ಮಾತೆ ಮಾಣಿಕೇಶ್ವರಿ ಇನ್ನಿಲ್ಲ: ಭಕ್ತ ಸಮೂಹ ಸಂತಾಪ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಗುಂದಿಯ ಮಾತೇ ಮಾಣಿಕ್ಯೇಶ್ವರಿ ಅವರು, ಲಿಂಗಕ್ಯರಾಗಿದ್ದಾರೆ. ರಾಜ್ಯದೆಲ್ಲೆಡೆ ಭಕ್ತ ಸಮೂಹವನ್ನು ಹೊಂದಿದ್ದ ಅಮ್ಮ ನವರ ನಿಧನಕ್ಕೆ ಭಕ್ತರು ತೀವ್ರ ಸಂತಾಪ ಸೂಚಿಸಿದ್ದಾರೆ.

Last Updated : Mar 7, 2020, 11:52 PM IST
ಮಾತೆ ಮಾಣಿಕೇಶ್ವರಿ ಇನ್ನಿಲ್ಲ: ಭಕ್ತ ಸಮೂಹ ಸಂತಾಪ title=
Photo courtesy: facebook

ಬೆಂಗಳೂರು: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಗುಂದಿಯ ಮಾತೇ ಮಾಣಿಕ್ಯೇಶ್ವರಿ ಅವರು, ಲಿಂಗಕ್ಯರಾಗಿದ್ದಾರೆ. ರಾಜ್ಯದೆಲ್ಲೆಡೆ ಭಕ್ತ ಸಮೂಹವನ್ನು ಹೊಂದಿದ್ದ ಅಮ್ಮ ನವರ ನಿಧನಕ್ಕೆ ಭಕ್ತರು ತೀವ್ರ ಸಂತಾಪ ಸೂಚಿಸಿದ್ದಾರೆ.ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಅವರು ಅಮ್ಮನವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಗುಂದಿಯ ಮಾತೇ ಮಾಣಿಕ್ಯೇಶ್ವರಿ ಅವರು, ಲಿಂಗಕ್ಯರಾಗಿದ್ದು, ತೀವ್ರ ಸಂತಾಪ‌ ಸೂಚಿಸುತ್ತೇನೆ.ಅವರು ನಡೆದಾಡುವ ದೇವರೆಂದು ಮಹಾಯೋಗಿನಿ ಎಂದು ಹೆಸರುವಾಸಿಯಾಗಿದ್ದರು. ಕರ್ನಾಟಕ, ಆಂಧ್ರಪ್ರದೇಶ,ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹವನ್ನು ಹೊಂದಿದ್ದಾರೆ.

ಪ್ರತಿ ಶಿವರಾತ್ರಿಯಂದು ವಿಶೇಷ  ಸಂದೇಶ ನೀಡುತ್ತಿದ್ದರು.ಅವರ ಅಗಲಿಕೆಯಿಂದ ಈ ನಾಲ್ಕು ರಾಜ್ಯಗಳಲ್ಲಿ  ಲಕ್ಷಾಂತರ ಭಕ್ತ ಸಮೂಹವು ದುಃಖದ ಮಡುವಿನಲ್ಲಿದ್ದು, ತುಂಬಲಾರದ ನಷ್ಟ ಉಂಟಾಗಿದೆ. ನಾಲ್ಕೂ ರಾಜ್ಯಗಳ ಭಕ್ತ ಸಮೂಹಕ್ಕೆ , ಅನುಯಾಯಿಗಳಿಗೆ  ಅವರ ಅಗಲಿಕೆಯ ನೋವನ್ನು‌ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ‌ ಪ್ರಾರ್ಥಿಸುತ್ತೇನೆ.

 

 

Trending News