ಪ್ರಯಾಣಿಕರ ಆಹಾರದಲ್ಲಿ ಜೀವಂತ ಇಲಿ ಪತ್ತೆ; ಟೇಕ್‌ಆಫ್‌ ಆದ ಕೆಲ ಕ್ಷಣಗಳಲ್ಲೇ ವಿಮಾನ ತುರ್ತು ಭೂಸ್ಪರ್ಶ!

Mouse in Flight Meal: ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ಪ್ರಯಾಣಿಕರ ಆಹಾರದಲ್ಲಿ ಜೀವಂತ ಇಲಿ ಪತ್ತೆಯಾದ ಕಾರಣ, ವಿಮಾನವೊಂದು ಟೇಕ್‌ಆಫ್‌ ಆದ ಕೆಲ ಕ್ಷಣಗಳಲ್ಲೇ ತುರ್ತು ಭೂಸ್ಪರ್ಶ ಮಾಡಿದೆ. ಇದರಿಂದ ಕೆಲಕಾಲ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. 

Written by - Puttaraj K Alur | Last Updated : Sep 21, 2024, 01:44 PM IST
  • ನಾರ್ವೆಯಲ್ಲಿ ಪ್ರಯಾಣಿಕರ ಆಹಾರದಲ್ಲಿ ಜೀವಂತ ಇಲಿ ಪತ್ತೆ
  • ಟೇಕ್‌ಆಫ್‌ ಆದ ಕೆಲ ಕ್ಷಣಗಳಲ್ಲೇ ವಿಮಾನ ತುರ್ತು ಭೂಸ್ಪರ್ಶ!
  • ಇಲಿ ಪತ್ತೆಯಾಗಿದ್ದರಿಂದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ
ಪ್ರಯಾಣಿಕರ ಆಹಾರದಲ್ಲಿ ಜೀವಂತ ಇಲಿ ಪತ್ತೆ; ಟೇಕ್‌ಆಫ್‌ ಆದ ಕೆಲ ಕ್ಷಣಗಳಲ್ಲೇ ವಿಮಾನ ತುರ್ತು ಭೂಸ್ಪರ್ಶ! title=
ವಿಮಾನ ತುರ್ತು ಭೂಸ್ಪರ್ಶ!

Mouse in Flight Meal: ಆಹಾರದಲ್ಲಿ ಜೀವಂತ ಇಲಿ ಪತ್ತೆಯಾದ ನಂತರ ನಾರ್ವೆಯಲ್ಲಿ ವಿಮಾನವೊಂದು ಟೇಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಅಷ್ಟೇ ಅಲ್ಲ ಈ ವಿಮಾನವನ್ನು ಬದಲಿ ಮಾರ್ಗಕ್ಕೆ ತಿರುಗಿಸಲಾಯಿತು. ಈ ಕಾರಣ ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಿ ಅವರ ಗಮ್ಯಸ್ಥಾನಕ್ಕೆ ತಲುಪಿಸಲಾಯಿತು. ಇಲಿಯ ಕಾರಣ ವಿಮಾನದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.   

ಎಮರ್ಜೆನ್ಸಿ ಲ್ಯಾಂಡಿಂಗ್ 

ಸೆಪ್ಟೆಂಬರ್ 18ರಂದು ನಾರ್ವೆಯ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. ಇದು ಎಲ್ಲಾ ಪ್ರಯಾಣಿಕರಲ್ಲಿ ಆತಂಕವನ್ನು ಮೂಡಿಸಿತ್ತು. ಓಸ್ಲೋ-ಮಲಗಾ ವಿಮಾನವನ್ನು ನಿರ್ವಹಿಸುತ್ತಿರುವ SAS ಏರ್‌ಲೈನ್ಸ್ ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಆಹಾರದಲ್ಲಿ ಜೀವಂತ ಇಲಿ ಪತ್ತೆಯಾಗಿತ್ತು. ಕೂಡಲೇ ಅವರು ಗಗನಸಕಿಯರ ಗಮನಕ್ಕೆ ತಂದರು. ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಈ ಪರಿಸ್ಥಿತಿಯಿಂದ ಪ್ರಯಾಣಿಕರಿಗೆ ಮತ್ತು ಕ್ಯಾಬಿನ್ ಸಿಬ್ಬಂದಿಗೆ ದೊಡ್ಡ ಆಘಾತವಾಗಿತ್ತು.

