ಇಂದಿನಿಂದ ಭಾರತದಲ್ಲಿ ಐಫೋನ್ 16 ಮಾರಾಟ ಪ್ರಾರಂಭವಾಗುತ್ತದೆ. ಮೊದಲ ದಿನವೇ ಕಡಿಮೆ ಬೆಲೆಯಲ್ಲಿ ದುಬಾರಿ ಫೋನ್ ಖರೀದಿ ಮಾಡುವ ಅವಕಾಶ ಸಿಗಲಿದೆ.
ಬೆಂಗಳೂರು : Appleನ iPhone 16 ಸರಣಿಯು ಬಿಡುಗಡೆಯಾದ 2 ವಾರಗಳ ನಂತರ ಈಗ ಮಾರಾಟಕ್ಕೆ ಸಿದ್ಧವಾಗಿದೆ.ಸೆಪ್ಟೆಂಬರ್ 9 ರಂದು ಈ ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ.ಈ ಸರಣಿಯಲ್ಲಿ 4 ಫೋನ್ಗಳನ್ನು ಮಾರುಕಟ್ಟೆಗೆ ಬಿಡಲಾಗಿದೆ.iPhone 16, iPhone 16 Plus, iPhone 16 Pro ಮತ್ತು iPhone 16 Pro Max.ಈ ಸರಣಿಯ ಬೆಲೆ, ವೈಶಿಷ್ಟ್ಯಗಳು, ರಿಯಾಯಿತಿಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಭಾರತದಲ್ಲಿ ಇಂದು ಐಫೋನ್ 16 ಮಾರಾಟ ಪ್ರಾರಂಭವಾಗುತ್ತದೆ. ಈ ಫೋನ್ಗಳನ್ನು Apple ಸ್ಟೋರ್ಗಳಿಂದ ಅಥವಾ Amazon, Flipkart, Croma ಮುಂತಾದ ಸ್ಟೋರ್ಗಳಿಂದ ಖರೀದಿಸಬಹುದು.
ಭಾರತದಲ್ಲಿ, iPhone 16 ಬೆಲೆ 79,900 ರೂ. iPhone 16 Plus ಬೆಲೆ 89,900 ರೂಪಾಯಿ, iPhone 16 Pro ಬೆಲೆ 1,19,900 ರೂ.ಗಳಿಂದ ಪ್ರಾರಂಭವಾಗುತ್ತದೆ.iPhone 16 Pro Max ಬೆಲೆ 1,44,900 ರೂ.ಗೆ ಲಭ್ಯವಿದೆ. ಆದರೆ ಈ ಫೋನ್ಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.
iPhone 16 ಅನ್ನು ಖರೀದಿಸಲು ಅಮೆರಿಕನ್ ಎಕ್ಸ್ಪ್ರೆಸ್,ಆಕ್ಸಿಸ್ ಬ್ಯಾಂಕ್ ಮತ್ತು ICICI ಬ್ಯಾಂಕ್ ಕಾರ್ಡ್ ಬಳಸಿದರೆ 5000 ರೂ.ವರೆಗಿನ ತ್ವರಿತ ರಿಯಾಯಿತಿ ಸಿಗುವುದು. ಹಳೆಯ ಐಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೆಚ್ಚಿನ ರಿಯಾಯಿತಿ ಪಡೆಯಬಹುದು. ಹಳೆಯ iPhone 13ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ 25,000 ವರೆಗೆ ರಿಯಾಯಿತಿಯನ್ನು ಪಡೆಯಬಹುದು.ಹಳೆಯ ಫೋನ್ಗಳನ್ನು ವಿನಿಮಯ ಮಾಡಿಕೊಳ್ಳಲು ಆಪಲ್ 4000 ರಿಂದ 67,500 ರವರೆಗೆ ರಿಯಾಯಿತಿ ನೀಡುತ್ತಿದೆ.
ಈ ಎಲ್ಲಾ ರಿಯಾಯಿತಿಯನ್ನು ಸೇರಿಸಿದರೆ 72,500 ರೂಪಾಯಿ ಡಿಸ್ಕೌಂಟ್ ಸಿಗುತ್ತದೆ. ಅಂದರೆ ಈ ರಿಯಾಯಿತಿ ಪಡೆಯುವುದು ಸಾಧ್ಯವಾದರೆ iPhone 16 ಬೆಲೆ 6, 500 ರಾದರೆ iPhone 16 Plus ಬೆಲೆ 17,400 ಆಗುವುದು.
ಇಲ್ಲಿ ನೀವು ಎಕ್ಸ್ಚೇಂಜ್ ಮಾಡುವ ಫೋನ್ ಉತ್ತಮ ಸ್ಥಿತಿಯಲ್ಲಿದ್ದು ಸಂಪೂರ್ಣ ಡಿಸ್ಕೌಂಟ್ ನಿಮಗೆ ಸಿಕ್ಕಿದರೆ ಮಾತ್ರ iPhone 16 ಸರಣಿಯ ಫೋನ್ ಗಳು ಕಡಿಮೆ ಬೆಲೆಗೆ ಸಿಗುತ್ತದೆ. ಇಲ್ಲವಾದರೆ ಅದರ ನಿಜ ಬೆಲೆಯನ್ನು ಕೊಟ್ಟೇ ಖರೀದಿಸಬೇಕಾಗುತ್ತದೆ.