ಮಾಡಿ. ಸ್ನಾನ ಮುಗಿಸಿ ಸಮೀಪದ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮಾಡಿ. ಇಲ್ಲವೇ ಮನೆಯಲ್ಲಿ ದೀಪ ಹಚ್ಚಿ ದೇವರಿಗೆ ಪೂಜೆ ಮಾಡಿ. ಹಲ್ಲಿ ಬೀಳುವುದರಿಂದ ಯಾವುದೇ ಅನಿಷ್ಟ ಕಾರ್ಯಗಳು ಸಂಭವಿಸದಂತೆ ಪ್ರಾರ್ಥಿಸಿ.