ಇದನ್ನೂ ಓದಿ: ಲವ್‌ ಹೆಸರಿನಲ್ಲಿ ಬಸ್‌ನಲ್ಲೇ ಲವರ್ಸ್‌ ಕಾಮದಾಟ..! ವಿಡಿಯೋ ವೈರಲ್‌..

ಆಹಾರದಲ್ಲಿ ಜೀವಂತ ಇಲಿ ಪತ್ತೆ!

ವಿಮಾನ ಸಿಬ್ಬಂದಿಯ ಸುರಕ್ಷತೆಯನ್ನು ಪರಿಗಣಿಸಿ ತಕ್ಷಣವೇ ವಿಮಾನವನ್ನು ಡೆನ್ಮಾರ್ಕ್ ರಾಜಧಾನಿ ಕೋಪನ್ ಹ್ಯಾಗನ್ ಕಡೆಗೆ ತಿರುಗಿಸಲು ನಿರ್ಧರಿಸಲಾಯಿತು. ಘಟನೆಯ ನಂತರ SAS ಪ್ರಯಾಣಿಕ ವಿಮಾನವು ತುರ್ತು ಲ್ಯಾಂಡಿಂಗ್ ಮಾಡಿ ಕೋಪನ್ ಹ್ಯಾಗನ್ ತಲುಪಿತು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ʼನೀವು ನಂಬುತ್ತಿರೋ ಅಥವಾ ಬಿಡುತ್ತೀರೋ..! ನನ್ನ ಪಕ್ಕದಲ್ಲಿದ್ದ ಮಹಿಳೆಯೊಬ್ಬರಿಗೆ ವಿಮಾನದಲ್ಲಿ ನೀಡಿದ ಆಹಾರದಲ್ಲಿ ಜೀವಂತ ಇಲಿ ಪತ್ತೆಯಾಗಿದೆ. ಆಹಾರದ ಪ್ಯಾಕೆಟ್‌ ಓಪನ್‌ ಮಾಡಿದ ಮೇಲೆ ಜೀವಂತವಿದ್ದ ಇಲಿ ಅದರಿಂದ ಹೊರಜಿಗಿದಿದೆ. ಇದರಿಂದ ಕೆಲಕಾಲ ವಿಮಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತುʼ ಅಂತಾ ಹೇಳಿಕೊಂಡಿದ್ದಾರೆ. 

ಲ್ಯಾಂಡಿಂಗ್ ಏಕೆ ಮಾಡಲಾಯಿತು?

ಸ್ಕ್ಯಾಂಡಿನೇವಿಯನ್ ಏರ್ಲೈನ್ಸ್ ಈ ಲ್ಯಾಂಡಿಂಗ್ ಅನ್ನು ಖಚಿತಪಡಿಸಿದೆ, ಆದರೆ ಇದನ್ನು ವೈದ್ಯಕೀಯ ತುರ್ತುಸ್ಥಿತಿ ಎಂದು ವಿವರಿಸಿದೆ. ಇಲಿಯು ಪ್ರಯಾಣಿಕರ ಆಹಾರದಲ್ಲಿ ಪತ್ತೆಯಾದ ನಂತರ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಸ್ಕ್ಯಾಂಡಿನೇವಿಯನ್ ಏರ್ಲೈನ್ಸ್ ಹೇಳಿದೆ. ನಾರ್ವೆಯ ರಾಜಧಾನಿ ಓಸ್ಲೋದಿಂದ ಸ್ಪೇನ್‌ನ ಮಲಗಾ ನಗರಕ್ಕೆ ಹಾರುತ್ತಿದ್ದ ವಿಮಾನವು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಮೂರು ದಿನಗಳ ಕಾಲ ಅಮೆರಿಕಾ ಪ್ರವಾಸ

ಏರ್ಲೈನ್ಸ್ ಕ್ಷಮೆಯಾಚನೆ

ವಿಮಾನಗಳಲ್ಲಿ ಸಾಮಾನ್ಯವಾಗಿ ಇಲಿಗಳ ಬಗ್ಗೆ ಕಟ್ಟುನಿಟ್ಟಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಇಲಿಗಳು ವಿದ್ಯುತ್ ತಂತಿಗಳನ್ನು ತಿಂದುಹಾಕುತ್ತದೆ. ಇಂದರಿಂದ ಅನೇಕ ಬಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಹೀಗಾಗಿ ಅನೇಕ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ವಿಮಾನದಿಂದ ಉಂಟಾದ ಈ ಅಡಚನೆಗೆ ವಿಮಾನಯಾನ ಸಂಸ್ಥೆಯೂ ಕ್ಷಮೆಯಾಚಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News